110 ದಿನದಲ್ಲಿ 6 ಸಾವಿರ ಕಿ.ಮೀ. ಓಡಿ ಗಿನ್ನೆಸ್ ದಾಖಲೆ ಬರೆದ ಸುಫಿಯಾ ಖಾನ್

By Anusha Kb  |  First Published Mar 30, 2022, 4:03 PM IST
  • ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಜಾಲದಲ್ಲಿ ಓಟ
  • 110 ದಿನದಲ್ಲಿ 6 ಸಾವಿರ ಕಿ.ಮೀ. ಕ್ರಮಿಸಿದ ಸೂಫಿಯಾ
  • ಗಿನ್ನೆಸ್ ಪುಟ ಸೇರಿದ ಸುಫಿಯಾ ಖಾನ್
     

ನವದೆಹಲಿ(ಮಾ.30): ಭಾರತದ ಅಲ್ಟ್ರಾ ಓಟಗಾರ್ತಿ ಸೂಫಿಯಾ ಖಾನ್ (Sufiya Khan)ಅವರು 110 ದಿನಗಳು, 23 ಗಂಟೆಗಳು ಮತ್ತು 24 ನಿಮಿಷಗಳ ಕಾಲ 'ಗೋಲ್ಡನ್ ಚತುರ್ಭುಜ'(Golden Quadrilateral)ದಲ್ಲಿ 6,002 ಕಿಮೀ ಕ್ರಮಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ. ಗೋಲ್ಡನ್ ಕ್ವಾಡ್ರಿಲ್ಯಾಟರಲ್ (Golden Quadrilateral) ಎಂದರೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು ಇದು ದೇಶದ ಪ್ರಮುಖ ಕೃಷಿ, ಕೈಗಾರಿಕೆ ಹಾಗೂ ಸಾಂಸ್ಕೃತಿಕ ವಲಯವನ್ನು ಸಂಪರ್ಕಿಸುತ್ತದೆ. ದೆಹಲಿ (Delhi), ಕೋಲ್ಕತ್ತಾ(Kolkata), ಮುಂಬೈ (Mumbai) ಮತ್ತು ಚೆನ್ನೈ(Chennai) ಗಳನ್ನು ಸಂಪರ್ಕಿಸುವ ಹೆದ್ದಾರಿಗಳ ಜಾಲದಲ್ಲಿ ಓಡುವುದನ್ನು ಒಳಗೊಂಡಿರುವ ಈ ಸವಾಲನ್ನು ಮಹಿಳೆಯೊಬ್ಬರು ಅತ್ಯಂತ ವೇಗವಾಗಿ ಮಾಡಿ ಮುಗಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಭಾರತೀಯ ಸುವರ್ಣ ಚತುರ್ಭುಜವನ್ನು ಕಾಲ್ನಡಿಗೆಯ ಮೂಲಕ ವೇಗವಾಗಿ ಪೂರ್ಣಗೊಳಿಸಿದ ಮಹಿಳೆ ಎಂಬ ಸಾಧನೆಗೆ ಸೂಫಿಯಾ ಖಾನ್ ಪಾತ್ರರಾಗಿದ್ದಾರೆ.

ಸೂಫಿಯಾ 2020ರ ಡಿಸೆಂಬರ್ 16 ರಂದು ನವದೆಹಲಿಯಿಂದ ಈ ಓಟ ಆರಂಭಿಸಿದ್ದರು ಮತ್ತು ಏಪ್ರಿಲ್ 6, 2021 ರಂದು ಕೊನೆಗೊಳಿಸಿದ್ದರು. ಭಾನುವಾರ ಸೂಫಿಯಾ ಖಾನ್‌ ಗಿನ್ನೆಸ್ ಪ್ರಮಾಣಪತ್ರವನ್ನು ಸ್ವೀಕರಿಸಿದ ನಂತರ ಈ ದಾಖಲೆಯನ್ನು ದೃಢಪಡಿಸಲಾಯಿತು. 35 ವರ್ಷದ ಖಾನ್‌ಅವರು 2017ರಲ್ಲಿ ತನ್ನ ಜೀವನದ ಮೊದಲ ಮ್ಯಾರಥಾನ್ ಆರಂಭಿಸಿದರು. ಕೇವಲ ಎರಡು ವರ್ಷಗಳ ನಂತರ, ಅವರು ಅಲ್ಟ್ರಾ-ಡಿಸ್ಟೆನ್ಸ್ ಓಟವನ್ನು ಪ್ರಾರಂಭಿಸಿದರು ಮತ್ತು ಹೆದ್ದಾರಿಗಳ ಗೋಲ್ಡನ್ ಕ್ವಾಡ್ರಿಲ್ಯಾಟರಲ್ ನೆಟ್‌ವರ್ಕ್‌ನಲ್ಲಿ ಓಡಿ ಈ ಸಾಧನೆ ಮಾಡಿದರು.

Tap to resize

Latest Videos

Niranjoy Singh Record ನಿಮಿಷದಲ್ಲಿ 109 ಪುಶ್ಅಪ್ ಗಿನ್ನಿಸ್ ದಾಖಲೆ, ಮಣಿಪುರಿ ಯವಕನ ಸಾಧನೆಗೆ ಪ್ರಧಾನಿ ಮೋದಿ ಸಲಾಮ್!
 

It a Guinness World Records and It's Officially Amazing!!🏆🏆🏆
SUFIYA KHAN is Fastest female to run along The Indian Golden Quadrilateral Road (6002km in 110 days 23 hours)
Congratulations Sufiya Khan!!💪💪💪🥇🥇🥇 🇮🇳🇮🇳🇮🇳 pic.twitter.com/w88kJIOBpP

— Mohammad Mohsin I.A.S (@mmiask)

 

ಇದರ ಜೊತೆ ಸೂಫಿಯಾ ಇನ್ನೊಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನ್ನು ತಮ್ಮ ಬಳಿ ಈಗಾಗಲೇ ಹೊಂದಿದ್ದಾರೆ. 2019ರ ಏಪ್ರಿಲ್‌ 25ರಿಂದ ಜುಲೈ 21ರವರೆಗೆ,  87 ದಿನಗಳು, 2 ಗಂಟೆಗಳು, 17 ನಿಮಿಷಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಓಡುವ ಮೂಲಕ ಅವರು ಈಗಾಗಲೇ ಒಂದು ಗಿನ್ನೆಸ್ ದಾಖಲೆಯನ್ನು ಹೊಂದಿದ್ದಾರೆ.ಒಮ್ಮೆ ನನಗೆ ಈ ಬಗ್ಗೆ ಆಸಕ್ತಿ ಕೆರಳಿದಾಗ, ನಾನು ನನ್ನ ಕೆಲಸವನ್ನು ತ್ಯಜಿಸಲು ನಿರ್ಧರಿಸಿದೆ ಮತ್ತು ಅಲ್ಟ್ರಾ ರನ್ನಿಂಗ್ ಫುಲ್ ಟೈಮ್‌ಗೆ ಧುಮುಕಲು ನಿರ್ಧರಿಸಿದೆ ಭಾರತದಲ್ಲಿ ಇದನ್ನು ಹೆಚ್ಚಿನ ಮಹಿಳೆಯರು ಮಾಡುತ್ತಿಲ್ಲ ಹಾಗೆಂದು ಇದು ನನ್ನನ್ನು ಹಿಮ್ಮೆಟ್ಟಿಸಲಿಲ್ಲ.  ಹೆಚ್ಚಿನ ಹುಡುಗಿಯರು ಓಡಲು ಪ್ರಾರಂಭಿಸಿದರೆ ನನಗೆ ಸಂತೋಷವಾಗುತ್ತದೆ. ನಾನು ತಡೆಗಳನ್ನು ತಳ್ಳಲು ಮತ್ತು ನನ್ನ ಮಿತಿಯನ್ನು ಪರೀಕ್ಷಿಸಲು ಇಷ್ಟಪಡುತ್ತೇನೆ ಎಂದು ಅವರು ಹೇಳಿದರು.

7.41 ಮೀಟರ್‌ ಎತ್ತರದ ಸೈಕಲ್‌ ನಿರ್ಮಿಸಿ ರೈಡಿಂಗ್‌... ವಿಡಿಯೋ ನೋಡಿ

ಸುಫಿಯಾ ಖಾನ್ ಅವರು 480 ಕಿ.ಮೀ. ಮನಾಲಿ-ಲೇಹ್ ಹೆದ್ದಾರಿಯನ್ನು 6 ದಿನಗಳು, 12 ಗಂಟೆಗಳು ಮತ್ತು 6 ನಿಮಿಷಗಳಲ್ಲಿ ಕ್ರಮಿಸಿದ್ದಾರೆ. ಮೂಲತಃ  ರಾಜಸ್ಥಾನದ ಅಜ್ಮೀರ್‌ನವರಾದ ಸುಫಿಯಾ ಖಾನ್, ದೆಹಲಿ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸ್ಟಾಫ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.  ತನ್ನ ದಶಕದ ದೀರ್ಘಾವಧಿಯ ಕೆಲಸವನ್ನು ತೊರೆದ ನಂತರ ಅವರು 2017ರಲ್ಲಿ ದೆಹಲಿ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದರು. ಆದರೆ ಅವರ ಮೊದಲ ದೂರದ ಓಟವು  ತ್ರಿಕೋನ ಜಾಲವಾಗಿತ್ತು(ದೆಹಲಿ-ಆಗ್ರಾ-ಜೈಪುರ-ದೆಹಲಿ) ಅವರು ಅದನ್ನು 16 ದಿನಗಳು, 1 ಗಂಟೆ ಮತ್ತು 27 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಸ್ವಯಂ ತರಬೇತಿ ಪಡೆದ ಅಥ್ಲೇಟ್ ಆಗಿರುವ ಖಾನ್‌ ಅವರಿಗೆ ಕ್ರೀಡಾ ಉಡುಪುಗಳ ದೈತ್ಯ ಅಂಡರ್ ಆರ್ಮರ್‌ (Under Armour) ಪ್ರೋತ್ಸಾಹಿಸುತ್ತಿದೆ. 

click me!