ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಗೋಪಿಚಂದ್ ಬೆಂಬಲಿತ ಧ್ಯಾನಾ ಜೊತೆ ಸಹಭಾಗಿತ್ವ ಘೋಷಿಸಿದ IOA!

By Suvarna NewsFirst Published Jul 12, 2021, 5:58 PM IST
Highlights
  • ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಧ್ಯಾನಾ ಪಾಲುದಾರಿಕೆ
  •  ಧ್ಯಾನಾ ಜೊತೆ ಸಹಭಾಗಿತ್ವ ಘೋಷಿಸಿದ ಭಾರತೀಯ ಒಲಿಂಪಿಕ್ ಅಸೋಸಿಯೇಷನ್
  • ಪುಲ್ಲೇಲ ಗೋಪಿಚಂದ್ ಬೆಂಬಲಿತ ಧ್ಯಾನಾ ಮೆಡಿಟೇಶನ್ ಸ್ಮಾರ್ಟ್ ಉಂಗುರ

ನವದೆಹಲಿ(ಜು.12); ಟೊಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಸಕಲ ರೀತಿಯಲ್ಲೂ ಸಜ್ಜಾಗಿದೆ. ಕೊರೋನಾ ನಡುವೆ ಅರ್ಹತೆ ಪಡೆದ ಕ್ರೀಡಾಪಟುಗಳು ಕಠಿಣ ಅಭ್ಯಾಸ ಮಾಡಿದ್ದಾರೆ. ಇತ್ತ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(IOA)ಕ್ರೀಡಾಪಟುಗಳಿಗೆ ಎಲ್ಲಾ ನೆರವನ್ನು ನೀಡುತ್ತಿದೆ. ಇದೀಗ ಕ್ರೀಡಾಪಟುಗಳ ಮೆಡಿಟೇಶನ್‌ಗಾಗಿ ಧ್ಯಾನಾ ಜೊತೆಗೆ IOA ಅಧೀಕೃತ ಪಾಲುದಾರಿಕೆ ಪ್ರಕಟಿಸಿದೆ.

ಟೊಕಿಯೊ ಒಲಿಂಪಿಕ್ಸ್: ಭಾರತ ಪ್ರತಿನಿಧಿಸಲಿರುವ ಕ್ರೀಡಾಪಟುಗಳೊಂದಿಗೆ ಮೋದಿ ಸಂವಾದ!

ಟೊಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳಲಿರುವ ಎಲ್ಲಾ ಭಾರತೀಯ ಕ್ರೀಡಾಪಟುಗಳಿಗೆ ಧ್ಯಾನಾ ಸಂಸ್ಥೆಯ ಸ್ಮಾರ್ಟ್ ಉಂಗುರ ನೀಡಲಾಗುತ್ತದೆ. ಈ ಸ್ಮಾರ್ಟ್ ಉಂಗುರಿಂದ ಕ್ರೀಡಾಪಟುಗಳು ಧ್ಯಾನ, ಆರೋಗ್ಯ ನಿರ್ವಹಣಾ ಸೇವೆ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಮೂಲಕ IOA ಕೊರೋನಾ ಸಾಂಕ್ರಾಮಿಕದ ನಡುವೆ ಕ್ರೀಡಾಪಟುಗಳ ಮಾನಸಿಕ ಸ್ವಾಸ್ಥ್ಯಕ್ಕೆ ಆದ್ಯತೆ ನೀಡಲು ಮತ್ತು ಆಟಗಾರರ ಗಮನವನ್ನು ಸುಧಾರಿಸಲು ಈ ದಿಟ್ಟ ಹೆಜ್ಜೆ ಇಟ್ಟಿದೆ.

ಭಾರತೀಯ ಬ್ಯಾಡ್ಮಿಂಟನ್ ದಂತಕತೆ ಪುಲ್ಲೇಲಾ ಗೋಪಿಚಂದ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಳೇ ವಿದ್ಯಾರ್ಥಿ ಹಾಗೂ ಬಯೋಮೆಡಿಕಲ್ ತಂತ್ರಜ್ಞಾನ ಉದ್ಯಮಿ ಭೈರವ್ ಶಂಕರ್ ಜಂಟಿಯಾಗಿ ಈ ಧ್ಯಾನಾ ಸ್ಮಾರ್ಟ್ ಉಂಗುರ ಅಭಿವೃದ್ಧಿಪಡಿಸಲಾಗಿದೆ. ಈ ಸ್ಮಾರ್ಟ್ ಉಂಗುರ ಹಲವು ವಿಶೇಷತೆಗಳನ್ನು ಹೊಂದಿದೆ. ಕ್ರೀಡಾಪಟುಗಳ ಹೃದಯ ಬಡಿತ ವ್ಯತ್ಯಾಸ (ಎಚ್‌ಆರ್‌ವಿ) ಅಥವಾ ಸತತ ಎರಡು ಹೃದಯ ಬಡಿತಗಳ ನಡುವಿನ ಅಂತರವನ್ನು ನಿರಂತರವಾಗಿ ಪತ್ತೆಹಚ್ಚಲಿದೆ, ಇದು ಪ್ರತಿ ಧ್ಯಾನ ಅಧಿವೇಶನವನ್ನು ಉಸಿರಾಟದ ಗುಣಮಟ್ಟ, ಗಮನ ಮತ್ತು ವಿಶ್ರಾಂತಿ ಎಂದು ಮೂರು ಮೂಲಭೂತ ಅಂಶಗಳಾಗಿ ವಿಂಗಡಿಸಿದೆ.

ಈ ಸ್ಮಾರ್ಟ್ ಉಂಗುರಗಳನ್ನು ಪುಲ್ಲೇಲ ಗೋಪಿಚಂದ್ ತಮ್ಮ ಅಕಾಡೆಮಿ ವಿದ್ಯಾರ್ಥಿಗಳಿಗೆ ಈಗಾಗಲೇ ನೀಡಿ ಯಶಸ್ಸು ಗಳಿಸಿದ್ದಾರೆ. ಈ ಸ್ಮಾರ್ಟ್ ಉಂಗುರದಿಂದ ಗೋಪಿಚಂದ್ ಅಕಾಡೆಮಿ ಕ್ರೀಡಾಪಟುಗಳ ಪ್ರದರ್ಶನದಲ್ಲಿ ಸುಧಾರಣೆಯಾಗಿರುವುದು ಸಾಬೀತಾಗಿದೆ.

ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದ ವಿ ರೇವತಿ!

ಭಾರತ ಧ್ಯಾನ(ಮೆಡಿಟೇಶನ್) ವಿಭಾಗದಲ್ಲಿ ಶ್ರೀಮಂತ ಇತಿಹಾಸ ಹಾಗೂ ಪರಂಪರೆ ಹೊಂದಿದೆ. ಇದನ್ನು ತಂತ್ರಜ್ಞಾನದ ಮೂಲಕ ಇದೀಗ ಕ್ರೀಡಾಪಟುಗಳಿಗೆ ನೀಡಲಾಗಿದೆ. ಇದೀಗ ಭಾರತದಲ್ಲಿ ತಯಾರಾದ ಧ್ಯಾನ, ಒಲಿಂಪಿಕ್ಸ್‌ನಲ್ಲಿ ಬಳಸುವ ಮೊದಲ ಅಧಿಕೃತ ಮೆಡಿಟೇಶನ್ ಸಾಧನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಧ್ಯಾನದಿಂದ ಒತ್ತಡ ನಿಭಾಯಿಸಲು, ಗಮನ ಕೇಂದ್ರೀಕರಿಸಲು, ಸರೃಕರಾತ್ಮಕ ಮನಸ್ಸು ಸೇರಿದಂತೆ ಹಲವು ಪ್ರಯೋಜನಗಳು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದನ್ನು ಕೆಲ ತಂತ್ರಜ್ಞಾನ ಬಳಸಿ ಇದೀಗ ಸ್ಮಾರ್ಟ್ ಉಂಗುರವಾಗಿ ಕ್ರೀಡಾಪಟುಗಳಿಗೆ ನೀಡಲಾಗಿದೆ. ಈಗಾಗಲೇ ಕ್ರೀಡಾಪಟುಗಳು ಈ ಸ್ಮಾರ್ಟ್ ಉಂಗುರ ಬಳಸಿ ಯಶಸ್ಸು ಕಂಡಿದ್ದಾರೆ. ಇದೀಗ  IOA ಜೊತೆ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಪಾಲುದಾರಿಕೆ ಪಡೆದಿರುವುದು ಅತೀವ ಸಂತಸ ತಂದಿದೆ ಎಂದು ಧ್ಯಾನಾ ವ್ಯವಸ್ಥಾಪಕ ನಿರ್ದೇಶಕ ಭೈರವ್ ಶಂಕರ್ ಹೇಳಿದರು.

ಪುಲ್ಲೇಲ ಆಲ್ ಇಂಗ್ಲೆಂಡ್ ಚಾಂಪಿಯನ್‌ ಗರಿಗೆ 20 ವರ್ಷ; ಭಾರತದ ಬ್ಯಾಡ್ಮಿಂಟನ್‌ಗೆ ಹೊಸ ಸ್ವರ್ಶ!

ಒಲಿಂಪಿಕ್ಸ್ ಕ್ರೀಡಾಕೂಟ ಪ್ರತಿ ಕ್ರೀಡಾಪಟುವಿಗೆ ಅತ್ಯಂತ ಸವಾಲಿನದ್ದಾಗಿದೆ.  ಅಸಾಧಾರಣ ಸನ್ನಿವೇಶ, ಸವಾಲುಗಳಿಂದ ಕ್ರೀಡಾಪಟುಗಳ ವಿಶ್ವಾಸ, ಮಾನಸ್ಥಿಕ ಸ್ವಾಸ್ಥ್ಯ, ಏಕಾಗ್ರತೆಗೆ ಭಂಗಬರಲಿದೆ. ಇದಕ್ಕೆ ಧ್ಯಾನ ಅತ್ಯುತ್ತಮ ಉತ್ತರವಾಗಿದೆ. ನಾನು ಯಾವಾಗಲೂ ಧ್ಯಾನದ ಪ್ರಯೋಜನ ಪಡೆಯುತ್ತೇನೆ. ಕ್ರೀಡಾಪಟುವಾಗಿ, ಕೋಚ್ ಆಗಿ ಧ್ಯಾನ ಉತ್ತಮವಾಗಿ ಕೆಲಸ ನಿರ್ವಹಿಸುವ ವಿಶ್ವಾಸವಿದೆ ಎಂದು ಧ್ಯಾನಾ ನಿರ್ದೇಶಕ ಹಾಗೂ ಇಂಡಿಯನ್ ಬ್ಯಾಡ್ಮಿಂಟನ್ ತಂಡದ ಮುಖ್ಯ ತರಬೇತುದಾರ ಪುಲ್ಲೆಲಾ ಗೋಪಿಚಂದ್ ಹೇಳಿದ್ದಾರೆ.
 

click me!