ಪಾವೊ ನೂರ್ಮಿ ಗೇಮ್ಸ್‌ನಲ್ಲಿ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದ ನೀರಜ್ ಚೋಪ್ರಾ!

Published : Jun 15, 2022, 03:55 PM IST
ಪಾವೊ ನೂರ್ಮಿ ಗೇಮ್ಸ್‌ನಲ್ಲಿ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದ ನೀರಜ್ ಚೋಪ್ರಾ!

ಸಾರಾಂಶ

ನೀರಜ್ ಚೋಪ್ರಾ ಮಾರ್ಚ್ 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ 88.07 ಮೀ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ಮಾಡಿದ್ದರು. ಈಗ ಆ ದಾಖಲೆಯನ್ನು ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಮುರಿದಿದ್ದು, 89.30 ಮೀಟರ್ ದೂರ ಜಾವೆಲಿನ್ ಎಸೆದಿದ್ದಾರೆ.

ನವದೆಹಲಿ (ಜೂನ್ 15): ನೀರಜ್ ಚೋಪ್ರಾ (Neeraj Chopra) ಅವರು ಫಿನ್‌ಲ್ಯಾಂಡ್‌ನಲ್ಲಿ(Finland ) ನಡೆದ ಪಾವೊ ನೂರ್ಮಿ ಗೇಮ್ಸ್ 2022 ರಲ್ಲಿ(Paavo Nurmi Games 2022) ತಮ್ಮ ವೃತ್ತಿಜೀವನದ ಅತ್ಯುತ್ತಮ ಥ್ರೋ 89.30 ಮೀಟರ್‌ಗಳೊಂದಿಗೆ ಹೊಸ ರಾಷ್ಟ್ರೀಯ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಅದರೊಂದಿಗೆ ಅಥ್ಲೆಟಿಕ್ಸ್ ಕೂಟದಲ್ಲಿ ಅವರು ಬೆಳ್ಳಿ ಪದಕವನ್ನು ಜಯಿಸಿದರು. ಜೂನ್ 14 ರಂದು 24 ವರ್ಷದ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ (Tokyo Olympics) ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು.

ಪಾವೊ ನೂರ್ಮಿ ಗೇಮ್ಸ್ 2022 ರಲ್ಲಿ, ಫಿನ್‌ಲ್ಯಾಂಡ್‌ನ 25 ವರ್ಷದ ಆಲಿವರ್ ಹೆಲಾಂಡರ್ ತನ್ನ ಎರಡನೇ ಥ್ರೋನಲ್ಲಿ 89.83 ಮೀಟರ್‌ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ಗೆದ್ದರು. ಫಿನ್‌ಲ್ಯಾಂಡ್‌ನ ಟರ್ಕುದಲ್ಲಿ ನಡೆದ 10-ಅಥ್ಲೀಟ್ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಮತ್ತು 2020 ರ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಾಡ್ಲೆಜ್ ಕೂಡ ಭಾಗವಹಿಸಿದ್ದರು.

ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾಗೆ ಅಂತಾರಾಷ್ಟ್ರೀಯ ಕಣಕ್ಕೆ ಮರಳಲು ಇದಕ್ಕಿಂತ ಉತ್ತಮ ವೇದಿಕೆ ಮತ್ತೊಂದಿರಲಿಲ್ಲ. ಪಾವೊ ನೂರ್ಮಿ ಗೇಮ್ಸ್ ನಲ್ಲಿ ರಾಷ್ಟ್ರೀಯ ದಾಖಲೆಯ 89.30 ಮೀಟರ್ ದೂರ ಎಸೆಯುವುದರೊಂದಿಗೆ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿ ಅಂತಾರಾಷ್ಟ್ರೀಯ ಕಣಕ್ಕೆ ಮರಳಿದರು. ಅದರೊಂದಿಗೆ ವಿಶ್ವಶ್ರೇಷ್ಠ ಜಾವೆಲಿನ್ ಥ್ರೋ ಅಥ್ಲೀಟ್ ಗಳಿದ್ದ ಕೂಟದಲ್ಲಿಯೇ ನೀರಜ್ ಚೋಪ್ರಾ ಈ ಸಾಧನೆ ಮಾಡಿರುವುದರಿಂದ ಅವರ ಆತ್ಮವಿಶ್ವಾಸ ಇನ್ನಷ್ಟು ವೃದ್ಧಿಯಾಗಲಿದೆ.


ಟೋಕಿಯೋ ಒಲಿಂಪಿಕ್ಸ್ ಸಾಧನೆಯ ಬಳಿಕ, 90 ಮೀಟರ್ ಗುರಿ ದಾಟುವ ಟಾರ್ಗೆಟ್ ಅನ್ನು ನೀರಜ್ ಚೋಪ್ರಾ ಇರಿಸಿಕೊಂಡಿದ್ದರು. 24 ವರ್ಷದ ನೀರಜ್ ಚೋಪ್ರಾ ಕಾಂಟಿನೆಂಟಲ್ ಟೂರ್ ಈವೆಂಟ್ ಅನ್ನು ಬೆಳ್ಳಿ ಪದಕ ಗೆಲ್ಲುವ ಮೂಲಕ ಯಶಸ್ವಿಯಾಗಿ ಆರಂಭಿಸಿದರು. ಇದು ಟೋಕಿಯೊ ಕ್ರೀಡಾಕೂಟದ ನಂತರ ಅವರ ಮೊದಲ ಸ್ಪರ್ಧಾತ್ಮಕ ಪಂದ್ಯಾವಳಿಯಾಗಿದೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ 86.92 ಮೀ ಎಸೆಯುವ ಮೂಲಕ ಚಿನ್ನದ ಪದಕವನ್ನು ಜಯಿಸಿದ್ದರು.

ಇಂದಿನಿಂದ ಅಂತರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌, ನೀರಜ್ ಚೋಪ್ರಾ ಗೈರು..!

ನೀರಜ್ ಚೋಪ್ರಾ ಸ್ಪರ್ಧೆಯ 2ನೇ ಥ್ರೋ ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಮೂರೂ ಯತ್ನಗಳಲ್ಲಿ ಯಾವುದೇ ಫೌಲ್ ಮಾಡದೇ ಥ್ರೋಗಳನ್ನು ನೀರಜ್ ಚೋಪ್ರಾ ಎಸೆದರು. ಅಂತಿಮ ಥ್ರೋ ನಲ್ಲಿ 85.85 ಮೀಟರ್ ದೂರ ಎಸೆಯವ ಮೂಲಕ ಸ್ಪರ್ಧೆಯನ್ನು ಮುಗಿಸಿದರು. ನೀರಜ್ ಚೋಪ್ರಾ ಈವೆಂಟ್‌ನಲ್ಲಿ ಫಿನ್‌ಲ್ಯಾಂಡ್‌ನ ಒಲಿವರ್ ಹೆಲ್ಯಾಂಡರ್ ನಂತರ ಎರಡನೇ ಸ್ಥಾನ ಪಡೆದರು, ಅವರು 89.83 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಅಗ್ರ ಸ್ಥಾನವನ್ನು ಪಡೆದರು.

'ಮರಿ ನೀರಜ್ ಚೋಪ್ರಾ' ಹಾಸನದ ಮನು, ಜಾವೆಲಿನ್‌ನಲ್ಲಿ ಕನ್ನಡಿಗನ ಮಿಂಚು..!

ಏನಿದು ಪಾವೊ ನೂರ್ಮಿ ಗೇಮ್ಸ್: ಪಾವೊ ನೂರ್ಮಿ ಗೇಮ್ಸ್ 2022, ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್‌ನಲ್ಲಿ ಗೋಲ್ಡನ್ ಇವೆಂಟ್ ಆಗಿದೆ. ಇದು ಡೈಮಂಡ್ ಲೀಗ್‌ನ ಹಪರತಾಗಿ ಅತಿದೊಡ್ಡ ಟ್ರ್ಯಾಕ್ ಮತ್ತು ಫೀಲ್ಡ್ ಪಂದ್ಯಾವಳಿಗಳಲ್ಲಿ ಒಂದಾಗಿದೆ.ನೀರಜ್ ಚೋಪ್ರಾ ಅವರು ಜೂನ್ 30 ರಂದು ಡೈಮಂಡ್ ಲೀಗ್‌ನ ಸ್ಟಾಕ್‌ಹೋಮ್ ಲೆಗ್‌ಗೆ ಹೋಗುವ ಮೊದಲು ಫಿನ್‌ಲ್ಯಾಂಡ್‌ನಲ್ಲಿ ನಡೆಯುವ ಕುರ್ಟೇನ್ ಗೇಮ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ನಂತರ ಚೋಪ್ರಾ ಜುಲೈ 28 ರಂದು ಪ್ರಾರಂಭವಾಗುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಮುನ್ನ ಜುಲೈ 15 ರಿಂದ 24 ರವರೆಗೆ ಓರೆಗಾನ್‌ನಲ್ಲಿ ಅಥ್ಲೆಟಿಕ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧೆ ಮಾಡಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!