ನಿಷೇಧಿತ ವಸ್ತು ಬಳಕೆ ಸಾಬೀತು, ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅಮಾನತು!

By Suvarna News  |  First Published Feb 3, 2023, 10:07 PM IST

ಭಾರತದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ನಿಷೇಧಿತ ಔಷಧಿ ಬಳಕೆ ಮಾಡಿರುವುದು ಸಾಬೀತಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಡೋಪಿಂಗ್ ಸಂಸ್ಥೆ ದೀಪಾ ಕರ್ಮಾಕರ್‌‌ನ್ನು 21 ತಿಂಗಳ ಕಾಲ ಅಮಾನತು ಮಾಡಿದೆ.


ನವದಹೆಲಿ(ಫೆ.03): ಭಾರತದ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್ ನಿಷೇಧಿತ ವಸ್ತು ಬಳಸಿರುವುದು ಸಾಬೀತಾಗಿದೆ. ಕರ್ಮಾಕರ್ ವಿಶ್ವ ಡೋಪಿಂಗ್ ಎಜೆನ್ಸಿ ನಿಷೇಧಿತ ವಸ್ತುಗಳಲ್ಲಿ ಸೇರಿಸಿರುವ ಹಿಜನಮೈನ್(S3. ಬೀಟಾ-2 ಅಗೊನಿಸ್ಟ್‌) ಸೇವಿಸಿರುವುದು ಡೋಪಿಂಗ್ ಟೆಸ್ಟ್‌ನಲ್ಲಿ ಸಾಬೀತಾಗಿದೆ. ಕರ್ಮಾಕರ್ ವರದಿ ಪಾಸಿಟೀವ್ ಬಂದಿದೆ. ಹೀಗಾಗಿ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ITA) ದೀಪಾ ಕರ್ಮಾಕರ್ ಶಿಕ್ಷೆ ಪ್ರಕಟಿಸಿದೆ. 21 ತಿಂಗಳ ಕಾಲ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳದಂತೆ ಅಮಾನತು ಶಿಕ್ಷೆ ವಿಧಿಸಿದೆ.

2021ರ ಅಕ್ಟೋಬರ್ 11 ರಂದು ದೀಪಾ ಕರ್ಮಾಕರ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಫಲಿತಾಂಶ ಹೊರಬಿದ್ದಿತ್ತು. ಇದೀಗ ಶಿಕ್ಷೆ ಪ್ರಮಾಣ ಪ್ರಕಟಗೊಂಡಿದೆ. ಇಷ್ಟೇ ಅಲ್ಲ ಅಕ್ಟೋಬರ್ 11, 2021ರಂದು ದೀಪಾ ಕರ್ಮಾಕರ್ ಪಾಲ್ಗೊಂಡ ಕ್ರೀಡೆ ಫಲಿತಾಂಶಗಳನ್ನ ಅನರ್ಹಗೊಳಿಸಲಾಗಿದೆ.  

Latest Videos

undefined

 

2 ವರ್ಷ ನಿಷೇಧಕ್ಕೊಳಗಾದ ಜಿಮ್ನಾಸ್ಟಿಕ್ಸ್‌ ತಾರೆ ದೀಪಾ ಕರ್ಮಕಾರ್‌!

2021ರ ಅಕ್ಟೋಬರ್‌‍ನಿಂದ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳಲು ದೀಪಾ ಕರ್ಮಾಕರ್‌ಗೆ ಅವಕಾಶ ಇರಲಿಲ್ಲ. ಹೀಗಾಗಿ ಶಿಕ್ಷೆಯ ಬಹುತೇಕ ಭಾಗವನ್ನು ದೀಪಾ ಕರ್ಮಾಕರ್ ಈಗಾಗಲೇ ಪೂರೈಸಿದ್ದಾರೆ. 21 ತಿಂಗಳ ಕಾಲ ಶಿಕ್ಷೆ ಇದೇ ಜುಲೈ ತಿಂಗಳ 10ನೇ ತಾರಿಕಿಗೆ ಅಂತ್ಯಗೊಳ್ಳಲಿದೆ. 

ದೀಪಾ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇಷ್ಟೇ ಅಲ್ಲ ಒಲಿಂಪಿಕ್ ಜಿಮ್ನಾಸ್ಟಿಕ್‌ ಕಂಪ್ಲೀಟ್ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್ ಅನ್ನೋ ಹೆಗ್ಗಳಿಕೆಗೆ ದೀಪಾ ಕರ್ಮಾಕರ್ ಪಾತ್ರರಾಗಿದ್ದರು. ರಿಯೋ ಒಲಿಂಪಿಕ್ಸ್‌ನಲ್ಲಿ ಕೇವಲ  0.15 ಅಂಕಗಳಿಂದ ಪದಕ ಮಿಸ್ ಮಾಡಿಕೊಂಡಿದ್ದರು. 2014ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ದೀಪಾ ಕರ್ಮಾಕರ್ ಭಾರತದಲ್ಲಿ ಸಂಚಲನ ಮೂಡಿಸಿದ್ದರು.

2018ರಲ್ಲಿ ನಡೆದ ಮೆರಿಸಿನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದೀಪಾ ಕರ್ಮಾಕರ್ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದರು. ಈ ಮೂಲಕ ಜಿಮ್ನಾಸ್ಟ್‌ನಲ್ಲಿ ಚಿನ್ನ ಗೆದ್ದ ಮೊದಲ ಕ್ರೀಡಾಪಟು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಅಮಾತು ಶಿಕ್ಷೆಗೆ ಗುರಿಯಾಗಿದ್ದಾರೆ.

ಟೋಕಿಯೋ 2020 : ಫೈನಲ್ಸ್‌ಗೇರಲು ವಿಫಲರಾದ ಜಿಮ್ನಾಸ್ಟಿಕ್ಸ್‌ ಪಟು ಪ್ರಣತಿ ನಾಯಕ್‌

ಇತ್ತೀಚೆಗೆ ಭಾರತದ ತಾರಾ ಅಥ್ಲೀಟ್‌ ದ್ಯುತಿ ಚಂದ್‌ ನಿಷೇಧಿತ ಸ್ಟೀರಾಯ್ಡ್‌ ಸೇವಿಸಿದ್ದು ದೃಢಪಟ್ಟಿತ್ತು. ಹೀಗಾಗಿ ತಾತ್ಕಾಲಿಕವಾಗಿ ದ್ಯುತಿ ಚಂದ್‌ ಅಮಾನತುಗೊಂಡಿದ್ದಾರೆ. 26 ವರ್ಷದ ದ್ಯುತಿಯ ಮೂತ್ರದ ಮಾದರಿಯನ್ನು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ಕಳೆದ ಡಿಸೆಂಬರ್‌ನಲ್ಲಿ ಭುವನೇಶ್ವರದಲ್ಲಿ ಸಂಗ್ರಹಿಸಿತ್ತು. ವರದಿಯಲ್ಲಿ ದ್ಯುತಿ ನಿಷೇಧಿತ ಮದ್ದು ಸೇವಿಸಿದ್ದು ಕಂಡುಬಂದಿದ್ದರಿಂದ ಅವರಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಆದರೆ ಈ ಆರೋಪವನ್ನು ದ್ಯುತಿ ನಿರಾಕರಿಸಿದ್ದು, ಇದುವರೆಗೂ ನಿಷೇಧಿತ ಡ್ರಗ್ಸ್ ಮುಟ್ಟಿಯೇ ಇಲ್ಲ, ನಾನು ಅಮಾಯಕಿ ಎಂದು ಹೇಳಿದ್ದಾರೆ.

click me!