ಕೊಡವ ಕೌಟಂಬಿಕ ಹಾಕಿ ಉತ್ಸವದ ಲೋಗೋ, ಬ್ರೌಷರ್ ಬಿಡುಗಡೆ

By Suvarna News  |  First Published Feb 11, 2023, 9:01 PM IST

ಕಳೆದ ನಾಲ್ಕು ವರ್ಷಗಳಿಂದ ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ನಿಂದಾಗಿ ನಡೆದ ಕೊಡವ ಹಾಕಿ ಉತ್ಸವ ಮಾರ್ಚ್ ತಿಂಗಳಿನಲ್ಲಿ  ಅಪ್ಪಚೊಟ್ಟೊಳೊಂಡ ಕುಟುಂಬದ ನೇತೃತ್ವದಲ್ಲಿ ಮತ್ತೆ ಅದ್ದೂರಿಯಾಗಿ ನಡೆಯಲಿದ್ದು, ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮತ್ತು ಒಲಿಂಪಿಯನ್ ಎ.ಬಿ. ಸುಬ್ಬಯ್ಯ ಭ್ರೌಷರ್ ಬಿಡುಗಡೆ ಮಾಡಿದರು.  


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.11): ಕಳೆದ ನಾಲ್ಕು ವರ್ಷಗಳಿಂದ ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ನಿಂದಾಗಿ ನಡೆದ ಕೊಡವ ಹಾಕಿ ಉತ್ಸವ ಮಾರ್ಚ್ ತಿಂಗಳಿನಲ್ಲಿ ಮತ್ತೆ ಅದ್ದೂರಿಯಾಗಿ ನಡೆಯಲಿದ್ದು, ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮತ್ತು ಒಲಿಂಪಿಯನ್ ಎ.ಬಿ. ಸುಬ್ಬಯ್ಯ ಭ್ರೌಷರ್ ಬಿಡುಗಡೆ ಮಾಡಿದರು. ಮಾರ್ಚ್ ತಿಂಗಳಲ್ಲಿ ಒಂದು ತಿಂಗಳ ಕಾಲ ನಡೆಯುವ ಕೊಡವ ಕೌಟಂಬಿಕ ಹಾಕಿ ಉತ್ಸವದ ನೇತೃತ್ವದವನ್ನು ಅಪ್ಪಚೊಟ್ಟೊಳಂಡ ಕುಟುಂಬವು ವಹಿಸಲಿದೆ. ಈ ಬಾರಿ ನಡೆಯುತ್ತಿರುವ 23 ನೇ ಕೌಟಂಬಿಕ ಹಾಕಿ ಉತ್ಸವದಲ್ಲಿ 350 ತಂಡಗಳು ಭಾಗವಹಿಸಲಿವೆ ಎಂದು ಟೂರ್ನಮೆಂಟ್ ಕಮಿಟಿಯ ಸಂಚಾಲಕ ಮನುಮುತ್ತಪ್ಪ ಹೇಳಿದರು. ಕೊಡವ ಹಾಕಿಗೆ ತನ್ನದೇಯಾದ ವಿಶೇಷ ಪರಂಪರೆ ಇದ್ದು, ರಾಷ್ಟ್ರದ ಹಾಕಿಗೆ ಕೊಡಗು ಮಹತ್ವದ ಕೊಡುಗೆ ನೀಡಿದೆ. ಹಲವು ಆಟಗಾರರನ್ನು ರಾಷ್ಟ್ರಕ್ಕೆ ನೀಡಿದೆ. ಇದೀಗ ರಾಜ್ಯ ಸರ್ಕಾರ ಈ ಬಾರಿ ಹಾಕಿ ಉತ್ಸವಕ್ಕೆ ಒಂದು ಕೋಟಿ ಅನುದಾನ ಘೋಷಿಸುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಕೊಡಗಿನ ಹಾಕಿ ಕ್ರೀಡಾಪಟುಗಳನ್ನು ಉತ್ತಮ ಬೆಳವಣಿಗೆಗೆ ಸರ್ಕಾರ ಸಹಕಾರ ನೀಡುತ್ತಿದೆ ಎಂದರು.

Tap to resize

Latest Videos

undefined

ಲಾಂಛನ ಮತ್ತು ಬ್ರೌಷರ್ ಬಿಡುಗಡೆ ಮಾಡಿದ ಒಲಿಂಪಿಯನ್ ಎ.ಬಿ. ಸುಬ್ಬಯ್ಯ ಅವರು ಮಾತನಾಡಿ ಈ ಬಾರಿ ಅಪ್ಪಚೊಟ್ಟೊಳಂಡ ಕುಟುಂಬವು ಈ ಬಾರಿ ಕೊಡವ ಹಾಕಿ ಉತ್ಸವ ನೇತೃತ್ವ ವಹಿಸುತ್ತಿದೆ. ಇದರಿಂದ ಯುವ ಜನರು ಹಾಕಿಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ. ನಾವೂ ಕೂಡ ಈ ಹಾಕಿ ಉತ್ಸವದ ಚಾಲನೆಗೆ ಜೂನಿಯರ್ ಹಾಕಿ ತಂಡವು ಪ್ರದರ್ಶನ ಆಟ ಹಾಡಲಿದೆ. ಇದರಿಂದ ಕೊಡವ ಯುವ ಹಾಕಿ ಆಟಗಾರರನ್ನು ಪ್ರೋತ್ಸಾಹಿಸಲು ಅನಕೂಲವಾಗಲಿದೆ ಎಂದರು. ಕೊಡಗಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಹಾಕಿ ಉತ್ಸವದಲ್ಲಿ ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.

 ಕೊಡವ ಕೌಟಂಬಿಕ ಹಾಕಿ ಉತ್ಸವವು ಈಗಾಗಲೇ ಲಿಮ್ಕಾ ದಾಖಲೆ ಮಾಡಿದೆ, ಭಾರಿಯ ಕೊಡವ ಹಾಕಿ ಉತ್ಸವದಲ್ಲಿ ಹೆಚ್ಚಿನ ತಂಡಗಳು ಭಾಗವಹಿಸಿ ಗಿನ್ನಿಸ್ ದಾಖಲೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು. ಈಗಾಗಲೇ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಾಡುತ್ತಿರುವ ಹಾಕಿ ಆಟಗಾರರಿಗೆ ಮನವಿ ಮಾಡುತ್ತೇವೆ. ಕೊಡಗಿನಲ್ಲಿ ಬಂದು  ಹಾಕಿ ಆಡಿ, ಆ ಮೂಲಕ ಕೊಡಗಿನ ಹಾಕಿ ಆಟಗಾರರನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡುತ್ತೇವೆ ಎಂದರು.

 

ಕೊಡಗು-ಕೇರಳ ಗಡಿ ಗ್ರಾಮದಲ್ಲಿ ನಕ್ಸಲ್‌ ಪ್ರತ್ಯಕ್ಷ: ಆತಂಕ

ಶಾಸಕ ಕೆ.ಜಿ. ಬೋಪಯ್ಯ ಅವರು ಮಾತನಾಡಿ ಕೊಡಗಿನಲ್ಲಿ ಹಾಕಿ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಕಿ ಕೊಡಗಿನ ಹೆಮ್ಮೆಯ ಕ್ರೀಡೆಯಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಸಂದರ್ಭದಲ್ಲಿ ಕೊಡಗಿನ ವಿದ್ಯಾರ್ಥಿಗಳು ಹೆಚ್ಚಿನ ಎತ್ತರ ಇಲ್ಲದಿರುವುದರಿಂದ ಆಯ್ಕೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಯ್ಕೆ ಸಮಿತಿಗಳು ಎತ್ತರದ ವಿಷಯದಲ್ಲಿ ಒಂದಷ್ಟು ಸಡಿಲ ಮಾಡಿದರೆ ಕೊಡಗಿನ ಮತ್ತಷ್ಟು ವಿದ್ಯಾರ್ಥಿಗಳು ಆಯ್ಕೆ ಆಗಲು ಅನುಕೂಲವಾಗುತ್ತದೆ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿಯಾದ ಸುಬ್ಬಯ್ಯ ಅವರಿಗೆ ಹೇಳಿದರು.

ಕೊಡಗಿನ ಜಾನಪದ ಕಲೆಗಾರ್ತಿ ಪದ್ಮಶ್ರೀ ರಾಣಿ ಮಾಚ್ಚಯ್ಯ ಜೊತೆ ಮಾತುಕತೆ

ಇದೇ ಸಂದರ್ಭ ಕೊಡವ ಜಾನಪದ ನೃತ್ಯವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿ ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಮಡಿಕೇರಿಯ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

click me!