ಅಜ್ಜ ಶ್ರೀಕರ ಕುಂದರ್‌ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಅವರಿಗೆ ಸಮುದ್ರದ ಒಡನಾಟ ಇತ್ತು. ಅದು ತನ್ವಿಯನ್ನು ಕಡಲ ತಡಿಗೆ ಸೆಳೆದಿದ್ದರೂ ಮುಂದೊಂದು ದಿನ ಸಮುದ್ರವೇ ಬದುಕಾಗುತ್ತದೆ ಎಂದು ತಿಳಿದಿರಲಿಲ್ಲ. ಅಜ್ಜನ ಒತ್ತಾಯದ ಮೇರೆಗೆ 10 ವರ್ಷದವಳಿದ್ದಾಗ ಸಮುದ್ರ ಕಿನಾರೆಗೆ ಬಂದ ತನ್ವಿ ಎಲ್ಲಾ ಮಕ್ಕಳಂತೆ ಹೆದರಿದ್ದಳು. ಹೆದರಿಕೆಯಿಂದಲೇ ಕಡಲಿಗೆ ಇಳಿದಿದ್ದಳು. ಆಗ ಆಕೆಯ ನೆರವಿಗೆ ಬಂದಿದ್ದು ಮಂತ್ರ ಸರ್ಫಿಂಗ್‌ ಕ್ಲಬ್‌ ಸ್ಥಾಪಕ ಮತ್ತು ಗುರು ಸರ್ಫಿಂಗ್‌ ಸ್ವಾಮಿ ಮತ್ತು ಕೋಚ್‌ ಶಮಂತ್‌ ಕುಮಾರ್‌. ಅವರಲ್ಲಿ ಕೋಚಿಂಗ್‌ ಪಡೆದ ಬಳಿಕ ತನ್ವಿ ಹಿಂದಿರುಗಿ ನೋಡಿದ್ದೇ ಇಲ್ಲ.
ಅಜ್ಜ ಶ್ರೀಕರ ಕುಂದರ್ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಅವರಿಗೆ ಸಮುದ್ರದ ಒಡನಾಟ ಇತ್ತು. ಅದು ತನ್ವಿಯನ್ನು ಕಡಲ ತಡಿಗೆ ಸೆಳೆದಿದ್ದರೂ ಮುಂದೊಂದು ದಿನ ಸಮುದ್ರವೇ ಬದುಕಾಗುತ್ತದೆ ಎಂದು ತಿಳಿದಿರಲಿಲ್ಲ. ಅಜ್ಜನ ಒತ್ತಾಯದ ಮೇರೆಗೆ 10 ವರ್ಷದವಳಿದ್ದಾಗ ಸಮುದ್ರ ಕಿನಾರೆಗೆ ಬಂದ ತನ್ವಿ ಎಲ್ಲಾ ಮಕ್ಕಳಂತೆ ಹೆದರಿದ್ದಳು. ಹೆದರಿಕೆಯಿಂದಲೇ ಕಡಲಿಗೆ ಇಳಿದಿದ್ದಳು. ಆಗ ಆಕೆಯ ನೆರವಿಗೆ ಬಂದಿದ್ದು ಮಂತ್ರ ಸರ್ಫಿಂಗ್ ಕ್ಲಬ್ ಸ್ಥಾಪಕ ಮತ್ತು ಗುರು ಸರ್ಫಿಂಗ್ ಸ್ವಾಮಿ ಮತ್ತು ಕೋಚ್ ಶಮಂತ್ ಕುಮಾರ್. ಅವರಲ್ಲಿ ಕೋಚಿಂಗ್ ಪಡೆದ ಬಳಿಕ ತನ್ವಿ ಹಿಂದಿರುಗಿ ನೋಡಿದ್ದೇ ಇಲ್ಲ.
ನಿತ್ಯವೂ ಸರ್ಫಿಂಗ್ ಅಭ್ಯಾಸ:
ತನ್ವಿ ಎಷ್ಟರ ಮಟ್ಟಿಗೆ ಸರ್ಫಿಂಗ್ನಲ್ಲಿ ತಲ್ಲೀನರಾಗಿದ್ದಾರೆ ಎಂದರೆ, ಸರ್ಫಿಂಗ್ ಬಿಟ್ಟು ತನ್ವಿ ಇಲ್ಲ, ತನ್ವಿ ಇಲ್ಲದೆ ಸರ್ಫಿಂಗ್ ಬೋರ್ಡ್ ಇಲ್ಲ. ಪ್ರತಿದಿನವೂ ಬೆಳಗ್ಗಿನಿಂದ ಸಂಜೆವರೆಗೆ ಕಡಲ ತಡಿಯಲ್ಲೇ ತನ್ವಿ ಅಭ್ಯಾಸ ನಿರತರಾಗಿರುತ್ತಾರೆ. ನಸುಕಿನ ಜಾವ ನಾಲ್ಕು ಗಂಟೆಗೆ ತನ್ವಿ ಸರ್ಫಿಂಗ್ಗೆ ಸಿದ್ಧವಾಗುತ್ತಾರೆ. ಮೊದಲು ಪ್ರಾಣಾಯಾಮ, ಯೋಗದ ನಂತರ ಪೆಡಲಿಂಗ್. ಈಕೆಯ ತಂದೆ ಜಗದೀಶ್ ಕುಂದರ್ ಎಂಆರ್ಪಿಎಲ್ ಉದ್ಯೋಗಿ. ತಾಯಿ ಕವಿತಾ ಗೃಹಿಣಿ. ತಂದೆ, ತಾಯಿಯ ಒಬ್ಬಳೇ ಮಗಳು ತನ್ವಿ. ಹೆತ್ತವರು ಸುರತ್ಕಲ್ನ ಎನ್ಐಟಿಕೆ ಬಳಿ ವಾಸವಿದ್ದಾರೆ.
ತನ್ವಿ ನಿತ್ಯವೂ ಮೂಲ್ಕಿಯ ಕೊಳಚಿಕಂಬಳದಲ್ಲಿ ಇರುವ ಮಂತ್ರ ಸರ್ಫಿಂಗ್ ಕ್ಲಬ್ನಲ್ಲಿ ಸರ್ಫಿಂಗ್ ತರಬೇತಿ ಪಡೆಯುತ್ತಾರೆ. ಇದಕ್ಕಾಗಿ ಅಜ್ಜಿ ಮನೆ ಮೂಲ್ಕಿಯಲ್ಲಿ ತನ್ವಿ ವಾಸ. ಹೆತ್ತವರೊಂದಿಗೆ ಕಳೆಯಲು ಭಾನುವಾರ ಸರ್ಫಿಂಗ್ಗೆ ಬಿಡುವು ಮಾಡಿಕೊಂಡಿದ್ದಾರೆ. ತನ್ವಿ ಕಾಲೇಜಿಗೆ ಹೋಗುವುದು ಮಧ್ಯಾಹ್ನ. 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿಶೇಷ ತರಗತಿ. ಬಳಿಕ ಮತ್ತೆ ಸರ್ಫಿಂಗ್. ಬೆಳಗ್ಗೆ 7ರಿಂದ 11 ಗಂಟೆ ಹಾಗೂ ಸಂಜೆ 4ರಿಂದ 7 ಗಂಟೆವರೆಗೂ ಸರ್ಫಿಂಗ್ ತರಬೇತಿ ನಡೆಸುತ್ತಾರೆ. ಭವಿಷ್ಯದಲ್ಲಿ ಶಾಲಾ ಶಿಕ್ಷಕಿಯಾಗಬೇಕು ಎನ್ನುವುದು ತನ್ವಿಯ ಅಪೇಕ್ಷೆಯಂತೆ.
-ಆತ್ಮಭೂಷಣ್, ಮಂಗಳೂರು
