ಟೆನಿಸ್‌ ಸಂಸ್ಥೆಯ ಆಜೀವ ಅಧ್ಯಕ್ಷ ಸ್ಥಾನ ಕಳಕೊಂಡ ಮಾಜಿ ಸಿಎಂ ಕೃಷ್ಣ

By Suvarna News  |  First Published Apr 19, 2020, 7:56 AM IST

ಅಖಿಲ ಭಾರತ ಟೆನಿಸ್‌ ಸಂಸ್ಥೆಯ ಅಜೀವ ಸದಸ್ಯರಾಗಿದ್ದ ಎಸ್‌.ಎಂ ಕೃಷ್ಣ ತಮ್ಮ ಹುದ್ದೆಯನ್ನು ಕಳೆದುಕೊಂಡಿದ್ದಾರೆ. ಕೃಷ್ಣ ಸೇರಿದಂತೆ ಮೂವರು ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಏ.19): ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಆಜೀವ ಅಧ್ಯಕ್ಷ ಸ್ಥಾನವನ್ನು ಕೇಂದ್ರದ ಮಾಜಿ ಸಚಿವ, ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಳೆದುಕೊಂಡಿದ್ದಾರೆ. 

ಕೇಂದ್ರ ಕ್ರೀಡಾ ಸಚಿವಾಲಯದ ಆದೇಶದ ಮೇರೆಗೆ ಎಐಟಿಎ, ಆಜೀವ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳನ್ನು ರದ್ದುಗೊಳಿಸಿದೆ. ರಾಷ್ಟ್ರೀಯ ಕ್ರೀಡಾಭಿವೃದ್ಧಿ ಸಂಹಿತೆ ಪ್ರಕಾರ ಆಜೀವ ಹುದ್ದೆಗಳು ಇರುವಂತಿಲ್ಲ. ಹೀಗಾಗಿ, ಹುದ್ದೆ ರದ್ದುಗೊಳಿಸುವಂತೆ ಸಚಿವಾಲಯ ಆದೇಶಿಸಿತ್ತು.

Tap to resize

Latest Videos

ಸರ್ಕಾರದ ಈ ತೀರ್ಮಾನದಿಂದಾಗಿ ಕೃಷ್ಣ ಮಾತ್ರವಲ್ಲದೇ, ಹಿರಿಯ ಕ್ರೀಡಾ ಆಡಳಿತಾಧಿಕಾರಿ ಆನಿಲ್ ಖನ್ನಾ, ಮಾಜಿ ಸಚಿವ ಯಶ್ವಂತ್ ಸಿನ್ಹಾ ಆಜೀವ ಹುದ್ದೆ ಗೌರವವನ್ನು ಕಳೆದುಕೊಂಡಿದ್ದಾರೆ. ಕ್ರೀಡಾ ಅಜೀವ ಹುದ್ದೆಗಳನ್ನು ಪ್ರಶ್ನಿಸಿ ಇತ್ತೀಚೆಗಷ್ಟೇ ಡೆಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಈ ಎಲ್ಲಾ ಹುದ್ದೆಗಳನ್ನು ರದ್ದುಪಡಿಸಿದೆ.

ಮೋಟಮ್ಮ ಮದ್ವೆಯಲ್ಲಿ ದಿಗ್ಗಜರ ಜೂಟಾಟ: SM ಕೃಷ್ಣ ಚರಿತ್ರೆಯಲ್ಲಿ ರಾಜಕೀಯ ರಹಸ್ಯ ಸ್ಫೋಟ

ಟೆನಿಸ್ ಕ್ರೀಡಾ ಅಭಿಮಾನಿಯಾಗಿರುವ ಎಸ್‌. ಎಂ. ಸಮಯ ಸಿಕ್ಕಾಗಲೆಲ್ಲಾ ಟೆನಿಸ್ ಪಂದ್ಯಗಳನ್ನು ವೀಕ್ಷಿಸುತ್ತಿರುತ್ತಾರೆ. ವಿದೇಶಾಂಗ ಸಚಿವರಾಗಿದ್ದಾಗ ಲಂಡನ್‌ಗೆ ಭೇಟಿ ನೀಡಿದ್ದಾಗ ಬಿಡುವು ಮಾಡಿಕೊಂಡು ಸೆಂಟರ್‌ ಕೋರ್ಟ್‌ನಲ್ಲಿ ವಿಂಬಲ್ಡನ್ ಪಂದ್ಯಗಳನ್ನು ವೀಕ್ಷಿಸಿದ್ದರು. ಇದು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ನನ್ನ ಹಣದಲ್ಲಿ ನಾನು ಪಂದ್ಯವನ್ನು ವೀಕ್ಷಿಸಿದ್ದಾಗಿ ಕೃಷ್ಣ ಸ್ಪಷ್ಟನೆ ನೀಡಿದ್ದರು.

click me!