
ರಿಯಾದ್(ಜ.13): ವಿಶ್ವದ ಅತ್ಯಂತ ಕಠಿಣ ಮೋಟಾರ್ ರ‍್ಯಾಲಿ ಡಕಾರ್‌ನಲ್ಲಿ ಅಹಿತಕರ ಘಟನೆಯೊಂದು ಸಂಭವಿಸಿದೆ.
ಗಿಲ್ ಕಾರಿಗೆ ಅಡ್ಡ ಬಂದ ಮೂವರ ದುರ್ಮರಣ
ಪೋರ್ಚುಗಲ್‌ನ ಅನುಭವಿ ಸವಾರ ಪೌಲೋ ಗೊಂಕಾಲ್ವೆಸ್ ಭಾನುವಾರ ಅಪಘಾತಕ್ಕೊಳಗಾಗಿ ಹೃದಾಯಾಘಾತದಿಂದ ಸಾವನ್ನಪ್ಪಿದ್ದಾರೆ. 13ನೇ ಬಾರಿಗೆ ಡಕಾರ್ ರಾರಯಲಿಯಲ್ಲಿ ಪಾಲ್ಗೊಂಡಿದ್ದ ಅವರು 4 ಬಾರಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದರು. 2015ರಲ್ಲಿ ರನ್ನರ್-ಅಪ್ ಪ್ರಶಸ್ತಿ ಸಹ ಗೆದ್ದಿದ್ದರು.
40 ವರ್ಷದ ಪೌಲೋ, ಭಾರತದ ಹೀರೋ ಮೋಟಾರ್‌ಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. 7ನೇ ಸ್ಟೇಜ್‌ನಲ್ಲಿ 276 ಕಿ.ಮೀ ಕ್ರಮಿಸಿದ ಬಳಿಕ ಅಪಘಾತಕ್ಕೀಡಾದರು. ತಕ್ಷಣ ಅವರನ್ನು ಕರೆತರಲು ಹೆಲಿಕಾಪ್ಟರ್ ಕಳುಹಿಸಲಾಯಿತು. ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಅವರು ಹೃದಯಾಘಾತದಿಂದ ಪ್ರಾಣಬಿಟ್ಟಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.