ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರ ರಿಲೀಸ್ ಡೇಟ್‌ ಫಿಕ್ಸ್..!

By Kannadaprabha News  |  First Published Mar 3, 2021, 10:39 AM IST

ಖ್ಯಾತ ಬ್ಯಾಡ್ಮಿಂಟನ್‌ ತಾರೆ, ಒಲಿಂಪಿಕ್ಸ್ ಪದಕ ವಿಜೇತೆ ಸೈನಾ ನೆಹ್ವಾಲ್‌ ಜೀವನಾಧಾರಿತ ಚಿತ್ರ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಮುಂಬೈ(ಮಾ.03): ತಾರಾ ಟೆನಿಸ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಜೀವನಾಧರಿತ ಬಹು ನಿರೀಕ್ಷಿತ್ರ ಚಿತ್ರ ‘ಸೈನಾ’, ಮಾ.26ರಂದು ರಿಲೀಸ್‌ ಆಗಲಿದೆ. 

ಸ್ವತಃ ಸೈನಾ ಚಿತ್ರದ ಪೋಸ್ಟರ್‌ ಅನ್ನು ಮಂಗಳವಾರ ಟ್ವೀಟ್‌ ಮಾಡಿದ್ದಾರೆ. ನಟಿ ಪರಿಣಿತಿ ಚೋಪ್ರಾ, ಸೈನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಗೆ ಮೊದಲೇ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದು, ಅಭಿಮಾನಿಗಳ ಕಾತರ ಹೆಚ್ಚಾಗಿದೆ.

I’m so glad to share a glimpse of my upcoming movie, . Lots of love to the entire team. In cinemas on 26th March. pic.twitter.com/D1verby2Pc

— Saina Nehwal (@NSaina)

Tap to resize

Latest Videos

ಸೈನಾ ನೆಹ್ವಾಲ್‌ ಲುಕ್‌ನಲ್ಲಿ ಪರಿಣೀತಿ; ಮೊದಲ ಕಾಮೆಂಟ್ ಇದು!

ಹಾಕಿ: ಭಾರತ ಮಹಿಳಾ ತಂಡಕ್ಕೆ ಹ್ಯಾಟ್ರಿಕ್‌ ಆಘಾತ

ಡಸೆಲ್ಡಾಫ್‌ರ್‍: ಜರ್ಮನಿ ವಿರುದ್ಧ ಕಳಪೆ ಪ್ರದರ್ಶನ ಮುಂದುವರೆಸಿರುವ ಭಾರತ ಮಹಿಳಾ ಹಾಕಿ ತಂಡ, 3ನೇ ಪಂದ್ಯದಲ್ಲೂ ಜರ್ಮನಿ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಸೋಲುಂಡಿದೆ. 

ಇದರೊಂದಿಗೆ ಜರ್ಮನಿ 4 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 3-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಗುರುವಾರ 4ನೇ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ 0-5 ಅಂತರದಿಂದ ಸೋಲುಂಡಿದ್ದ ಭಾರತ, 2ನೇ ಪಂದ್ಯದಲ್ಲಿ 0-1 ಅಂತರದಿಂದ ಸೋತಿತ್ತು.
 

click me!