ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಸಿಮೊನಾ ಬೈಲ್ಸ್ ದಾಖಲೆ ಬರೆದಿದ್ದಾರೆ. ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಬರೋಬ್ಬರಿ 25 ಪದಕ ಗೆಲ್ಲೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಸ್ಟಟ್‌ಗಾರ್ಟ್(ಜರ್ಮನಿ)ಅ.14): ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಅಮೇರಿಕದ ತಾರೆ ಸಿಮೊನಾ ಬೈಲ್ಸ್ 25ನೇ ಪದಕ ಗೆದ್ದು ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಭಾನುವಾರ(ಅ.13) ರಂದು ನಡೆದ ವನಿತೆಯರ ಫ್ಲೋರ್ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಸಿಮೊನಾ ಬೈಲ್ಸ್ ಚಿನ್ನದ ಪದಕ ಗೆದ್ದರು.
ಇದನ್ನೂ ಓದಿ: ಜಿಮ್ನಾಸ್ಟಿಕ್ಸ್ ವಿಶ್ವಕಪ್ ಚಿನ್ನ ಗೆದ್ದ ದೀಪಾ ಕರ್ಮಾಕರ್
ಈ ಟೂರ್ನಿಯಲ್ಲಿ ಬೈಲ್ಸ್ ಬಾಚಿಕೊಂಡ 5ನೇ ಚಿನ್ನದ ಪದಕ ಇದಾಗಿದೆ. ಬೀಮ್, ತಂಡ, ಆಲ್ರೌಂಡರ್, ವಾಲ್ಟ್ ಸ್ಪರ್ಧೆಗಳಲ್ಲಿ ಬೈಲ್ಸ್ ಚಿನ್ನದ ಪದ ಗೆದ್ದುಕೊಂಡರು. ಈ ಮೂಲಕ ವಿಶ್ವ ಜಿಮ್ನಾಸ್ಟಿಕ್ ಚಾಂಪಿಯನ್ ಪಟ್ಟ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ಜಿಮ್ನಾಸ್ಟಿಕ್ಸ್ ವಿಶ್ವಕಪ್'ನಲ್ಲಿ ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳೆ
ಬೈಲ್ಸ್ 25ನೇ ಪದಕ ಗೆಲ್ಲೋ ಮೂಲಕ ಬೆಲಾರಸ್‌ನ ಜಿಮ್ನಾಸ್ಟಿಕ್ ಪಟು ವಿಟಾಲಿ ಶೆರ್ಬೋ ಅವರ 23 ಪದಕ ಸಾಧನೆಯನ್ನು ಹಿಂದಿಕ್ಕಿದರು. ವಿಶ್ವ ಚಾಂಪಿಯನ್‌ಶಿಪ್ ಕೂಡದಲ್ಲಿ 19 ಚಿನ್ನ, 3 ಬೆಳ್ಳಿ ಹಾಗೂ 3 ಚಿನ್ನದ ಪದಕೊಂದಿಗೆ ಒಟ್ಟು 25 ಪದಕ ಗೆದ್ದ ಸಾಧನೆ ಮಾಡಿದ್ದಾರೆ.
2⃣5⃣ World Championships medals for , the most in gymnastics history! pic.twitter.com/X3InbrUJjP
— USA Gymnastics (@USAGym)ಇದನ್ನೂ ಓದಿ: ಭಾರತದ ರೋಡ್ ಜಿಮ್ನಾಸ್ಟಿಕ್ಸ್‌ಗೆ ನಾಡಿಯಾ ಕೂಡಾ ಫಿದಾ!
2016ರ ರಿಯೋ ಒಲಿಂಪಿಕ್ಸ್ ಕೂಟದ ಆಲ್ರೌಂಡರ್, ಫ್ಲೋರ್, ಟೀಂ, ವಾರ್ಟ್ ವಿಭಾದಲ್ಲಿ ಒಟ್ಟು 4 ಚಿನ್ನ ಹಾಗೂ ಬ್ಯಾಲೆನ್ಸ್ ಬೀಮ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇನ್ನು ಪೆಸಿಫಿಕ್ ರಿಮ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ 2 ಚಿನ್ನದ ಪದಕ ಗೆದ್ದಿದ್ದಾರೆ. 22ರ ಹರೆಯದ ಸಿಮೊನ್ ಬೈಲ್ಸ್ ಇನ್ನಷ್ಟು ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.