ಭಾರತೀಯ ಕ್ರೀಡಾಪಟುಗಳು ದಕ್ಷಿಣ ಏಷ್ಯನ್ ಗೇಮ್ಸ್ ಕೂಟದಲ್ಲಿ ಎರಡನೇ ದಿನವೂ ಪಾರಮ್ಯ ಮೆರೆದಿದ್ದು 27 ಪದಕಗಳನ್ನು ಬಾಚಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಾಠ್ಮಂಡು[ಡಿ.04]: ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಕೂಟದ 2ನೇ ದಿನವಾದ ಮಂಗಳವಾರ ಭಾರತ 11 ಚಿನ್ನ ಸೇರಿ ಬರೋಬ್ಬರಿ 27 ಪದಕಗಳನ್ನು ಗೆದ್ದುಕೊಂಡಿತು.
ವಾಲಿಬಾಲ್: ಭಾರತ ತಂಡಗಳು ಸೆಮೀಸ್‌ಗೆ
ಅಥ್ಲೆಟಿಕ್ಸ್ನಲ್ಲಿ 10 ಪದಕ (4 ಚಿನ್ನ, 4 ಬೆಳ್ಳಿ, 2 ಕಂಚು) ಹಾಗೂ ಶೂಟಿಂಗ್‌ನಲ್ಲಿ 9 ಪದಕ (4 ಚಿನ್ನ, 4 ಬೆಳ್ಳಿ, 1 ಕಂಚು) ದೊರೆಯಿತು. ವಾಲಿಬಾಲ್ನಲ್ಲಿ ಪುರುಷ ಹಾಗೂ ಮಹಿಳಾ ತಂಡಗಳು ಚಿನ್ನ ಗೆದ್ದರೆ, ಟೇಕ್ವಾಂಡೋನಲ್ಲಿ 1 ಚಿನ್ನ, 3 ಕಂಚು ಒಲಿಯಿತು. ಟೇಬಲ್ ಟೆನಿಸ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳಾ ತಂಡಗಳು ಚಿನ್ನ ಜಯಿಸಿದವು.
ದಕ್ಷಿಣ ಏಷ್ಯನ್ ಗೇಮ್ಸ್‌ಗೆ ಭಾರತ ಕಬಡ್ಡಿ ತಂಡ ಪ್ರಕಟ: ಬುಲ್ಸ್ ನಾಯಕ ಪವನ್‌ಗೆ ಜಾಕ್‌ಪಾಟ್..!
ಭಾರತ ಒಟ್ಟು 18 ಚಿನ್ನ, 16 ಬೆಳ್ಳಿ, 9 ಕಂಚಿನ ಪದಕಗಳೊಂದಿಗೆ ಒಟ್ಟು 43 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆತಿಥೇಯ ನೇಪಾಳ 44 ಪದಕಗಳೊಂದಿಗೆ (23 ಚಿನ್ನ, 9 ಬೆಳ್ಳಿ, 12 ಕಂಚು) ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾ 46 ಪದಕಗಳು (5 ಚಿನ್ನ, 14 ಬೆಳ್ಳಿ, 27 ಕಂಚು) ಗೆದ್ದು 3ನೇ ಸ್ಥಾನದಲ್ಲಿದೆ. ಖೋ ಖೋನಲ್ಲಿ ಭಾರತ ಪುರುಷ, ಮಹಿಳಾ ತಂಡಗಳು ಫೈನಲ್‌ಗೇರಿದ್ದು, ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿವೆ. ಕ್ರೀಡಾಕೂಟದಲ್ಲಿ ಒಟ್ಟು 7 ರಾಷ್ಟ್ರಗಳ 2715 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.