ಪ್ಯಾರಿಸ್ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಜಯಿಸಿದ ಫಿಲಿಫೈನ್ಸ್‌ನ ಕಾರ್ಲೋಸ್‌ ಯುಲೋಗೆ ಬಂಪರ್ ಗಿಫ್ಟ್ ಸಿಕ್ಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮನಿಲಾ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 2 ಚಿನ್ನದ ಪದಕ ಗೆದ್ದ ಫಿಲಿಫೈನ್ಸ್‌ನ ಜಿಮ್ನಾಸ್ಟಿಕ್ಸ್‌ ಪಟು ಕಾರ್ಲೋಸ್‌ ಯುಲೋಗೆ ತವರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದ್ದು, ಭಾರೀ ಉಡುಗೊರೆಗಳು ಸಿಗುತ್ತಿವೆ. ಹಲವು ಖಾಸಗಿ ಸಂಸ್ಥೆಗಳು 1 ಮಿಲಿಯನ್‌ ಅಮೆರಿಕನ್‌ ಡಾಲರ್‌ಗೂ ಹೆಚ್ಚಿನ ನಗದು ಬಹುಮಾನ ಘೋಷಿಸಿವೆ. 

ಇದರ ಜೊತೆಗೆ ಐಷಾರಾಮಿ ರೆಸಾರ್ಟ್‌ನಲ್ಲಿ ಒಂದು ಮನೆ ಹಾಗೂ ಜೀವನಪೂರ್ತಿ ಉಚಿತ ಬಫೆ ಊಟ ಸಹ ಬಹುಮಾನವಾಗಿ ನೀಡುವುದಾಗಿ ಕೆಲ ಉದ್ಯಮಿಗಳು ಘೋಷಿಸಿದ್ದಾರೆ. ಇನ್ನು ವಿಶ್ವ ವಿಖ್ಯಾತ ಬಾಕ್ಸರ್‌ ಮ್ಯಾನಿ ಪ್ಯಾಕ್ವೊ ದೊಡ್ಡ ಮೊತ್ತ ನಗದು ಬಹುಮಾನ ಕೊಡುವುದಾಗಿ ತಿಳಿಸಿದ್ದಾರೆ. ಆದರೆ ಮೊತ್ತ ಎಷ್ಟು ಎಂದು ಬಹಿರಂಗಗೊಳಿಸಿಲ್ಲ. ಯುಲೋ, ಪ್ಯಾರಿಸ್‌ ಗೇಮ್ಸ್‌ನ ಫ್ಲೋರ್‌ ಹಾಗೂ ವಾಲ್ಟ್‌ ವಿಭಾಗಗಳಲ್ಲಿ ಚಿನ್ನ ಗೆದ್ದಿದ್ದರು.

Scroll to load tweet…

ವೈದ್ಯರನ್ನು ಕಾಣಲು ಜರ್ಮನಿಗೆ ತೆರಳಿದ ನೀರಜ್‌ ಚೋಪ್ರಾ

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ವಿಜೇತ ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್ ಚೋಪ್ರಾ, ಅಲ್ಲಿಂದ ನೇರವಾಗಿ ಜರ್ಮನಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಟೋಕಿಯೋ ಒಲಿಂಪಿಕ್ಸ್‌ ಚಾಂಪಿಯನ್‌ ನೀರಜ್‌, ತೊಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ವೈದ್ಯರನ್ನು ಕಾಣಲು ಜರ್ಮನಿಗೆ ತೆರಳಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಮಾಹಿತಿ ನೀಡಿವೆ. 

ಸಚಿನ್, ಸೆಹ್ವಾಗ್, ಯುವಿ ಆಟ ಕಣ್ತುಂಬಿಕೊಳ್ಳಲು ರೆಡಿಯಾಗಿ; ಅಭಿಮಾನಿಗಳಿಗೆ ಬಿಸಿಸಿಐ ಗುಡ್‌ ನ್ಯೂಸ್..?

ಇನ್ನು ಒಂದು ತಿಂಗಳ ಕಾಲ ನೀರಜ್‌ ಜರ್ಮನಿಯಲ್ಲೇ ಇರಲಿದ್ದಾರೆ ಎಂದು ಗೊತ್ತಾಗಿದೆ. ಒಲಿಂಪಿಕ್ಸ್‌ಗೂ ಮೊದಲು ನೀರಜ್‌ ಜರ್ಮನಿಗೆ ತೆರಳಿ ವೈದ್ಯರ ಬಳಿ ಸಮಾಲೋಚಿಸಿದ್ದರು. ಅಲ್ಲಿಯೇ ಕೆಲ ಕಾಲ ಅಭ್ಯಾಸ ನಿರತರಾಗಿದ್ದರು. ಈ ಬಾರಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ವಿನೇಶ್ ದೇಶಕ್ಕೆ ನೀಡಿದ ಕೊಡುಗೆಯನ್ನು ಜನರು ಮರೆಯಬಾರದು: ಚೋಪ್ರಾ

ಪ್ಯಾರಿಸ್‌: ವಿನೇಶ್‌ ಫೋಗಟ್‌ ಪದಕ ಗೆದ್ದರೂ ಗೆಲ್ಲದಿದ್ದರೂ, ಅವರು ದೇಶಕ್ಕಾಗಿ ನೀಡಿರುವ ಕೊಡುಗೆಯನ್ನು ಜನ ಮರೆಯುವುದಿಲ್ಲ ಎಂದು ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಹೇಳಿದ್ದಾರೆ. 

ಈ ಬಗ್ಗೆ ಕ್ರೀಡಾ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ 26ರ ನೀರಜ್‌, ‘ವಿನೇಶ್‌ಗೆ ಪದಕ ಸಿಕ್ಕರೆ ಉತ್ತಮ. ಅವರಿಗೆ ಪದಕ ಸಿಗಬೇಕು. ಯಾಕೆಂದರೆ, ಆ ಪದಕ ವಿನೇಶ್‌ರ ಕುತ್ತಿಗೆಯಲ್ಲಿ ಇಲ್ಲದಿದ್ದರೆ, ಅದು ಜನರ ಹೃದಯದಲ್ಲಿ ಉಳಿಯುತ್ತದೆ. ಜನರು ಈಗ ವಿನೇಶ್‌ರನ್ನು ಚಾಂಪಿಯನ್ ಎಂದು ಹೇಳಬಹುದು. ಆದರೆ ಕೆಲ ದಿನಗಳ ಬಳಿಕ ಮರೆತು ಬಿಡುತ್ತಾರೆ. ಅದಕ್ಕಾಗಿ ವಿನೇಶ್‌ಗೆ ಪದಕ ಸಿಗಬೇಕು. ಅವರ ಸಾಧನೆಯನ್ನು ಜನ ಮರೆಯಬಾರದು’ ಎಂದಿದ್ದಾರೆ.

ವಿಶ್ವ ಕುಸ್ತಿ ನಿಯಮದಲ್ಲಿನ ಲೋಪ ವಿನೇಶ್‌ ಫೋಗಟ್‌ಗೆ ವರವಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಒಲಿಂಪಿಕ್ ಸ್ಟೇಡಿಯಂಗೆ ನುಗ್ಗಿ ಫ್ರಾನ್ಸ್‌ ಅಧ್ಯಕ್ಷರ ಜೊತೆ ಜಾರ್ವೋ ಸೆಲ್ಫಿ!

ಪ್ಯಾರಿಸ್‌: ಭಾರತದ ಕ್ರಿಕೆಟ್‌ ಪಂದ್ಯಗಳ ವೇಳೆ ಮೈದಾನಕ್ಕೆ ನುಗ್ಗುತ್ತಿದ್ದ ಇಂಗ್ಲೆಂಡ್‌ನ ಡೇನಿಯಲ್‌ ಜಾರ್ವೀಸ್‌(ಜಾರ್ವೊ 69) ಇದೀಗ ಪ್ಯಾರಿಸ್‌ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭ ನಡೆದ ಕ್ರೀಡಾಂಗಣಕ್ಕೂ ನುಗ್ಗಿ ಸುದ್ದಿಯಾಗಿದ್ದಾನೆ. ಅಲ್ಲದೆ, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಜೊತೆ ಸೆಲ್ಫಿಯನ್ನೂ ಕ್ಲಿಕ್ಕಿಸಿದ್ದು, ವಿಡಿಯೋ, ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾನೆ. 

ಬ್ರಿಟನ್‌ ಅಥ್ಲೀಟ್‌ಗಳಂತೆ ಬಟ್ಟೆ ಧರಿಸಿ ಕ್ರೀಡಾಂಗಣಕ್ಕೆ ಬಂದಿದ್ದಾಗಿ ಬರೆದುಕೊಂಡಿದ್ದಾನೆ. 2021ರ ಭಾರತ-ಇಂಗ್ಲೆಂಡ್‌ ಟೆಸ್ಟ್‌ ವೇಳೆ ಪಿಚ್‌ಗೆ ನುಗ್ಗಿದ್ದ ಜಾರ್ವೋ, ಬಳಿಕ 2023ರ ಏಕದಿನ ವಿಶ್ವಕಪ್‌, ರಗ್ಬಿ ವಿಶ್ವಕಪ್‌ ಮಾತ್ರವಲ್ಲದೇ ಕೆಲ ಫುಟ್ಬಾಲ್‌ ಪಂದ್ಯಗಳ ವೇಳೆ ಸಹ ಮೈದಾನಕ್ಕೆ ನುಗ್ಗಿ ಸುದ್ದಿಯಾಗಿದ್ದ.