ಯಾವುದೇ ನೆರವಿಲ್ಲದೆ ಚಿನ್ನ ಗೆದ್ದ ನದೀಮ್ ಇದೀಗ ಪಾಕ್ ಸರ್ಕಾರಕ್ಕೆ ಕೊಡಬೇಕು 3 ಕೋಟಿ ರೂ!

ಸರ್ಕಾರದ ಯಾವುದೇ ನೆರವಿಲ್ಲದೆ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಹಿಂದಿಕ್ಕಿದ ಅರ್ಶದ್ ನದೀಮ್ ಚಿನ್ನದ ಸಾಧನೆ ಮಾಡಿದ್ದಾರೆ. ಆದರೆ ಪದಕದೊಂದಿಗೆ ತವರಿಗೆ ಮರಳುತ್ತಿದ್ದಂತೆ ಪಾಕ್ ಸರ್ಕಾರಕ್ಕೆ ಇದೀಗ ನದೀಮ್ 3 ಕೋಟಿ ರೂಪಾಯಿ ಕಟ್ಟಬೇಕಿದೆ.

Pakistan Olympics gold medallist arshad nadeem has to pay pkr 3 crore as tax on cash reward ckm

ಇಸ್ಲಾಮಾಬಾದ್(ಆ.11) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಚಿನ್ನದ ಪದಕದ ಕನಸನ್ನು ಪಾಕಿಸ್ತಾನದ ಕ್ರೀಡಾಪಟು ಅರ್ಶದ್ ನದೀಮ್ ನುಚ್ಚು ನೂರು ಮಾಡಿದ್ದಾರೆ. ಜಾವಲಿನ್‌ನಲ್ಲಿ ನೀರಜ್ ಚೋಪ್ರಾ ಹಿಂದಿಕ್ಕಿದ ಅರ್ಶದ್ ನಮೀದ್ ಚಿನ್ನದ ಪದಕ ಗೆದ್ದಿದ್ದರು. ಆದರೆ ಅರ್ಶದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರಳಲು, ತಯಾರಿಗೆ ಪಾಕಿಸ್ತಾನ ಸರ್ಕಾರ ನಯಾ ಪೈಸೆ ನೀಡಿಲ್ಲ. ಹಲವರ ನೆರವಿನೊಂದಿಗೆ ನದೀಮ್ ಈ ಸಾಧನೆ ಮಾಡಿದ್ದಾರೆ. ಸರ್ಕಾರದ ನೆರವಿಲ್ಲದೆಯೂ ಚಿನ್ನ ಗೆದ್ದ ನದೀಮ್ , ಪಾಕಿಸ್ತಾನಕ್ಕೆ ಮರಳುತ್ತಿದ್ದಂತೆ ಆಘಾತ ಎದುರಾಗಿದೆ. ಕಾರಣ ಇದೀಗ ಅರ್ಶದ್ ನದೀಮ್ ಪಾಕಿಸ್ತಾನ ಸರ್ಕಾರಕ್ಕೆ 3 ಕೋಟಿ ರೂಪಾಯಿ(ಪಾಕಿಸ್ತಾನ ರೂಪಾಯಿ) ಹಣ ಕಟ್ಟಬೇಕಿದೆ.

ಹೌದು, ಅರ್ಶದ್ ನದೀಮ್‌ ಇದೀಗ ಪಾಕಿಸ್ತಾನ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕನಿಷ್ಠ 3 ಕೋಟಿ ರೂಪಾಯಿ ಪಾವತಿ ಮಾಡಬೇಕಿದೆ. ಕ್ರೌಡ್ ಫಂಡಿಂಗ್ ಮೂಲಕ ಅರ್ಶದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ ಸೇರಿಕೊಂಡಿದ್ದರು. ಅದ್ಭುತ ಸಾಧನೆ ಮೂಲಕ ಅರ್ಶದ್ ನದೀಮ್ ಚಿನ್ನ ಗೆದ್ದಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಸೆಲೆಬ್ರೆಟಿಗಳು, ಉದ್ಯಮಿಗಳು, ಪಾಕ್‌ನ ಪಂಜಾಬ್ ಸರ್ಕಾರ ಬಹುಮಾನ ಘೋಷಿಸಿದೆ. ಈ ಬಹುಮಾನಗಳ ಒಟ್ಟು ಮೊತ್ತದ ಮೇಲೆ ಶೇಕಡಾ 15 ರಿಂದ 30 ರಷ್ಟು ತೆರಿಗೆಯನ್ನು ಅರ್ಶದ್ ನದೀಮ್ ಪಾವತಿಸಬೇಕಿದೆ.

"ರಾಷ್ಟ್ರಗೀತೆ ಮೊಳಗಿಸಲು ಸಾಧ್ಯವಾಗಲಿಲ್ಲ, ಆದ್ರೆ..?" ಬೆಳ್ಳಿ ಗೆದ್ದ ಬಳಿಕ ಭಾವನಾತ್ಮಕ ಪ್ರತಿಕ್ರಿಯೆ ಕೊಟ್ಟ ನೀರಜ್ ಚೋಪ್ರಾ

ಪಾಕಿಸ್ತಾನದ ಪಂಜಾಬ್ ಮುಖ್ಯಮಂತ್ರಿ ಮರ್ಯಾಮ್ ನವಾಜ್ ಚಿನ್ನ ಗದ್ದ ಅರ್ಶದ್ ನದೀಮ್‌ಗೆ 10 ಕೋಟಿ ಪಾಕಿಸ್ತಾನ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಸಿಂಧ್ ಸರ್ಕಾರ 5 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಪಾಕಿಸ್ತಾನದ ವಿಶ್ವ ಅಥ್ಲೆಟಿಕ್ಸ್ ಫೆಡರೇಶನ್ 1 ಕೋಟಿ 40 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಸಿಂಧ್ ಗರ್ವರನ್ ಕಮ್ರಾನ್ ತೆಸೊರಿ, ಕ್ರಿಕೆಟಿಗ ಅಹಮ್ಮದ್ ಶೆಹಜಾದ್ ಹಾಗೂ ಪಾಕ್ ಗಾಯಕ ಸೇರಿ ಒಟ್ಟು 30 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಉದ್ಯಮಿ ಸಲ್ಮಾನ್ ಇಕ್ಬಾಲ್ ಮನೆಯೊಂದನ್ನು ಬಹುಮಾನವಾಗಿ ಘೋಷಿಸಿದ್ದಾರೆ.

 

 

ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವನ್ಯೂ ತೆರಿಗೆ ಜವಾಬ್ದಾರಿ ವಹಿಸಿಕೊಂಡಿದೆ. ಭಾರತದಲ್ಲಿರುವಂತೆ ಪಾಕಿಸ್ತಾನದಲ್ಲಿ ಬಹುಮಾನ ಮೊತ್ತ, ಲಾಟರಿ ಮೊತ್ತ ಪಡೆವರು ತೆರಿಗೆ ಪಾವತಿ ಮಾಡಬೇಕು. ಆದರೆ ಇದರಲ್ಲಿ ಎರಡು ವಿಧಗಳಿವೆ. ಈಗಾಗಲೇ ತೆರಿಗೆ ಪಾವತಿದಾರರಾಗಿದ್ದರೆ ಶೇಕಡಾ 15 ರಷ್ಟು ತೆರಗಿ ಪಾವತಿ ಮಾಡಬೇಕು. ಒಂದು ವೇಳೆ ಇದುವರೆಗೆ ತೆರಿಗೆ ಪಾವತಿ ಮಾಡದೇ ಇದ್ದವರಾಗಿದ್ದರೆ, ಬಹುಮಾನ ಅಥವಾ ಲಾಟರಿ ಮೊತ್ತದ ಮೇಲೆ ಶೇಕಡಾ 30 ರಷ್ಟು ತೆರಿಗೆ ಪಾವತಿ ಮಾಡಬೇಕು. ಅರ್ಶದ್ ನದೀಮ್ ಈಗಾಗಲೇ ತೆರಿಗೆ ಪಾವತಿ ಮಾಡಿದ್ದರೆ ಸರಿಸುಮಾರು 3 ಕೋಟಿ ರೂಪಾಯಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕು, ಒಂದು ವೇಳೆ ಇದುವರೆಗೆ ತೆರಿಗೆ ಪಾವತಿ ಮಾಡದೇ ಇದ್ದ ವ್ಯಕ್ತಿಯಾಗಿದ್ದರೆ ಶೇಕಡಾ 30 ರಷ್ಟು ಮೊತವನ್ನು ಅಂದರೆ ಸರಿಸುಮಾರು 6 ಕೋಟಿ ರೂಪಾಯಿಯಷ್ಟು ತೆರಿಗೆ ಪಾವತಿಸಬೇಕು.

ಪ್ಯಾರಿಸ್‌ ಒಲಿಂಪಿಕ್ ಬೆಳ್ಳಿ ಗೆದ್ದ ಹುಡುಗನ ಚಿನ್ನದಂತ ಹೃದಯ: ನೀರಜ್ ಚೋಪ್ರಾ ನಡೆಗೆ ವ್ಯಾಪಕ ಶ್ಲಾಘನೆ..!
 

Latest Videos
Follow Us:
Download App:
  • android
  • ios