
ನವದೆಹಲಿ(ಮಾ.03): ಆರು ಬಾರಿ ವಿಶ್ವ ಚಾಂಪಿಯನ್ ಆದ ಎಂ.ಸಿ. ಮೇರಿಕೋಮ್ ಮತ್ತು ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತ ಅಮಿತ್ ಪಂಘಾಲ್ ಸೇರಿದಂತೆ ಒಟ್ಟು 12 ಮಂದಿ ಭಾರತೀಯ ಬಾಕ್ಸರ್‌ಗಳು ಸ್ಪೇನ್‌ನಲ್ಲಿ ನಡೆಯುತ್ತಿರುವ ಬಾಕ್ಸ್ಯಾಮ್ ಇಂಟರ್‌ನ್ಯಾಷನಲ್ ಪಂದ್ಯಾವಳಿಯಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪದಕ ಖಚಿತಪಡಿಸಿಕೊಳ್ಳಲು ಇನ್ನೊಂದು ಹೆಜ್ಜೆ ಬಾಕಿ ಉಳಿದಿದೆ.
ಮುಂದಿನ ಯಾವುದೇ ಸ್ಪರ್ಧೆಯನ್ನು ಡ್ರಾ ಮಾಡಿಕೊಂಡರೂ ಪದಕ ಖಚಿತಗೊಳ್ಳಲಿದೆ. ಭಾರತೀಯ ಬಾಕ್ಸರ್‌ಗಳ ಪೈಕಿ 9 ಮಂದಿ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದವರಾಗಿದ್ದು, ಉಳಿದ ಬಾಕ್ಸರ್‌ಗಳಿಗೂ ಸಾಮರ್ಥ್ಯ ಪ್ರದರ್ಶಿಸಲು ಮುಂದಿನ ಸ್ಪರ್ಧೆಗಳು ಮಹತ್ವದ್ದಾಗಿದೆ.
ಬಾಕ್ಸರ್ ವಿಜೇಂದರ್ ಸಿಂಗ್ ಮಾರ್ಚ್‌ನಲ್ಲಿ ಅಖಾಡಕ್ಕೆ
6 ವರ್ಷದ ಬಳಿಕ ಬೋಪಣ್ಣಗೆ ಮತ್ತೆ ಪಾಕ್‌ನ ಖುರೇಷಿ ಜೋಡಿ
ನವದೆಹಲಿ: ‘ಇಂಡೋ-ಪಾಕ್ ಎಕ್ಸ್‌ಪ್ರೆಸ್’ ಎಂದೇ ಖ್ಯಾತರಾಗಿದ್ದ ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸೆಮ್-ಉಲ್-ಹಕ್ ಖುರೇಷಿ 6 ವರ್ಷದ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಈ ಜೋಡಿ ಇದೇ ಮಾ.15ರಿಂದ ಮೆಕ್ಸಿಕೋದಲ್ಲಿ ಆರಂಭಗೊಳ್ಳಲಿರುವ ಅಕಾಪುಲ್ಕೊ ಎಟಿಪಿ 500 ಟೆನಿಸ್ ಪಂದ್ಯಾವಳಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
2010ರಲ್ಲಿ ಬೋಪಣ್ಣ-ಖುರೇಷಿ ಜೋಡಿ ಯುಎಸ್ ಒಪನ್‌ನ ಪೈನಲ್‌ಗೇರಿ, ರನ್ನರ್ ಅಪ್ ಆಗಿತ್ತು. 2012ರಲ್ಲಿ ಒಲಿಂಪಿಕ್ಸ್‌ಗಾಗಿ ಖುರೇಷಿ ಜತೆ ಆಡುವುದನ್ನು ನಿಲ್ಲಿಸಿದ್ದ ಬೋಪಣ್ಣ, ಮಹೇಶ್ ಭೂಪತಿ ಜತೆ ಆಡಲು ಶುರು ಮಾಡಿದ್ದರು. ಬಳಿಕ 2014ರಲ್ಲಿ ಬೋಪಣ್ಣ-ಖುರೇಷಿ ಜೋಡಿ ಒಂದಾಗಿತ್ತು. ಅದೇ ವರ್ಷ ಈ ಜೋಡಿ ಕೊನೆಯ ಪಂದ್ಯ ಆಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.