ಮಹಿ​ಳಾ ವಿಶ್ವ ಬಾಕ್ಸಿಂಗ್‌; ಮಂಜುಗೆ ವಿಶ್ವ ಬಾಕ್ಸಿಂಗ್‌ ಬೆಳ್ಳಿ!

By Web Desk  |  First Published Oct 14, 2019, 9:57 AM IST

ಮಹಿಳಾ ವಿಶ್ವಬಾಕ್ಸಿಂಗ್ ಕೂಟದಲ್ಲಿ ಭಾರತದ ಮೇರಿ ಕೋಮ್ ಸೋಲಿನ ಆಘಾತ ಭಾರತೀಯರಿಗೆ ತೀವ್ರ ನಿರಾಸೆ ತಂದಿತ್ತು. ಆದರೆ ಮಂಜು ರಾಣಿ ಫೈನಲ್ ಪ್ರವೇಶಿಸೋ ಮೂಲಕ ಪದಕ ನಿರೀಕ್ಷೆ ಗರಿಗೆದರಿತ್ತು. ಫೈನಲ್ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿದ ಮಂಜು, ಪದಾರ್ಪಣಾ ಪಂದ್ಯದಲ್ಲೇ ಪದಕ ಗೆದ್ದಿದ್ದಾರೆ. 


ಉಲ​ನ್‌​ ಉಡೆ (ರಷ್ಯಾ): ಮಹಿ​ಳಾ ವಿಶ್ವ ಬಾಕ್ಸಿಂಗ್‌​ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಂಜು ರಾಣಿ (48 ಕೆ.ಜಿ) ಬೆಳ್ಳಿ ಪದಕ ಗೆದ್ದಿ​ದ್ದಾ​ರೆ. ಮಂಜುಗೆ ಇದು ಪಾದಾರ್ಪಣೆ ಆವೃತ್ತಿಯಾಗಿದೆ. ಭಾನು​ವಾರ ಇಲ್ಲಿ ನಡೆದ ಫೈನ​ಲ್‌​ನಲ್ಲಿ ಮಂಜು ರಾಣಿ, ಸ್ಥಳೀಯ ತಾರೆ ಎಕ​ಟ​ರಿನಾ ಪಾಲ್ಟ್‌​ಸೇವ ವಿರುದ್ಧ 1-4ರಲ್ಲಿ ಸೋಲೊ​ಪ್ಪಿ​ದರು. ಫೈನ​ಲ್‌​ನಲ್ಲಿ ರಷ್ಯಾ ಬಾಕ್ಸರ್‌ ಮೇಲುಗೈ ಸಾಧಿ​ಸಿ​ದ್ದರೂ, ಮಂಜು ಕೆಲ​ವೊಂದು ನೇರ ಪಂಚ್‌ ಹಾಗೂ ಅಪ್ಪ​ರ್‌​ಹ್ಯಾಂಡ್‌ ಹೊಡೆದು ಗಮ​ನ​ಸೆ​ಳೆದರು.

ಇದನ್ನೂ ಓದಿ: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಕಂಚು ಗೆದ್ದ ಮೇರಿ ಕೋಮ್

Tap to resize

Latest Videos

18 ವರ್ಷ​ಗಳ ಬಳಿಕ ಚೊಚ್ಚಲ ವಿಶ್ವ ಬಾಕ್ಸಿಂಗ್‌ ಫೈನ​ಲ್‌​ಗೇ​ರಿದ ಮೊದಲ ಭಾರ​ತೀಯ ಮಹಿಳಾ ಬಾಕ್ಸರ್‌ ಮಂಜು, ರಜತಕ್ಕೆ ತೃಪ್ತಿ​ಪ​ಟ್ಟರು. 2001ರಲ್ಲಿ ಈ ಸಾಧ​ನೆ​ಗೈದ ಮೇರಿ ಕೋಮ್‌ ಸಹ ಫೈನ​ಲ್‌​ನಲ್ಲಿ ಸೋತು ಬೆಳ್ಳಿ ಪದ​ಕ ಗೆದ್ದಿ​ದ್ದ​ರು. ಈ ಆವೃ​ತ್ತಿ​ಯಲ್ಲಿ ಭಾರ​ತದ ಪಾಲಿಗೆ ಮಂಜು ರಾಣಿ ಅತ್ಯು​ತ್ತಮ ಪ್ರದ​ರ್ಶ​ನ ನೀಡಿ​ದರು. ಶುಕ್ರ​ವಾರ ನಡೆ​ದಿದ್ದ ಸೆಮಿ​ಫೈ​ನ​ಲ್‌​ನಲ್ಲಿ ಥಾಯ್ಲೆಂಡ್‌ನ ಚುಥಾ​ಮತ್‌ ರಕ್ಸ​ತ್‌​ರನ್ನು ಮಂಜು ಸೋಲಿ​ಸಿ​ದ್ದ​ರು. ಕ್ವಾರ್ಟರ್‌ ಫೈನ​ಲ್‌​ನಲ್ಲಿ ಉತ್ತರ ಕೊರಿ​ಯಾದ ಕಿಮ್‌ ಹ್ಯಾಂಗ್‌ ಮಿ ಮಣಿ​ಸಿ​ದ್ದ​ರು. ಹರ್ಯಾಣ ಬಾಕ್ಸರ್‌ ಮಂಜು 2019ನೇ ಸಾಲಿನಲ್ಲಿ ಪಂಜಾಬ್‌ ಪ್ರತಿ​ನಿ​ಧಿಸಿ ರಾಷ್ಟ್ರೀಯ ಚಾಂಪಿ​ಯನ್‌ ಆಗಿ​ದ್ದರು. ಯುರೋ​ಪ್‌ನ ಪುರಾ​ತನ ಹಾಗೂ ಅತ್ಯಂತ ಪೈಪೋಟಿ ಏರ್ಪ​ಡುವ ಬಾಕ್ಸಿಂಗ್‌ ಸ್ಪರ್ಧೆ ಸ್ಟ್ರಾಂಡ್ಜ ಸ್ಮರ​ಣಾರ್ಥ ಟೂರ್ನಿಯಲ್ಲಿ ಬೆಳ್ಳಿ ಗೆದ್ದಿ​ದ್ದ​ರು.

ಇದನ್ನೂ ಓದಿ: ದುಬೈ​ನಲ್ಲಿ ಬಾಕ್ಸರ್ ವಿಜೇಂದ​ರ್‌ ಕಾದಾಟಕ್ಕೆ ಡೇಟ್ ಫಿಕ್ಸ್..!

6 ಬಾರಿಯ ವಿಶ್ವ ಚಾಂಪಿ​ಯನ್‌ ಮೇರಿ ಕೋಮ್‌ (51 ಕೆ.ಜಿ), ಜಮುನಾ ಬೊರೊ (54 ಕೆ.ಜಿ) ಹಾಗೂ ಲೊವ್ಲಿನಾ ಬೊರ್ಗೈನ್‌ (69 ಕೆ.ಜಿ) ಸೆಮಿಫೈನಲ್‌ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟಿದ್ದರು.

click me!