ಸ್ಕೀ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಅಂಚಲ್ ಠಾಕೂರ್ ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಅಂಚಲ್ 2ನೇ ಚಿನ್ನದ ಪಕದ ಗೆದ್ದುಕೊಂಡಿದ್ದಾರೆ.
ಕಾಶ್ಮೀರ(ಮಾ.02): ಅಂತಾರಾಷ್ಟ್ರೀಯ ಸ್ಕೀ ಪಟು, ಭಾರತದ ಅಂಚಲ್ ಠಾಕೂರ್ ಖೇಲೋ ಇಂಡಿಯಾದಲ್ಲಿ ದಾಖಲೆ ಬರೆದಿದ್ದಾರೆ. ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಕ್ರೀಡಾಕೂಟದಲ್ಲಿ ಹಿಮಾಚಲ ಪ್ರದೇಶದ ಅಂಚಲ್ ಠಾಕೂರ್ 2ನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಸ್ಕೀಯಿಂಗ್’ನಲ್ಲಿ ಇತಿಹಾಸ ಬರೆದ ಅಂಚಲ್ ತಂದೆಯಿಂದ ಮೋದಿಗೆ ಪ್ಯಾರಾಗ್ಲೈಡಿಂಗ್ ಪಾಠ
ಸ್ಲಾಲೋಮ್ ವಿಭಾಗದಲ್ಲಿ ಅಂಚಲ್ ಠಾಕೂರ್ 2ನೇ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಕೀ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟ ಹೆಗ್ಗಳಿಕೆಗೆ ಅಂಚಲ್ ಠಾಕೂರ್ ಪಾತ್ರರಾಗಿದ್ದಾರೆ. ಇತ್ತೀಚಗೆ ಇಟಲಿಯಲ್ಲಿ ನಡೆದ ವಿಶ್ವ ಸ್ಕೀ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಅಂಚಲ್ ಭಾರತವನ್ನು ಪ್ರತಿನಿಧಿಸಿದ್ದರು.
ವಿಶ್ವ ಸ್ಕೀ ಚಾಂಪಿಯನ್‌ಶಿಪ್ ಇಟಲಿ; ಭಾರತದಿಂದ ಅಂಚಲ್ ಠಾಕೂರ್ ಸ್ಪರ್ಧೆ!.
2018ರಲ್ಲಿ ಟರ್ಕಿಯಲ್ಲಿ ನಡೆದ ವಿಶ್ವ ಸ್ಕೀ ಚಾಂಪಿಯನ್‌ಶಿಪ್‌ನಲ್ಲಿ ಅಂಚಲ್ ಕಂಚಿನ ಪದಕ ಗೆದ್ದು ವಿಶ್ವವನ್ನೇ ಭಾರತದತ್ತ ತಿರುಗುವಂತೆ ಮಾಡಿದ್ದರು. ಅಂಚಲ್ ತಂದೆ ರೋಶಲ್ ಲಾಲ್ ಠಾಕೂರ್ ಹಿಮಾಚಲ ಪ್ರದೇಶದಲ್ಲಿ ಪ್ಯಾರಾ ಗ್ಲೈಡಿಂಗ್ ತರಬೇತಿ ನೀಡುತ್ತಿದ್ದಾರೆ. 1997ರಲ್ಲಿ ರೋಶನ್ ಲಾಲ್ ಠಾಕೂರ್, ಅಂದು ಹಿಮಾಚಲ ಪ್ರದೇಶದ ಉಸ್ತುವಾರಿಯಾಗಿದ್ದ ನರೇಂದ್ರ ಮೋದಿಗೂ ಪ್ಯಾರಾ ಗ್ಲೈಡಿಂಗ್ ತರಬೇತಿ ನೀಡಿದ್ದರು.