ಭಾರತೀಯ ಮಹಿಳಾ ರಸ್ಲರ್ ವಿನೇಶ್ ಪೋಗತ್ ಈ ವರ್ಷದ ಮೊದಲ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಉಕ್ರೇನ್‌ನಲ್ಲಿ ನಡೆದ ರಸ್ಲಿಂಗ್ ಸ್ಪರ್ಧೆಯಲ್ಲಿ ವಿನೇಶ್ ಪೋಗತ್ ದಾಖಲೆ ಬರೆದಿದ್ದಾರೆ.
ಉಕ್ರೇನ್(ಫೆ.28): ಮಹಿಳಾ 53 ಕೆಜಿ ರಸ್ಲಿಂಗ್ ಸ್ಪರ್ಧೆಯಲ್ಲಿ ಭಾರತದ ವಿನೇಶ್ ಪೋಗತ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ವಿನೇಶ್ ಪೋಗತ್ ಬೆಲಾರಸ್‌ನ ವಿಶಅವದ 7ನೇ ಕ್ರಮಾಂಕದಲ್ಲಿ ವೆನೆಸಾ ಕಲಾದ್ಜಿನ್ಸಕಯಾ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡರು.
ಭಾರತದ ತಾರಾ ಕುಸ್ತಿಪಟು ವಿನೇಶ್‌ಗೆ ವಿದೇಶದಲ್ಲಿ ತರಬೇತಿ..!
ಕೊರೋನಾ ವಕ್ಕರಿಸಿದ ಬಳಿಕ ನಡೆಯುತ್ತಿರುವ ರಸ್ಲಿಂಗ್ ಸ್ಪರ್ಧೆಯಲ್ಲಿ ಭಾರತ ಇದೇ ಮೊದಲ ಬಾರಿ ಸ್ಪರ್ಧಿಸುತ್ತಿದೆ. ಇಷ್ಟೇ ಅಲ್ಲ ಈ ವರ್ಷದ ಮೊದಲ ರಸ್ಲಿಂಗ್ ಪ್ರಶಸ್ತಿಯನ್ನು ಭಾರತ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸೆಮಿಫೈನಲ್ ಪಂದ್ಯದಲ್ಲಿ ವಿನೇಶ್ ಪೋಗತ್, ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ರೊಮೇನಿಯಾದ ಅನಾ ವಿರುದ್ಧ ಗೆಲುವು ಸಾಧಿಸಿದ್ದರು.
ರೋಹಿತ್ ಶರ್ಮಾ, ರಾಣಿ ಸೇರಿ ಐವರಿಗೆ ಖೇಲ್ ರತ್ನ ಪ್ರಶಸ್ತಿ ಗೌರವ
ವಿನೇಶ್ ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 53 ಕೆಜಿ ವಿಭಾಗಕ್ಕೆ ಸ್ಥಾನ ಕಾಯ್ದಿರಿಸಿದ್ದಾರೆ. ಮಾರ್ಚ್ 4 ರಿಂದ 7 ವರೆಗೆ ರೋಮ್‌ನಲ್ಲಿ ನಡೆಯಲಿರುವ ಟೂರ್ನಮೆಂಟ್‌ನಲ್ಲಿ ವಿನೇಶ್ ಪೋಗತ್ ಪಾಲ್ಗೊಳ್ಳುತ್ತಿದ್ದಾರೆ.