
ನ್ಯೂಯಾರ್ಕ್(ಏ.20): ಪದ್ಮಶ್ರೀ ಪುರಸ್ಕೃತ ಮಿಲ್ಕಾ ಸಿಂಗ್ ಭಾರತಕ್ಕೆ ನೀಡಿರುವ ಕೊಡುಗೆ ಅಪಾರ. ಭಾರತೀಯ ಸೇನೆಯಲ್ಲಿದ್ದು, ಕ್ರೀಡೆಯಲ್ಲೂ ಮಿಂಚಿದ ಮಗಧೀರ. ಇದೀಗ ಮಿಲ್ಕಾ ಸಿಂಗ್ ಪುತ್ರಿ ಮೋನಾ ಸಿಂಗ್ ಅಮೆರಿಕಾದ ಕೊರೋನಾ ಸೋಂಕಿತರ ಪಾಲಿಗೆ ದೇವರಾಗಿದ್ದಾರೆ. ನ್ಯೂಯಾರ್ಕ್‌ನ ಮೆಟ್ರೊಪೊಲಿಟಿಯನ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತೀವ್ರ ನಿಗಾಘಟಕದಲ್ಲಿ ವೈದ್ಯೆಯಾಗಿರುವ ಮೋನಾ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಒಂದೇ ದಿನ 33 ಸಾವಿರ ಕೊರೋನಾ ಕೇಸ್, ಅಮೆರಿಕದಲ್ಲಿ ವೈರಸ್ ಬಿರುಗಾಳಿ!
ನ್ಯೂಯಾರ್ಕ್‍ನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಮೋನಾ ಸಿಂಗ್ ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಯಲ್ಲಿ ಸೋಂಕಿತರು ತುಂಬಿದ್ದಾರೆ. ಮೋನಾ ಸಿಂಗ್ ಚಿಕಿತ್ಸೆ ನೀಡಿದ ಹಲವರು ಗುಣಮುಖರಾಗಿದ್ದಾರೆ. ಆದರೆ ವೈರಸ್ ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೋನಾ ಪ್ರತಿ ದಿನ ಮ್ಯಾರಥಾನ ಓಡುತ್ತಿದ್ದಾರೆ. ಎಂದು ಮೋನಾ ಸಿಂಗ್ ಸಹೋದರ, ಮಿಲ್ಕಾ ಸಿಂಗ್ ಪುತ್ರ ಜೀವಾ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ
ಕೊರೋನಾ ವೈರಸ್ ವಿರುದ್ಧದ ಮೋನಾ ನಿರಂತರ ಹೋರಾಡುತ್ತಿದ್ದಾರೆ. ನೈಟ್ ಶಿಫ್ಟ್, 12 ಗಂಟೆ ಶಿಫ್ಟ್ ಸೇರಿದಂತೆ ವಿಶ್ರಾಂತಿ ಪಡೆಯದೆ ಚಿಕಿತ್ಸೆ ನೀಡುತ್ತಿದ್ದಾರೆ. ಇದು ಅತ್ಯಂತ ಕಠಿಣ ಆದರೆ ಮೋನಾ ಸಮರ್ಥವಾಗಿ ನಿಭಾಯಿಸುತ್ತಾಳೆ ಎಂದು ಜೀವಾ ಹೇಳಿದ್ದಾರೆ.
ಅಮೆರಿಕಾದಲ್ಲಿ ಕೊರೋನಾ ಮರಣ ಮೃದಂಗ, ಬಾಸ್ಟನ್ ದಿನಪತ್ರಿಕೆ 15 ಪುಟ ಶ್ರದ್ಧಾಂಜಲಿಗೆ ಮೀಸಲು!.
54 ವರ್ಷದ ಮೋನಾ ಸಿಂಗ್ ಪಟಿಯಾಲ ಮೆಡಿಕಲ್ ಕಾಲೇಜಿನಲ್ಲಿ ಓದಿದ್ದರು. 1990ರಲ್ಲಿ ಅಮೆರಿಕಾಗೆ ತೆರಳಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ವೈದ್ಯೆಯಾಗಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2ಲಕ್ಷ ದಾಟಿದೆ. ಇನ್ನು 18,000 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಅಮೆರಿಕಾದಲ್ಲಿ ಪರಿಸ್ಥಿತಿ ಗಂಭೀರವಾಗಿರುವ ಕಾರಣ ಲಾಕ್‌ಡೌನ್ ಅವಧಿಯನ್ನು ಮೇ.15ರ ವರೆಗೆ ವಿಸ್ತರಿಸಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.