ರಾಷ್ಟ್ರೀಯ ಅಥ್ಲೆಟಿಕ್ಸ್ : ದಾಖಲೆ ಬರೆದ ಅಥ್ಲೀಟ್ ದ್ಯುತಿ ಚಾಂದ್

By Kannadaprabha News  |  First Published Oct 12, 2019, 9:49 AM IST

ಭಾರತದ ಸ್ಟಾರ್ ಅಥ್ಲೀಟ್ ದ್ಯುತಿ ಚಾಂದ್ ರಾಷ್ಟ್ರೀಯ ಅಥ್ಲೀಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದರ ಜತೆಗೆ ಟೋಕಿಯೋ ಒಲಿಂಪಿಕ್ಸ್‌ ಕೂಟಕ್ಕೆ ಅರ್ಹತೆ ಗಿಟ್ಟಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ರಾಂಚಿ(ಅ.12): ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ನಲ್ಲಿ ದ್ಯುತಿ ಚಾಂದ್ 100 ಮೀ. ಓಟದಲ್ಲಿ ತಮ್ಮದೇ ದಾಖಲೆ ಮುರಿದು ಚಿನ್ನದ ಪದಕ ಗೆದ್ದಿದ್ದಾರೆ. 

ವಿಶ್ವ ಅಥ್ಲೆ​ಟಿಕ್ಸ್‌ನಲ್ಲಿ ಓಡಲು ರೆಡಿಯಾದ ದ್ಯುತಿ ಚಾಂದ್‌

Correction: it was Semi-final 1

— Athletics Federation of India (@afiindia)

Latest Videos

undefined

ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್

ಶುಕ್ರವಾರ ನಡೆದ 100 ಮೀ. ಓಟದ ಸೆಮೀಸ್ ಹಂತದಲ್ಲಿ ದ್ಯುತಿ 11.22 ಸೆ.ಗಳಲ್ಲಿ ಗುರಿ ಮುಟ್ಟಿ ದಾಖಲೆ ಬರೆದಿದ್ದರು. ಫೈನಲ್ ನಲ್ಲಿ 11.25 ಸೆ.ಗಳಲ್ಲಿ ಓಟ ಪೂರ್ಣಗೊಳಿಸಿ ಚಿನ್ನಕ್ಕೆ ಮುತ್ತಿಟ್ಟರು.

ನನ್ನ ಬಯೋಪಿಕ್‌ನಲ್ಲಿ ಕಂಗನಾ ನಟಿಸಲಿ: ದ್ಯುತಿ ಚಾಂದ್‌  

Today i won 100mts gold medal with breaking own 100 metres national sprint record with a timing of 11.22 seconds at 59th National Open Athletics Championships 2019 in Ranchi. pic.twitter.com/TkGWxkiSvJ

— Dutee Chand (@DuteeChand)

ದ್ಯುತಿ 2 ಓಟಗಳಲ್ಲಿ ಸ್ಪರ್ಧಿಸಿದ್ದು, ಎರಡರಲ್ಲೂ ಹಿಂದಿನ ದಾಖಲೆ (11.26 ಸೆಕೆಂಡ್)ಗಿಂತ ಕಡಿಮೆ ಸಮಯದಲ್ಲಿ ಓಟ ಪೂರ್ಣಗೊಳಿಸಿದರು. 2020ರ ಟೋಕಿಯೋ ಒಲಿಂಪಿಕ್ಸ್ ಅರ್ಹತೆಗಾಗಿ 11.15 ಸೆ.ಗಳಲ್ಲಿ ಗುರಿ ಮುಟ್ಟುವ ಸವಾಲಿದೆ

click me!