ಜಾವೆಲಿನ್ ಥ್ರೋ ಒಲಿಂಪಿಕ್ ಚಾಂಪಿಯನ್ ಅರ್ಶದ್ ನದೀಂ ಅವರು ತಮಗೆ ಸಿಕ್ಕ ಎಮ್ಮೆ ಉಡುಗೊರೆಯ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.
ಕರಾಚಿ: ಪ್ಯಾರಿಸ್ ಒಲಿಂಪಿಕ್ಸ್‌ನ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ಪಾಕಿಸ್ತಾನದ ಅರ್ಶದ್ ನದೀಂಗೆ ಅವರ ಮಾವ ಮುಹಮ್ಮದ್ ನವಾಜ್ ಎಮ್ಮೆಯನ್ನು ಉಡುಗೊರೆಯಾಗಿ ಕೊಟ್ಟಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಈ ಕುರಿತಂತೆ ಅರ್ಶದ್ ನದೀಂ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಈ ವಿಡಿಯೋವೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಕೆಲದಿನಗಳ ಹಿಂದಷ್ಟೇ ನದೀಂ, ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದರ ಬೆನ್ನಲ್ಲೇ ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ನದೀಂ ಮಾವ ನವಾಜ್, ತಮ್ಮ ಗ್ರಾಮದ ಗೌರವದ ಸಂಕೇತವಾಗಿ ತಾವು ಸಾಕಿದ್ದ ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದಾಗಿ ತಿಳಿಸಿದ್ದರು.
undefined
ಒಲಿಂಪಿಕ್ ಗೋಲ್ಡನ್ ಬಾಯ್ ಯುಲೋಗೆ ಜೀವನಪೂರ್ತಿ ಉಚಿತ ಊಟ! ಐಶಾರಾಮಿ ಮನೆ ಗಿಫ್ಟ್
‘ನದೀಂ ನಮ್ಮ ಮನೆಗೆ ಬಂದಾಗಲೆಲ್ಲಾ ಯಾವುದರ ಬಗ್ಗೆಯೂ ಅತೃಪ್ತಿ ತೋರದೆ, ಇದ್ದುದರಲ್ಲಿಯೇ ಖುಷಿ ಪಡುತ್ತಾರೆ. ಅವರ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ’ ಎಂದಿದ್ದರು. . ಇದೀಗ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ 27 ವರ್ಷದ ನದೀಂ ಆ ಆಫರ್ ಬಗ್ಗೆ ತಮ್ಮ ಜತೆ ಮಾತನಾಡಿದ ಇಂಟ್ರೆಸ್ಟಿಂಗ್ ಸಂಗತಿಯನ್ನು ಬಿಚ್ಚಿದ್ದಾರೆ.
Arshad Nadeem reaction on receiving buffalo as a gift from father-in-law.😂 pic.twitter.com/wJGBHeXtVu
— 𝙎𝙝𝙚𝙧𝙞 (@CallMeSheri1)"ನಮ್ಮ ಅಪ್ಪ ಉಡುಗೊರೆ ರೂಪದಲ್ಲಿ ಎಮ್ಮೆಯನ್ನು ಕೊಡುತ್ತಿದ್ದಾರೆ ಎಂದು ಆಕೆ ಹೇಳಿದಾಗ ನಾನು ಏನು ಎಮ್ಮೆನಾ ಎಂದು ಕೇಳಿದೆ. ಒಳ್ಳೆಯ ಸ್ಥಿತಿವಂತರಾಗಿರುವ ಅವರು ಒಂದು ಐದು ಎಕರೆ ಜಮೀನನ್ನಾದರೂ ನೀಡಬಹುದಿತ್ತಲ್ಲ ಎಂದೆ. ಆದರೆ ಇದಾದ ಬಳಿಕ ಅವರು ಎಮ್ಮೆಯನ್ನು ಕೊಡಲು ಬಯಸಿದ್ದಾರೆ ಎಂದಾದರೇ ಇರಲಿ, ಅದೇ ಒಳ್ಳೆಯದ್ದೇ ಎಂದು ಹೇಳಿದೆ ಎಂದು ಆ ಘಟನೆಯನ್ನು ನದೀಂ ಮೆಲುಕು ಹಾಕಿದ್ದಾರೆ.
ಯಾವುದೇ ನೆರವಿಲ್ಲದೆ ಚಿನ್ನ ಗೆದ್ದ ನದೀಮ್ ಇದೀಗ ಪಾಕ್ ಸರ್ಕಾರಕ್ಕೆ ಕೊಡಬೇಕು 3 ಕೋಟಿ ರೂ!
ಪಾಕ್‌ನ ಪಂಜಾಬ್ ಪ್ರಾಂತ್ಯದ ಖಾನೆವಾಲ್ ಗ್ರಾಮದ ನದೀಂ, ಇತ್ತೀಚೆಗಷ್ಟೇ ಪ್ಯಾರಿಸ್‌ನಲ್ಲಿ ಭಾರತದ ನೀರಜ್ ಚೋಪ್ರಾರನ್ನು ಹಿಂದಿಕ್ಕಿ ಚಿನ್ನದ ಪದಕ ಗೆದ್ದಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಒಲಿಂಪಿಕ್ ದಾಖಲೆ(92.97 ಮೀಟರ್)ಯೊಂದಿಗೆ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಕಿಸ್ತಾನ ಪರ ಅಥ್ಲಿಟಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.