Pro Kabaddi League : ಪುಣೇರಿ ವಿರುದ್ಧವೂ ಸೋಲು, ಹ್ಯಾಟ್ರಿಕ್ ಸೋಲಿನ ನಿರಾಸೆ ಎದುರಿಸಿದ ಬುಲ್ಸ್

By Suvarna News  |  First Published Jan 22, 2022, 9:36 PM IST

ವೀರೋಚಿತ ಸೋಲು ಕಂಡ ಬೆಂಗಳೂರು ಬುಲ್ಸ್
ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದ ಬುಲ್ಸ್
ಪಿಕೆಎಲ್ ನಲ್ಲಿ 5ನೇ ಸೋಲು ಕಂಡ ಪವನ್ ಶೇರಾವತ್ ಟೀಮ್


ಬೆಂಗಳೂರು (ಜ. 22): ಪ್ರಮುಖ ಸಂದರ್ಭದಲ್ಲಿ ನಾಯಕ ಪವನ್ ಕುಮಾರ್ ಶೇರಾವತ್ (Pawan Sehrawat ) ಅವರನ್ನು ತಪ್ಪಿಸಿಕೊಂಡ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ 70ನೇ ಪಂದ್ಯದಲ್ಲಿ (Pro Kabaddi League Season 8 )ಪುಣೇರಿ ಪಲ್ಟನ್ಸ್ (Puneri Paltan ) ವಿರುದ್ಧ ಸೋಲು ಕಂಡಿದೆ. ಶನಿವಾರ ನಡೆದ ರೋಚಕ ಕದನದಲ್ಲಿ ಬೆಂಗಳೂರು ಬುಲ್ಸ್ (Bengaluru Bulls)ತಂಡ ಕೇವಲ 2 ಅಂಕಗಳಿಂದ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಪುಣೇರಿ ಪಲ್ಟನ್ ತಂಡಕ್ಕೆ ಶರಣಾಯಿತು. 

ಈ ಸೋಲಿನೊಂದಿಗೆ 13 ಪಂದ್ಯಗಳಲ್ಲಿ 7 ಗೆಲುವು ಹಾಗೂ 5 ಸೋಲು ಕಂಡಂತಾಗಿದೆ. ಇದರಲ್ಲಿ ಮೂರು ಸೋಲುಗಳು ಕಳೆದ ಮೂರು ಪಂದ್ಯಗಳಲ್ಲಿಯೇ ಬಂದಿವೆ. ಜನವರಿ 16 ರಂದು ಪಟನಾ ಪೈರೇಟ್ಸ್ ವಿರುದ್ಧ 7 ಅಂಕಗಳ ಸೋಲು ಕಂಡಿದ್ದ ಬುಲ್ಸ್ ಆ ಬಳಿಕ ಬೆಂಗಾಲ್ ವಾರಿಯರ್ಸ್ ವಿರುದ್ಧ ಒಂದು ಅಂಕಗಳ ವೀರೋಚಿತ ಸೋಲು ಕಂಡಿತ್ತು. 1 ಪಂದ್ಯ ಟೈ ಫಲಿತಾಂಶ ಕಂಡಿದೆ. ಒಟ್ಟಾರೆ 48 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ 2ನೇ ಸ್ಥಾನಕ್ಕೆ ಕುಸಿದೆ.

ಪಂದ್ಯದ ಕೊನೆಯ ಹಂತದಲ್ಲಿ ಪುಣೇರಿ ಪಲ್ಟನ್ ತಂಡ ಮೂರು ಅಂಕಗಳಿಂದ ಮುನ್ನಡೆಯಲ್ಲಿತ್ತು. ಈ ಹಂತದಲ್ಲಿ ಪಂದ್ಯದಲ್ಲಿ ಗೆಲ್ಲುವ ಅವಕಾಶ ಎರಡೂ ತಂಡಕ್ಕಿದ್ದವು. ಆದರೆ, ಪ್ರಮುಖ ಸಮಯದಲ್ಲಿ ನಾಯಕ ಹಾಗೂ ಅಗ್ರ ರೈಡರ್ ಪವನ್ ಕುಮಾರ್ ಶೇರಾವತ್ ಕೋರ್ಟ್ ನಿಂದ ಹೊರಗೆ ಇದ್ದಿದ್ದು ತಂಡದ ಸೋಲಿಗೆ ಕಾರಣವಾಯಿತು. ಕುತೂಹಲಕ್ಕೆ ಕಾರಣವಾಗಿದ್ದ ಅಂತಿಮ ನಿಮಿಷಗಳಲ್ಲಿ ಬೆಂಗಳೂರು ತಂಡ ಹೋರಾಟ ನಡೆಸಿದರೂ 35-37 ರಿಂದ ಪುಣೇರಿ ಪಲ್ಟನ್ ತಂಡಕ್ಕೆ ಶರಣಾಗಿ ನಿರಾಸೆ ಕಂಡಿತು. ಇದು ಬೆಂಗಳೂರು ತಂಡಕ್ಕೆ ಪ್ರೊ ಕಬಡ್ಡಿ ಲೀಗ್ ನ 8ನೇ ಆವೃತ್ತಿಯಲ್ಲಿ ಮೊದಲ ಹ್ಯಾಟ್ರಿಕ್ ಸೋಲು ಎನಿಸಿದೆ.
 

At the top never gone down, Dabangs remain unmatched after triple 😎 and clinch crucial victories tonight to make the playoffs race more exciting 🤩 pic.twitter.com/1enYQMti49

— ProKabaddi (@ProKabaddi)


ಪುಣೇರಿ ಪರವಾಗಿ 13 ಅಂಕಗಳಿಸಿದ ಮೋಹಿತ್ ಗೋಯತ್ (Mohit Goyat )ಗೆಲುವಿನ ರೂವಾರಿ ಎನಿಸಿದರು. ಪಂದ್ಯದ ಆರಂಭದಿಂದಲೂ ಪಂದ್ಯದಲ್ಲಿ ಲಯದಲ್ಲಿದ್ದಂತೆ ಕಾಣದ ಬೆಂಗಳೂರು ಬುಲ್ಸ್ ತಂಡ, ಎದುರಾಳಿ ತಂಡವನ್ನು ಆಲೌಟ್ ಮಾಡುವಲ್ಲಿ ಪರದಾಟ ಮಾಡಿದ್ದು ಸೋಲಿಗೆ ಪ್ರಮುಖ ಕಾರಣವೆನಿಸಿತು. ಇನ್ನೊಂದೆಡೆ ಪುಣೇರಿ ತಂಡದ ಕೋಚ್ ಅನೂಪ್ ಕುಮಾರ್ (Coach Anup Kumar) ಪಂದ್ಯದಲ್ಲಿ ಮೂರು ಯಶಸ್ವಿ ರಿವ್ಯೂಗಳನ್ನು ಮಾಡಿದ್ದರಿಂದ 2 ಅಂಕಗಳ ಗೆಲುವು ಸಾಧಿಸಲು ಕಾರಣವಾಯಿತು. ಮೊದಲ ನಿಮಿಷದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಪುಣೇರಿ ಪಲ್ಟನ್, ಮೋಹಿತ್ ಗೋಯತ್ ಮೂಲಕ ಅತ್ಯುತ್ತಮ ರೇಡ್ ಪಾಯಿಂಟ್ ಗಳನ್ನು ಪಡೆದುಕೊಂಡಿತು. ಮೋಹಿತ್ ಗೆ ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಸಾಥ್ ನೀಡಿದ ಸಂಕೇತ್ ಸಾವಂತ್ ಬುಲ್ಸ್ ರೈಡರ್ ಗಳನ್ನು ಕಟ್ಟಿಹಾಕಿದರು. ಇಲ್ಲಿಯವರೆಗೂ ತಂಡದ ಬಲಾಢ್ಯ ಡಿಫೆನ್ಸ್ ಜೋಡಿಯಾಗಿದ್ದ ಬಲದೇವ್ ಸಿಂಗ್ ಹಾಗೂ ವಿಶಾಲ್ ಭಾರದ್ವಾಜ್ ಅವರನ್ನು ಬದಲಿಸಿ ಈ ಪಂದ್ಯದಲ್ಲಿ ಸೋಮ್ ಬೀರ್ ಹಾಗೂ ಕರಮ್ ವೀರ್ ಜೋಡಿಯನ್ನು ಆಡಿಸಿದ್ದು ಫಲ ನೀಡಿತು.

West Indies Tour Of India : ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ಮಾಡಿದ ಬಿಸಿಸಿಐ!
ರೈಟ್ ಕಾರ್ನರ್ ಸೋಮ್ ಬೀರ್, ಪಲ್ಟಾನ್ ಪರವಾಗಿ ಹೈ 5 ಸಾಧನೆ ಮಾಡಿದರೆ, ಪಲ್ಟಾನ್ ತಂಡದ ರೈಡರ್ ಗಳ ತಪ್ಪುಗಳಿಂದ ಲಾಭ ಪಡೆದುಕೊಂಡ ಬೆಂಗಳೂರು ಬುಲ್ಸ್ ಅಂತಿಮ ಹಂತದಲ್ಲಿ ಹೋರಾಟ ನೀಡಲು ಪ್ರಯತ್ನ ಪಟ್ಟಿತು. ಕೊನೇ ಒಂದು ನಿಮಿಷದ ಆಟವಿರುವಾಗ ಪುಣೆ ತಂಡ ಎರಡು ಅಂಕಗಳ ಮುನ್ನಡೆಯಲ್ಲಿತ್ತು. ಈ ವೇಳೆ ಶುಭಂ ಶೆಲ್ಕೆ ಆಕರ್ಷಕ ಟಚ್ ಪಾಯಿಂಟ್ ಮೂಲಕ ತಂಡದ ಗೆಲುವಿಗೆ ಕಾರಣರಾದರು.

IPL 2022: ನಿಗದಿಗಿಂತ ಒಂದು ವಾರ ಮುಂಚಿತವಾಗಿ ಐಪಿಎಲ್ ಟೂರ್ನಿ ಆರಂಭ..!
ಜೈಪುರ-ತಮಿಳ್ ತಲೈವಾಸ್ ಮತ್ತೆ ಟೈ: ದಿನದ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers ) ಹಾಗೂ ತಮಿಳ್ ತಲೈವಾಸ್ (Tamil Thalaivas)ತಂಡಗಳು 34-34 ಅಂಕಗಳಿಂದ ಟೈ ಸಾಧಿಸಿದವು. ಕೊನೆಯ 6 ಸೆಕೆಂಡ್  ರೈಡ್ ನಲ್ಲಿ ನಿತಿನ್ ರಾವಲ್ ಅಂಕ ಸಂಪಾದಿಸುವಲ್ಲಿ ಯಶ ಕಂಡಿದ್ದರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಅಂಕ ಹಂಚಿಕೊಳ್ಳಲು ಯಶ ಕಂಡಿತು. ಉಭಯ ತಂಡಗಳ ನಡುವಿನ ಲೀಗ್ ನ ಮೊದಲ ಪಂದ್ಯ ಕೂಡ ಟೈ ಆಗಿತ್ತು.

Tap to resize

Latest Videos

click me!