ಟೊಕಿಯೊ ಒಲಿಂಪಿಕ್ಸ್: ಭಾರತ ಪ್ರತಿನಿಧಿಸಲಿರುವ ಕ್ರೀಡಾಪಟುಗಳೊಂದಿಗೆ ಮೋದಿ ಸಂವಾದ!

By Suvarna News  |  First Published Jul 11, 2021, 5:46 PM IST
  • ಕ್ರೀಡಾಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ
  • ಜುಲೈ 13 ರಂದು ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಲಿದ್ದಾರೆ ಮೋದಿ
  • ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿ ಇಬ್ಬರು ರಾಜ್ಯ ಖಾತೆ ಸಚಿವರು ಭಾಗಿ

ನವದೆಹಲಿ(ಜು.11):  ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಸಜ್ಜಾಗಿದೆ. ಕೊರೋನಾ ಸಂಕಷ್ಟ ಸೇರಿದಂತೆ ಹಲವು ಅಡೆ ತಡೆ ನಡುವೆ ಭಾರತೀಯ ಕ್ರೀಡಾಪಟುಗಳು ಒಲಿಂಪಿಕ್ಸ್ ಕೂಟಕ್ಕೆ ತಯಾರಿ ನಡೆಸಿದ್ದಾರೆ. ಈ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಲು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಂವಾದ ನಡೆಸಲಿದ್ದಾರೆ. 

ಗುರಿ ನಿನ್ನ ಮುಂದಿದೆ, ಗೆದ್ದು ಬನ್ನಿ: ಭಾರತದ ಒಲಿಂಪಿಕ್ಸ್ ಧ್ಯೇಯ ಗೀತೆ ಬಿಡುಗಡೆ

Tap to resize

Latest Videos

ಜುಲೈ 13 ರಂದು ಮೋದಿ, ಭಾರತೀಯ ಕ್ರೀಡಾಪಟುಗಳ ಜೊತೆ ಸಂವಾದ ನಡೆಸಲಿದ್ದಾರೆ.  ಈ ಕಾರ್ಯಕ್ರಮದಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ , ಕೇಂದ್ರ ರಾಜ್ಯ ಯುವ ವ್ಯವಹಾರ ಮತ್ತು ಕ್ರೀಡೆ  ನಿಸಿತ್ ಪ್ರಮಾಣಿಕ್ ಮತ್ತು ಕಾನೂನು ಸಚಿವ  ಕಿರೆನ್ ರಿಜಿಜು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಂವಹನ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳನ್ನು ಪ್ರೇರಿಪಿಸುವ ಪ್ರಯತ್ನವಾಗಿದೆ ಎಂದು ಮೋದಿ ಹೇಳಿದ್ದಾರೆ. ಇತ್ತೀಚೆಗೆ ಮನ್‌ಕಿ ಬಾತ್ ಕಾರ್ಯಕ್ರಮದಲ್ಲೂ ಕ್ರೀಡಾಪಟುಗಳ ಸ್ಪೂರ್ತಿದಾಯದ ಪಯಣದ ಬಗ್ಗೆ ಚರ್ಚಿಸಿದ್ದರು. ಟೊಕಿಯೊ ಒಲಿಂಪಿಕ್ಸ್ ಟೂರ್ನಿಗೆ ಭಾರತದ ಸಿದ್ಧತೆ ಕುರಿತು ಮೋದಿ ಪರಿಶೀಲನೆ ನಡೆಸಿದ್ದಾರೆ.

ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದ ವಿ ರೇವತಿ!

ಭಾರತ ತಂಡ:
ಟೊಕಿಯೊ ಒಲಿಂಪಿಕ್ಸ್ ಕೂಟದಲ್ಲಿ ಭಾರತ 18 ವಿಭಾಗದಲ್ಲಿ ಸ್ಪರ್ಧಿಸಲಿದೆ. ಇದಕ್ಕಾಗಿ 126 ಕ್ರೀಡಾಪಟುಗಳು ಜಪಾನ್ ರಾಜಧಾನಿ ಟೋಕಿಯೊಗೆ ತೆರಳಿದ್ದಾರೆ. ಈ ಹಿಂದಿನ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೋಲಿಸಿದರೆ ಈ ಬಾರಿ ಗರಿಷ್ಠ ಕ್ರೀಡಾಪಟುಗಳನ್ನು ಭಾರತ ಟೊಕಿಯೊ ಒಲಿಂಪಿಕ್ಸ್‌ಗೆ ಕಳುಹಿಸುತ್ತಿದೆ. 

ಭಾರತ ಇದೇ ಮೊದಲ ಬಾರಿಗೆ ಫೆನ್ಸರ್ ಕ್ರೀಡೆಯಲ್ಲಿ ಸ್ಪರ್ಧಿಸುತ್ತಿದೆ. ಭಾರತದ ಭವಾನಿ ದೇವಿ ಫೆನ್ಸರ್ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಸೈಲರ್ ವಿಭಾಗದಲ್ಲಿ ನೇತ್ರಾ ಕುಮಾರ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳೆ ಆಗಿದ್ದಾರೆ. ಇನ್ನು ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಈಜುಗಾರರಾದ ಸಜನ್ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್ ಕೂಡ ಈ ಬಾರಿಯ ಒಲಿಂಪಿಕ್ಸ್ ಕೂಟದ ವಿಶೇಷತೆ ಹಾಗೂ ಹೆಗ್ಗಳಿಕೆಯಾಗಿದೆ.
 

click me!