Pro Kabaddi League : ಗೆಲುವಿನ ಹಳಿಗೆ ಬಂದ ಬೆಂಗಳೂರು ಬುಲ್ಸ್!

By Suvarna NewsFirst Published Jan 23, 2022, 9:50 PM IST
Highlights

ತೆಲುಗು ಟೈಟಾನ್ಸ್ ವಿರುದ್ಧ ಗೆಲುವು ಕಂಡ ಬುಲ್ಸ್
ಕಳೆದ ಮೂರು ಪಂದ್ಯಗಳಲ್ಲಿ ಸೋಲಿನ ಫಲಿತಾಂಶ ಕಂಡಿತ್ತು ಬೆಂಗಳೂರು
ಗೆಲುವಿನಲ್ಲಿ ಮಿಂಚಿದ ನಾಯಕ ಪವನ್ ಕುಮಾರ್ ಶೇರಾವತ್
 

ಬೆಂಗಳೂರು (ಜ. 23): ಸತತ ಮೂರು ಸೋಲುಗಳ ನಿರಾಸೆಯಲ್ಲಿದ್ದ ಬೆಂಗಳೂರು ಬುಲ್ಸ್ (Bengaluru Bulls ) ತಂಡ ಕೊನೆಗೂ ಗೆಲುವಿನ ಟ್ರ್ಯಾಕ್ ಗೆ ಬರಲು ಯಶಸ್ವಿಯಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸುವ ಮೂಲಕ ಎಂಟನೇ ಅವೃತ್ತಿಯ ಪ್ರೊ ಕಬಡ್ಡಿ ಲೀಗ್‌ ನಲ್ಲಿ (Pro Kabaddi League Season 8) ತನ್ನ 8ನೇ ಗೆಲುವು ಸಾಧಿಸಿದ್ದು ಮಾತ್ರವಲ್ಲದೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಯಶ ಕಂಡಿತು. ಇದಕ್ಕೂ ಮುನ್ನ ನಡೆದ ದಿನದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ (Haryana Steelers) ತಂಡ ಯುಪಿ ಯೋಧಾ (UP Yoddha)ತಂಡವನ್ನು ಭರ್ಜರಿಯಾಗಿ ಮಣಿಸುವಲ್ಲಿ ಯಶ ಕಂಡಿತು.

ಗೆಲುವು ಸಾಧಿಸಲೇಬೇಕು ಎನ್ನುವ ನಿಟ್ಟಿನಲ್ಲಿ ಕಣಕ್ಕಿಳಿದಿದ್ದ ಬೆಂಗಳೂರು ಬುಲ್ಸ್ ತಂಡ ಮೊದಲ ನಿಮಿಷದಿಂದಲೇ ತನ್ನ ಘಾತಕ ದಾಳಿ ನಡೆಸಿತು. ಪ್ರತಿ ಹಂತದಲ್ಲೂ ಅಂಕಗಳಿಕೆಯಲ್ಲಿ ಪ್ರಗತಿ ಕಾಣುತ್ತಾ ಸಾಗಿದ ಬೆಂಗಳೂರು ಬುಲ್ಸ್ 36-31 ರಿಂದ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು. ಬುಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ನಾಯಕ ಪವನ್ ಕುಮಾರ್ ಶೇರಾವತ್ ( Pawan Sehrawat) 12 ಅಂಕ ಸಂಪಾದನೆ ಮಾಡಿದರೆ, ಇನ್ನೊಬ್ಬ ರೈಡರ್ ಭರತ್ ರಿಂದಲೂ (Bharat Naresh) ಅವರಿಗೆ ಉತ್ತಮ ಸಾಥ್ ಸಿಕ್ಕಿತು.

ಭರತ್ 7 ಅಂಕ ಸಂಪಾದನೆ ಮಾಡಿ ಗಮನಸೆಳೆದರು. ಡಿಫೆಂಡರ್ ಗಳಾದ ಸೌರಭ್ ನಂದಲ್ (Sourabh Nandal) ಹಾಗೂ ಅಮಾನ್ (Aman) ಕೂಡ ತಲಾ 4 ಅಂಕ ಸಂಪಾದನೆ ಮಾಡುವ ಮೂಲಕ ತೆಲುಗು ಟೈಟಾನ್ಸ್ ತಂಡದ ರೈಡರ್ ಗಳಿಗೆ ಕಡಿವಾಣ ಹಾಕಿದರು. ಈ ಗೆಲುವಿನೊಂದಿಗೆ 14 ಪಂದ್ಯಗಳಲ್ಲಿ 8 ಗೆಲುವು, 5 ಸೋಲು ಹಾಗೂ 1 ಟೈ ಫಲಿತಾಂಶ ಕಂಡಿರುವ ಬೆಂಗಳೂರು ಬುಲ್ಸ್ ತಂಡ 46 ಅಂಕ ಸಂಪಾದನೆಯೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದನೆ ಮಾಡಿತು. ಇನ್ನೊಂದೆಡೆ ತೆಲುಗು ಟೈಟಾನ್ಸ್ (Telugu Titans) ತಂಡ ಕೇವಲ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿಯೇ ಉಳಿದಿದೆ.
 

.: Har jeet chalti rahe, lekin humara ilaaka yehi rahega! 😌🔝

Check out the updated points table after Match 74 of ! 🔥

Pick a team that you think will make it to the top-6! 💬 pic.twitter.com/XXn7hiOckC

— ProKabaddi (@ProKabaddi)


ಪವನ್ ಶೇರಾವತ್ ಪಂದ್ಯದಲ್ಲಿ ಸಂಪಾದನೆ ಮಾಡಿದ 12 ಅಂಕಗಳ ಪೈಕಿ 10 ಅಂಕಗಳು ಮೊದಲ ಅವಧಿಯ ಆಟದಲ್ಲಿಯೇ ಬಂದಿದ್ದವು. 2ನೇ ಅವಧಿಯ ಆಟದಲ್ಲಿ ಎಚ್ಚರಿಕೆಯಿಂದ ದಾಳಿ ಮಾಡಲು ಆರಂಭಿಸುವ ಮೂಲಕ ಗೆಲುವಿಗೆ ಕಾರಣರಾದರು. ತೆಲುಗು ಟೈಟಾನ್ಸ್ ತಂಡದ ರಜನೀಶ್ ಇಲ್ಲದೆ ಕಣಕ್ಕಿಳಿದಿದ್ದು ಪ್ರದರ್ಶನದ ಮೇಲೆ ಪರಿಣಾಮ ಬೀರಿತು. ಇದರಿಂದಾಗಿ ಆರಂಭದಲ್ಲಿಯೇ ಅಬ್ಬರಿಸಿದ ಬೆಂಗಳೂರು ಬುಲ್ಸ್  ಕೇವಲ 10 ನಿಮಿಷದಲ್ಲಿಯೇ ತೆಲುಗು ಟೈಟಾನ್ಸ್ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಪವನ್ ಶೇರಾವತ್ ಗೆ ಉತ್ತಮ ಸಾಥ್ ನೀಡಿದ ಭರತ್, ತೆಲುಗು ತಂಡದ ಡಿಫೆನ್ಸ್ ವಿಭಾಗದ ಮೇಲೆ ನಿರಂತರವಾಗಿ ದಾಳಿ ನಡೆಸಿದರು. ಮೊದಲ ಅವಧಿಯ ಆಟದಲ್ಲಿಯೇ 11 ಅಂಕಗಳ ಮುನ್ನಡೆ ಕಂಡುಕೊಳ್ಳುವ ಮೂಲಕ ಬುಲ್ಸ್ ಭರ್ಜರಿಯಾಗಿ ಆಟವಾಡಿತ್ತು.

SA vs India 3rd ODI : ದೀಪಕ್ ಚಹರ್ ಕ್ಲಾಸಿಕ್ ಇನ್ನಿಂಗ್ಸ್ ವ್ಯರ್ಥ, ಕೇಪ್ ಟೌನ್ ನಲ್ಲೂ ಭಾರತಕ್ಕೆ ಸೋಲು
2ನೇ ನಿಮಿಷದ ಆಟದ ಆರಂಭಿಕ ನಿಮಿಷಗಳಲ್ಲಿ ತೆಲುಗು ತಂಡ ಪೈಪೋಟಿ ನೀಡುವ ಪ್ರಯತ್ನ ಮಾಡಿತು. ಬುಲ್ಸ್ ಇನ್ನಷ್ಟು ದೊಡ್ಡ ಮುನ್ನಡೆ ಪಡೆಯದೇ ಇರುವಂತೆ ತಡೆಯಲು ಕೂಡ ಯಶಸ್ವಿಯಾಗಿತ್ತು. ಆಕಾಶ್ ಚೌಧರಿ ಹಾಗೂ ಸುರೀಂದರ್ ಬೆನಿವಾಲ್ ಟ್ಯಾಕಲ್ ಪಾಯಿಂಟ್ ಗಳ ಮೂಲಕ ಮಿಂಚಿದರೆ, ಅಂಕಿತ್ ಬೆನಿವಾಲ್ ಮತ್ತು ಟಿ ಆದರ್ಶ್ ರೈಡಿಂಗ್ ಮೂಲಕ ಅಂಕ ಜಯಿಸಿದರು. ಕೊನೆ 10 ನಿಮಿಷದ ಆಟದ ವೇಳೆ ಬುಲ್ಸ್ 8 ಅಂಕಗಳ ಮುನ್ನಡೆಯಲ್ಲಿದ್ದರೆ, ಕೋರ್ಟ್ ನಲ್ಲಿ ಕೇವಲ 3 ಮಂದಿ ಆಟಗಾರರಿದ್ದರು. ಪಂದ್ಯ ಮುಗಿಯಲು 7 ನಿಮಿಷಗಳಿರುವಾಗ ಬುಲ್ಸ್ ತಂಡವನ್ನು ಅಲೌಟ್ ಮಾಡುವ ಮೂಲಕ ಹಿನ್ನಡೆಯನ್ನು 5 ಅಂಕಕ್ಕೆ ತಗ್ಗಿಸಿಕೊಂಡಿತ್ತು. ಈ ಹಂತದಲ್ಲಿ ಚಾಣಾಕ್ಷ ಆಟವಾಡಿದ ಬೆಂಗಳೂರು ಬುಲ್ಸ್ ಹೆಚ್ಚಿನ ಅಪಾಯಕ್ಕೆ ಇಳಿಯದೆ ಮುನ್ನಡೆಯನ್ನು ಉಳಿಸಿಕೊಂಡು ಪಂದ್ಯದಲ್ಲಿ ಗೆಲುವು ಸಾಧಿಸಿತು.

West Indies Tour Of India : ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ಮಾಡಿದ ಬಿಸಿಸಿಐ!
ಹರಿಯಾಣ ಸ್ಟೀಲರ್ಸ್ ಗೆ ಗೆಲುವು: ದಿನದ ಮೊದಲ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ ಕೇವಲ 1 ಅಂಕದಿಂದ ಯುಪಿ ಯೋಧಾ ತಂಡವನ್ನು ಮಣಿಸಿತು. ರೈಡರ್ ಹಾಗೂ ಡಿಫೆಂಡರ್ ಗಳ ಸಂಘಟಿತ ಪ್ರಯತ್ನದಿಂದ 36-35 ಅಂಕಗಳಿಂದ ಬಲಿಷ್ಠ ಯುಪಿ ಯೋಧಾ ತಂಡವನ್ನು ಸೋಲಿಸಿತು.

click me!