2ನೇ ಸುತ್ತಿನಲ್ಲಿ ಸೋಲು
ಜೋಕೋ 3ನೇ ಸುತ್ತಿಗೆ ಲಗ್ಗೆ
ರಾಮ್‌ನಾಥನ್ ಜೋಡಿ ಶುಭಾರಂಭ
ಪ್ಯಾರಿಸ್ (ಮೇ. 26): ಯುಸ್ ಓಪನ್ ಚಾಂಪಿಯನ್ (US Open Champion), 19 ವರ್ಷದ ಎಮ್ಮಾ ರಾಡುಕಾನು (Emma Raducanu) ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ (French Open Grand Slam) ಟೂರ್ನಿಯಲ್ಲಿ 2ನೇ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದ್ದಾರೆ.
ಬ್ರಿಟನ್‌ನ ಎಮ್ಮಾ ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಬೆಲಾರಸ್‌ನ ಅಲಿಕ್ಸಾಂಡ್ರಾ ಸಾಸ್ನೋವಿಚ್ ವಿರುದ್ಧ 6-3, 1-6, 1-6 ಸೆಟ್‌ಗಳಲ್ಲಿ ಸೋತು ನಿರಾಸೆ ಮೂಡಿಸಿದರು. 7ನೇ ಫ್ರೆಂಚ್ ಓಪನ್‌ನಲ್ಲಿ ಆಡುತ್ತಿರುವ ಸಾಸ್ನೋವಿಚ್ (Aliaksandra Sasnovich) ಇದೇ ಮೊದಲ ಬಾರಿ 3ನೇ ಸುತ್ತು ಪ್ರವೇಶಿಸಿದ್ದಾರೆ. ಇನ್ನು, ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ, ಜರ್ಮನಿಯ ಆ್ಯಂಡ್ರಿಯಾ ಪೆಟ್ಕೋವಿಚ್ ವಿರುದ್ಧ ಗೆದ್ದು 3ನೇ ಸುತ್ತಿಗೆ ಲಗ್ಗೆ ಇಟ್ಟರು. ಅಮೆರಿಕದ ಸ್ಲೋನ್ ಸ್ಟೆಫನ್ಸ್ ಕೂಡಾ ಗೆಲುವು ಸಾಧಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್, ವಿಶ್ವ ನಂ.1 ನೋವಾಕ್ ಜೋಕೋವಿಚ್ 3ನೇ ಸುತ್ತಿಗೆ ಲಗ್ಗೆ ಇಟ್ಟರು. ಅವರು ಸ್ಲೊವಾಕಿಯಾದ ಅಲೆಕ್ಸ್ ಮೊಲ್ಕನ್ ವಿರುದ್ಧ 6-2, 6-3, 7-6 ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ವಿಶ್ವ ನಂ.3, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, ಅರ್ಜೆಂಟೀನಾದ ಸೆಬಾಸ್ಟಿಯನ್ ವಿರುದ್ಧ 2-6, 4-6, 6-1, 6-2, 7-5 ಅಂತರದಲ್ಲಿ ಗೆದ್ದು 3ನೇ ಸುತ್ತು ಪ್ರವೇಶಿಸಿದರು. ವಿಶ್ವ ನಂ.13 ಅಮೆರಿಕದ ಟೇಲರ್ ಫ್ರಿಟ್ಜ್ 2ನೇ ಸುತ್ತಲ್ಲೇ ಸೋತು ಹೊರಬಿದ್ದರು.
ರಾಮ್‌ನಾಥನ್ ಜೋಡಿ ಶುಭಾರಂಭ: ಭಾರತದ ರಾಮನಾಥನ್ ರಾಮ್‌ಕುಮಾರ್ ಹಾಗೂ ಅಮೆರಿಕದ ಹಂಟರ್ ರೀಸ್ ಜೋಡಿ ಶುಭಾರಂಭ ಮಾಡಿದೆ. ಬುಧವಾರ ಪುರುಷರ ಡಬಲ್ಸ್‌ನಲ್ಲಿ ಈ ಜೋಡಿ ಜರ್ಮನಿಯ ಡೇನಿಲ್-ಆಸ್ಕರ್ ಒಟ್ಟೆಜೋಡಿ ವಿರುದ್ಧ 7-6, 6-3 ಸೆಟ್‌ಗಳಿಂದ ಗೆಲುವು ಸಾಧಿಸಿತು. ಗ್ರ್ಯಾನ್ ಸ್ಲಾಂ ಟೂರ್ನಿಗಳಲ್ಲಿ ಇದೇ ಮೊದಲ ಬಾರಿ ರಾಮ್‌ಕುಮಾರ್ ಪ್ರಧಾನ ಸುತ್ತಿನಲ್ಲಿ ಜಯಗಳಿಸಿದರು.
ಆಟಗಾರ್ತಿಗೆ ಸೋಂಕು: ಟೂರ್ನಿಯಿಂದ ಹೊರಕ್ಕೆ
ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗೆ ಕೋವಿಡ್ ಕಾಟ ಎದುರಾಗಿದ್ದು, ಸೋಂಕು ದೃಢಪಟ್ಟಬಳಿಕ ಚೆಕ್ ಗಣರಾಜ್ಯದ ಮರಿಯಾ ಬೌಜ್ಕೋವಾ ಅವರು ಟೂರ್ನಿಯನ್ನು ತೊರೆದಿದ್ದಾರೆ. ಬುಧವಾರ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಬೆಲ್ಜಿಯಂನ ಎಲೈಸ್ ಮೆರ್ಟೆನ್ಸ್ ವಿರುದ್ಧ 2ನೇ ಸುತ್ತಿನಲ್ಲಿ ಆಡಬೇಕಿತ್ತು. ಆದರೆ ಸೋಂಕು ಕಾಣಿಸಿಕೊಂಡ ಕಾರಣ ಅವರು ಪಂದ್ಯದಿಂದ ಹಿಂದೆ ಸರಿದರು. ಎಲೈಸ್ 3ನೇ ಸುತ್ತಿಗೆ ಪ್ರವೇಶ ಪಡೆದರು
ಮೇರಿ ಕೋಮ್ ಭೇಟಿಯಾಗಿ ಆಶೀರ್ವಾದ ಪಡೆದ ನಿಖಾತ್
ಅಂಡರ್ 23 ಮಹಿಳಾ ಹಾಕಿ: ಭಾರತಕ್ಕೆ ವೈಷ್ಣವಿ ನಾಯಕಿ
ನವದೆಹಲಿ: ಜೂನ್ 19ರಿಂದ 26ರ ವರೆಗೆ ಐರ್ಲೆಂಡ್‌ನಲ್ಲಿ ನಡೆಯಲಿರುವ ಅಂಎರ್-23 5 ದೇಶಗಳ ಹಾಕಿ ಟೂರ್ನಿಗೆ 20 ಸದಸ್ಯರ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು, ವೈಷ್ಣವಿ ಪಾಲ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮುಮ್ತಾಜ್ ಖಾನ್ ಉಪನಾಯಕಿಯಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಜೂ.19ಕ್ಕೆ ಐರ್ಲೆಂಡ್ ವಿರುದ್ಧ ಆಡಲಿದ್ದು, ಬಳಿಕ ನೆದರ್ಲೆಂಡ್(ಜೂ.20), ಉಕ್ರೇನ್(ಜೂ.22) ಹಾಗೂ ಅಮೆರಿಕ(ಜೂ.23) ವಿರುದ್ಧ ಸೆಣಸಾಡಲಿದೆ. ರೌಂಡ್ ರಾಬಿನ್ ಮಾದರಿಯ ಟೂರ್ನಿಯ ಫೈನಲ್ ಪಂದ್ಯ ಜೂ.26ಕ್ಕೆ ನಿಗದಿಯಾಗಿದೆ.
IPL 2022 ಲಖನೌ ಮಣಿಸಿ 2ನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದ ಆರ್‌ಸಿಬಿ!
2ನೇ ಟೆಸ್ಟ್: ಶ್ರೀಲಂಕಾಕ್ಕೆ ಇನ್ನೂ 83 ರನ್ ಹಿನ್ನಡೆ
ಮೀರ್‌ಪುರ್: 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶಕ್ಕೆ ಶ್ರೀಲಂಕಾ ತಿರುಗೇಟು ನೀಡಿದ್ದು, 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 282 ರನ್ ಕಲೆ ಹಾಕಿದೆ. ತಂಡ ಇನ್ನೂ 83 ಹಿನ್ನಡೆಯಲ್ಲಿದ್ದು, ಗುರುವಾರ ಇನ್ನಿಂಗ್‌್ಸ ಮುನ್ನಡೆ ಸಾಧಿಸುವ ನಿರೀಕ್ಷೆಯಲ್ಲಿದೆ. 2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 143 ರನ್ ಗಳಿಸಿದ್ದ ತಂಡ ಬುಧವಾರವೂ ಎಚ್ಚರಿಕೆಯ ಆಟವಾಡಿತು. ಮಳೆ ಅಡ್ಡಿಪಡಿಸಿದ್ದರಿಂದ 3ನೇ ದಿನ ಕೇವಲ 51 ಓವರ್‌ಗಳನ್ನು ಎಸೆಯಲು ಸಾಧ್ಯವಾಯಿತು. ಒಶಾಡ ಫೆರ್ನಾಂಡೋ(57) ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೆ ಔಟಾದರೆ, ಕರುಣಾರತ್ನೆ 80 ರನ್ ಸಿಡಿಸಿದರು. ಏಂಜೆಲೋ ಮ್ಯಾಥ್ಯೂಸ್(58) ಕ್ರಿಸ್ ಕಾಯ್ದಕೊಂಡಿದ್ದಾರೆ.