2022ರಲ್ಲಿ ಭಾರತದಲ್ಲಿ ಕಾಮನ್ವೆಲ್ತ್‌ ಶೂಟಿಂಗ್‌?

By Kannadaprabha NewsFirst Published Dec 26, 2019, 3:49 PM IST
Highlights

ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ 2022ರಲ್ಲಿ ಭಾರತದಲ್ಲಿ ಕಾಮನ್‌ವೆಲ್ತ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ ಆಯೋಜಿಸುವ ಪ್ರಸ್ತಾಪವಿರಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ[ಡಿ.26]: ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಶೂಟಿಂಗ್‌ ಕ್ರೀಡೆಯನ್ನು ಕೈಬಿಟ್ಟ ಕಾರಣ, ಕ್ರೀಡಾಕೂಟಕ್ಕೆ ಬಹಿಷ್ಕಾರ ಹಾಕುವುದಾಗಿ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ಎಚ್ಚರಿಕೆ ನೀಡಿತ್ತು. 

ಕಾಮನ್‌ವೆಲ್ತ್ ಗೇಮ್ಸ್‌ನಿಂದ ಭಾರತದ ಸಮಯ, ಹಣ ವ್ಯರ್ಥ; IOA ಮುಖ್ಯಸ್ಥ!

ಭಾರತದ ಒತ್ತಡಕ್ಕೆ ಮಣಿದಿರುವ ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ (ಸಿಜಿಎಫ್‌), 2022ರಲ್ಲಿ ಭಾರತದಲ್ಲಿ ಕಾಮನ್‌ವೆಲ್ತ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ ಆಯೋಜಿಸುವ ಪ್ರಸ್ತಾಪವಿರಿಸಿದೆ. ಕೂಟಕ್ಕೆ ಆತಿಥ್ಯ ವಹಿಸಲು ಆಸಕ್ತಿ ಹೊಂದಿರುವುದಾಗಿ ಅಧಿಕೃತ ಪ್ರಸ್ತಾಪ ಸಲ್ಲಿಸುವಂತೆ ಐಒಎ ಅನ್ನು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ ಕೇಳಿಕೊಂಡಿದೆ. ಕೆಲ ವಾರಗಳ ಹಿಂದಷ್ಟೇ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಸಿಜಿಎಫ್‌ ಹಾಗೂ ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋಟ್ಸ್‌ ಫೆಡರೇಷನ್‌ (ಐಎಸ್‌ಎಸ್‌ಎಫ್‌) ನಡುವಿನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಕಾಮ​ನ್‌ವೆಲ್ತ್‌ನಲ್ಲಿ ಶೂಟಿಂಗ್‌: ಬ್ರಿಟನ್‌ಗೆ ರಿಜಿಜು ಪತ್ರ

ಈ ಕೂಟದಲ್ಲಿ ಗೆಲ್ಲುವ ಪದಕಗಳನ್ನು ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ನ ಪದಕ ಪಟ್ಟಿಗೆ ಪರಿಗಣಿಸುವುದಾಗಿ ತಿಳಿಸಲಾಗಿದೆ. ಹೀಗಾಗಿ, ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಶೂಟಿಂಗ್‌ ಸ್ಪರ್ಧೆ ಹೊರಬಿದ್ದರೂ, ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ ಆಯೋಜನೆಯಿಂದಾಗಿ ಶೂಟಿಂಗ್‌ನಲ್ಲಿ ಬಲಿಷ್ಠವಿರುವ ರಾಷ್ಟ್ರಗಳಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ.
 

click me!