ಇಂಡೋನೇಷ್ಯಾ ಮಾಸ್ಟರ್ಸ್: ಸಿಂಧು-ಸೈನಾ ಮುಖಾಮುಖಿ?

By Kannadaprabha News  |  First Published Jan 14, 2020, 11:01 AM IST

ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಮುಖಾಮುಖಿಯಾಗುವ ಸಾಧ್ಯತೆಯಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..


ಜಕಾರ್ತ(ಜ.14): ಒಲಿಂಪಿಕ್ ಪದಕ ವಿಜೇತೆ ಯರಾದ ಭಾರತದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್, ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಇಂಡೋನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. 

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌; ಭಾರತದ ಸವಾಲು ಅಂತ್ಯ

Tap to resize

Latest Videos

ಮಹಿಳಾ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿರುವ ಈ ಇಬ್ಬರು, 2ನೇ ಸುತ್ತಿನಲ್ಲಿ ಎದುರಾಗುವ ನಿರೀಕ್ಷೆ ಇದೆ. ಕಳೆದ ವಾರ ನಡೆದ ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಇಬ್ಬರೂ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡಿದ್ದರು. 5ನೇ ಶ್ರೇಯಾಂಕಿತೆ ಪಿ.ವಿ. ಸಿಂಧುಗೆ ಮೊದಲ ಸುತ್ತಿನಲ್ಲಿ ಜಪಾನ್‌ನ ಅಯಾ ಒಹೊರಿ ಎದುರಾಗಲಿದ್ದಾರೆ. ಮಲೇಷ್ಯಾ ಮಾಸ್ಟರ್ಸ್‌ನ 2ನೇ ಸುತ್ತಿನಲ್ಲಿ ಒಹೊರಿ ವಿರುದ್ಧ ಸಿಂಧು ಜಯಿಸಿದ್ದರು. 

3 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡ ಸೆರೆನಾ..!

ಸೈನಾ ಜಪಾನ್‌ನ ಸಕಾಯ ಟಕಹಾಶಿ ವಿರುದ್ಧ ಆಡಲಿದ್ದಾರೆ. ಸಿಂಧು ವಿರುದ್ಧ ಸೈನಾ 3-1 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್, ಬಿ.ಸಾಯಿಪ್ರಣೀತ್, ಪಿ.ಕಶ್ಯಪ್, ಸಮೀರ್ ವರ್ಮಾ ಹಾಗೂ ಪ್ರಣಯ್ ಸ್ಪರ್ಧಿಸಲಿದ್ದಾರೆ. ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದು, ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಮಹಿಳಾ ಡಬಲ್ಸ್‌ನಲ್ಲಿ ಆಡಲಿ ದೆ. ಮಿಶ್ರ ಡಬಲ್ಸ್ ನಲ್ಲಿ ಸಾತ್ವಿಕ್-ಅಶ್ವಿನಿ ಹಾಗೂ ಪ್ರಣವ್ ಚೋಪ್ರಾ-ಸಿಕ್ಕಿ ರೆಡ್ಡಿ ಆಡಲಿದ್ದಾರೆ.
 

click me!