ಸಮುದ್ರದಲ್ಲಿ ಪುಟ್ಟ ಬಾಲಕನ ಏಕಾಂಗಿ ಸಾಹಸ: ವಿಡಿಯೋ ನೋಡಿ

By Anusha Kb  |  First Published May 29, 2022, 11:05 AM IST

ಪುಟ್ಟ ಬಾಲಕನೋರ್ವ ಸಮುದ್ರದಲ್ಲಿ ಏಕಾಂಗಿಯಾಗಿ ಸರ್ಫಿಂಗ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ಇತ್ತೀಚೆಗೆ ಸಾಕು ನಾಯೊಂದು ಏಕಾಂಗಿಯಾಗಿ ಸಮುದ್ರದಲ್ಲಿ ಸರ್ಫಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದೇ ರೀತಿ ಈಗ ಮಗುವೊಂದು ಏಕಾಂಗಿಯಾಗಿ ಸಾಗರದಲ್ಲಿ ಸರ್ಫಿಂಗ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಸರ್ಫಿಂಗ್ ಭಾರತದಲ್ಲಿ ಅಷ್ಟೊಂದು ಖ್ಯಾತಿ ಪಡೆದಿಲ್ಲ. ಆದರೆ ವಿದೇಶದಲ್ಲಿ ಪುಟ್ಟ ಮಕ್ಕಳು ಕೂಡ ಸಾಗರದಲ್ಲಿ ಸರ್ಫಿಂಗ್ ಮಾಡುತ್ತಾರೆ. 

ಮಗು ಸರ್ಫಿಂಗ್‌ ಮಾಡುತ್ತಿರುವ 22 ಸೆಕೆಂಡ್‌ಗಳ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ 'TheFigen' ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. Aweeeeee little big surfer!. ಆಹಾ ದೊಡ್ಡ ಪುಟಾಣಿ ಸರ್ಫರ್ ಎಂದು ಅವರು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಸಣ್ಣ ಮಗು ಸ್ಪೀಡ್‌ಬೋಟ್‌ನ ಹಿಂದೆ ಸರ್ಫಿಂಗ್ ಮಾಡುವುದನ್ನು ನೋಡಬಹುದು. ಮುದ್ದಾದ ಪುಟ್ಟ ಸರ್ಫಿಂಗ್ ವೇಳೆ ಮುಗ್ಗರಿಸದಂತೆ ತಡೆಯಲು ಮಗುವಿನ ದೇಹಕ್ಕೆ ಸುರಕ್ಷತಾ ಬೆಲ್ಟ್‌ ಜೋಡಿಸಲಾಗಿದ್ದು,  ಸರ್ಫ್‌ಬೋರ್ಡ್‌ನಲ್ಲಿ ಮಗು ನಿಂತಿದೆ.

Aweeeeee little big surfer! ❤️😂😂pic.twitter.com/apWQhCLetx

— Figen (@TheFigen)

Tap to resize

Latest Videos

 

ಸರ್ಫಿಂಗ್ ಬೋಟ್‌ನ ಸ್ಟ್ಯಾಂಡ್‌ನ್ನು ಹಿಡಿದುಕೊಂಡಿರುವ ಮಗು ಹಾಯಾಗಿ ನಿಂತು ಸರ್ಫಿಂಗ್‌ನ್ನು ಆನಂದಿಸುತ್ತಿದೆ. ಮಗುವಿನ ತಂದೆ ಸಮೀಪದ ಬೋಟ್‌ನಲ್ಲಿ ಇದ್ದು, ಮಗು ಬೀಳದಂತೆ ಆಗಾಗ ಹಿಂದಿನಿಂದ ಆತನ ಬೆನ್ನಿಗೆ ಕೈ ಇಡುವುದನ್ನು ಕಾಣಬಹುದು. ಮೂರು  ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 17 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುರುವಾಯ್ತು ದಿಗ್ಗಿ-ಆ್ಯಂಡಿ ಮೋಜು ಮಸ್ತಿ; ಬೀಚಲ್ಲಿ ಹೊಸ ಕೋರ್ಸ್‌ಗೆ ಸೇರಿಕೊಂಡ ಜೋಡಿ!
 

ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ನಡೆಯಲು ಸಾಧ್ಯವಾಗದ ಮಗುವಿನ ವಯಸ್ಸಿಗೆ ಇದು ತುಂಬಾ ಅಪಾಯಕಾರಿ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಮತ್ತೂ ಕೆಲವರು ಈ ಪುಟ್ಟ ಬಾಲಕ ತುಂಬಾ ಧೈರ್ಯಶಾಲಿ ಎಂದು ಪ್ರಶಂಸಿಸಿದ್ದಾರೆ. ಆದರೆ ಹೆಚ್ಚಿನವರು ಬಾಲಕನ ಸುರಕ್ಷತೆ ಬಗ್ಗೆ ಭಯವಾಗುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ.

ಮಂಗಳೂರಿನ ಹುಡುಗಿ ಸರ್ಫಿಂಗ್ ಸ್ಟಾರ್ ಆಗಿದ್ದು ಹೇಗೆ?
 

ಹೀಗೆಯೇ ಕೆಲ ದಿನಗಳ ಹಿಂದೆ ಶ್ವಾನವೊಂದು ಸರ್ಫಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಾಯಿಯೊಂದು ಪ್ಯಾಡಲ್‌ಬೋರ್ಡ್‌ನಲ್ಲಿ ನಿಂತು ಏಕಾಂಗಿಯಾಗಿ ಸಮುದ್ರದಲ್ಲಿ ಸರ್ಫಿಂಗ್ ಮಾಡುತ್ತಿದೆ. ಈ ವಿಡಿಯೋವನ್ನು 18 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ರೋಸಿ ಡ್ರೊಟಾರ್ (Rosie Drottar) ಹೆಸರಿನ ಈ ಶ್ವಾನ, ಸರ್ಫಿಂಗ್‌ನಲ್ಲಿ ಪಕ್ಕ ವೃತ್ತಿಪರರಂತೆ ವರ್ತಿಸುತ್ತಿದೆ. ಸುಮಾರು 25 ಸೆಕೆಂಡುಗಳ ವಿಡಿಯೋದಲ್ಲಿ ಶ್ವಾನ ಯಾವುದೇ ಮನುಷ್ಯರ ಸಹಾಯವಿಲ್ಲದೇ ಸಮುದ್ರದ ಅಲೆಗಳನ್ನು ತಪ್ಪಿಸಿಕೊಂಡು ಅದ್ಬುತವಾಗಿ ಸರ್ಫ್ ಮಾಡಿದೆ.

 

ಶ್ವಾನದ ಸರ್ಫಿಂಗ್ ಚಟುವಟಿಕೆಗಳಿಗಾಗಿಯೇ ಮೀಸಲಾಗಿರುವ ಇನ್ಸಟಾಗ್ರಾಮ್‌ ಪೇಜ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ಶ್ವಾನದ ಇನ್ಸ್ಟಾಗ್ರಾಮ್‌ ಪೇಜ್‌ಗೆ 35 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳಿದ್ದಾರೆ. ಶ್ವಾನ ರೋಸಿ ಸಮುದ್ರದ ಮಧ್ಯದಲ್ಲಿ ಅದ್ಭುತವಾಗಿ ಸರ್ಫಿಂಗ್ ಮಾಡುವುದನ್ನು ಕಾಣಬಹುದು. 25 ಸೆಕೆಂಡುಗಳ ಸವಾರಿ, ಸರ್ಫಿಂಗ್ ಶ್ವಾನಗಳ ಜೀವನ ಎಂದು ಬರೆದು ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು, ಸರ್ಫರ್‌ನ ಆತ್ಮದೊಂದಿಗೆ ಜನಿಸಿದ ಶ್ವಾನ ಎಂದು ಕಾಮೆಂಟ್ ಮಾಡಿದ್ದಾರೆ. 

ಇತ್ತೀಚೆಗೆ ಪ್ರಾಣಿಗಳು ಕೂಡ ಮನುಷ್ಯರಂತೆ ಎಲ್ಲಾ ಸವಲತ್ತುಗಳನ್ನು ಎಂಜಾಯ್‌ ಮಾಡಲು ಬಯಸುತ್ತಿವೆ. ಅದರಲ್ಲೂ ಶ್ವಾನಗಳ ಕೆಲ ಬುದ್ಧಿವಂತಿಕೆ ನೋಡಿದರೆ ಇವರೇನು ಮನುಷ್ಯರೋ ಪ್ರಾಣಿಗಳೋ ಎಂದು ಸಂಶಯ ಮೂಡುವುದು ಸಾಮಾನ್ಯ. ಇದಕ್ಕೆ ಶ್ವಾನಗಳ ಇಂತಹ ಕೆಲ ವಿಡಿಯೋಗಳೇ ಸಾಕ್ಷಿ.

click me!