ಪ್ರೊ ಕಬಡ್ಡಿ 2019 : ಚಾಂಪಿಯನ್ನರಿಗೆ 3 ಕೋಟಿ!

Published : Oct 13, 2019, 10:30 AM IST
ಪ್ರೊ ಕಬಡ್ಡಿ 2019 : ಚಾಂಪಿಯನ್ನರಿಗೆ 3 ಕೋಟಿ!

ಸಾರಾಂಶ

2019ರ ಪ್ರೋ ಕಬಡ್ಡಿ ಪ್ಲೇ ಆಫ್ ಪಂದ್ಯಗಳು ಅ.14 ರಿಂದ ಆರಂಭವಾಗಲಿದೆ. ಈ ಬಾರಿ ಯಾರು ಚಾಂಪಿಯನ್ ಆಗ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. 2019ರ ಪ್ರೊ ಕಬಡ್ಡಿ ಪ್ರಶಸ್ತಿ ಮೊತ್ತ ಬರೋಬ್ಬರಿ 8 ಕೋಟಿ ರೂಪಾಯಿ ತಲುಪಿದೆ.

ನವ​ದೆ​ಹ​ಲಿ(ಅ.13):ಪ್ರೊ ಕಬಡ್ಡಿ ಟೂರ್ನಿ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದು, ನಾಳೆಯಿಂದ(ಅ.14) ಪ್ಲೇ ಆಫ್ ಪಂದ್ಯ ನಡೆಯಲಿದೆ. ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಹಾಗೂ ಯುಪಿ ಯೋಧ ಮುಖಾಮುಖಿಯಾಗುತ್ತಿದೆ. ಈ ಬಾರಿ ಯಾರು ಚಾಂಪಿಯನ್ ಆಗ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ವಿಶೇಷ ಅಂದರೆ 2019ರ ಪ್ರೋ ಕಬಡ್ಡಿ ಚಾಂಪಿಯನ್ ತಂಡ ಬರೋಬ್ಬರಿ 3 ಕೋಟಿ ರೂಪಾಯಿ ಬಾಚಿಕೊಳ್ಳಲಿದೆ.

ಇದನ್ನೂ ಓದಿ: ಹರ್ಯಾಣ ಮಣಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಬೆಂಗಳೂರು ಬುಲ್ಸ್!

ಪ್ರೊ ಕಬಡ್ಡಿ 7ನೇ ಆವೃತ್ತಿ ಫೈನಲ್‌ ಅ.19ರಂದು ಅಹ್ಮ​ದಾ​ಬಾ​ದ್‌​ನಲ್ಲಿ ನಡೆ​ಯ​ಲಿದ್ದು, ಚಾಂಪಿ​ಯನ್‌ ತಂಡ 3 ಕೋಟಿ ರೂಪಾಯಿ ಬಾಚಿ​ಕೊ​ಳ್ಳ​ಲಿದೆ. ರನ್ನ​ರ್‌​ಅಪ್‌ ತಂಡ 1.8 ಕೋಟಿ ರೂಪಾಯಿ ಬಹು​ಮಾನ ಮೊತ್ತ ಪಡೆ​ಯ​ಲಿದೆ. 3ನೇ ಹಾಗೂ 4ನೇ ಸ್ಥಾನ ಸಂಪಾ​ದಿ​ಸುವ ತಂಡ​ಗ​ಳು ತಲಾ 90 ಲಕ್ಷ ರೂಪಾಯಿ ಬಹು​ಮಾನ ಗೆಲ್ಲ​ಲಿವೆ. 

ಇದನ್ನೂ ಓದಿ: ಒಂದೇ ರೈಡ್‌ನಲ್ಲಿ ಪ್ರದೀಪ್ ನರ್ವಾಲ್‌ಗೆ 6 ಅಂಕ..!

5ನೇ ಹಾಗೂ 6ನೇ ಸ್ಥಾನ ಸಂಪಾ​ದಿ​ಸುವ ತಂಡ​ಗಳು ತಲಾ 45 ಲಕ್ಷ ರೂಪಾಯಿ ಬಹು​ಮಾನ ಪಡೆ​ದು​ಕೊ​ಳ್ಳ​ಲಿವೆ. ಡೆಲ್ಲಿ, ಬೆಂಗಾಲ್‌, ಹರ್ಯಾಣ, ಯು.ಪಿ ಯೋಧಾ, ಮುಂಬಾ ಹಾಗೂ ಬೆಂಗ​ಳೂರು ತಂಡ​ಗಳು ಪ್ರೊ ಕಬಡ್ಡಿ 7ನೇ ಆವೃ​ತ್ತಿ ಪ್ಲೇ ಆಫ್‌​ ಸೆಣ​ಸ​ಲಿ​ವೆ. ಯಾವುದೇ ತಂಡ​ವಾದ​ರೂ ಕನಿ​ಷ್ಠ​ ಪಕ್ಷ 45 ಲಕ್ಷ ರೂಪಾಯಿ ಮೊತ್ತ ಗೆಲ್ಲು​ವುದು ಖಚಿ​ತ. 50 ಲಕ್ಷ ರೂಪಾಯಿ ವೈಯ​ಕ್ತಿಕ ಪ್ರಶ​ಸ್ತಿ​ ನೀಡು​ತ್ತಿದ್ದು, ಒಟ್ಟಾರೆ ಪ್ರಶಸ್ತಿ ಮೊತ್ತ 8 ಕೋಟಿ ರೂಪಾಯಿ ತಲು​ಪಿ​ದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!