ವಿಶ್ವ ಮಹಿಳಾ ಬಾಕ್ಸಿಂಗ್‌: ಮೇರಿ ಕೋಮ್‌ ಕ್ವಾರ್ಟರ್‌ಗೆ ಲಗ್ಗೆ

By Kannadaprabha NewsFirst Published Oct 9, 2019, 11:18 AM IST
Highlights

ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಬಾಕ್ಸರ್ ಮೇರಿ ಕೋಮ್ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ರಷ್ಯಾ(ಅ.09): ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಮಂಗಳವಾರ ಭಾರತಕ್ಕೆ ಮಿಶ್ರ ಫಲ ದೊರೆಕಿದೆ. ಭಾರತದ ತಾರಾ ಮಹಿಳಾ ಬಾಕ್ಸರ್‌ ಮೇರಿ ಕೋಮ್‌ ಹಾಗೂ ಮಂಜು ರಾಣಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರೆ, ಸವೆಟಿ ಬೋರಾ ಸೋಲು ಕಂಡು ಹೊರಬಿದ್ದಿದ್ದಾರೆ.

ಪ್ರೊ ಕಬಡ್ಡಿ: ಗುಜರಾತ್‌ಗೆ ಗೆಲುವಿನ ವಿದಾಯ

6 ಬಾರಿ ವಿಶ್ವ ಚಾಂಪಿಯನ್‌ ಮೇರಿ ಕೋಮ್‌, ಮಂಗಳವಾರ ನಡೆದ 51 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ, ಥಾಯ್ಲೆಂಡ್‌ನ ಜುಟಮಾಸ್‌ ಜಿಟ್ಪಾಂಗ್‌ ಎದುರು 5-0 ಯಲ್ಲಿ ಗೆಲುವು ಪಡೆದರು. ಪ್ರಿ ಕ್ವಾರ್ಟರ್‌ ಪಂದ್ಯದ ಮೊದಲ 3 ನಿಮಿಷಗಳ ಆಟದಲ್ಲಿ ಮೇರಿ, ಎದುರಾಳಿ ಬಾಕ್ಸರ್‌ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಬಲವಾದ ಪಂಚ್‌ಗಳನ್ನು ನೀಡಿದ ಮೇರಿ ಅಂಕಗಳಿಕೆಯಲ್ಲಿ ಮೇಲುಗೈ ಸಾಧಿಸಿದರು. ಅದ್ಭುತ ಪ್ರದರ್ಶನ ತೋರಿದ ಭಾರತದ ಬಾಕ್ಸರ್‌, 7ನೇ ಚಿನ್ನದ ಗುರಿ ಹೊಂದಿದ್ದಾರೆ. ಮೊದಲ ಸುತ್ತಿನಲ್ಲಿ ಮೇರಿ ಬೈ ಪಡೆದಿದ್ದರು.

ABD ಬಳಿಕ ಹೊಸ ತಂಡ ಸೇರಿದ RCB ವೇಗಿ ಡೇಲ್ ಸ್ಟೇನ್..!

ಸೋಮವಾರ ನಡೆದ 48 ಕೆ.ಜಿ. ವಿಭಾಗದ ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ಮಂಜು ರಾಣಿ, ವೆನೆಜುಯೆಲಾದ ರೋಜಸ್‌ ಟಯೊನಿಸ್‌ ಎದುರು 5-0 ಯಲ್ಲಿ ಗೆಲುವು ಪಡೆದರು. ಎದುರಾಳಿ ಬಾಕ್ಸರ್‌ ವಿರುದ್ಧ ಉತ್ತಮ ಪಂಚ್‌ಗಳ ಮೂಲಕ ಗಮನಸೆಳೆದ ಮಂಜು, ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಎಂಟರಘಟ್ಟದಲ್ಲಿ ಮಂಜು ರಾಣಿ, ಉತ್ತರ ಕೊರಿಯಾದ ಕಿಮ್‌ ಹ್ಯಾಂಗ್‌ ಮಿ ಎದುರು ಸೆಣಸಲಿದ್ದಾರೆ.

ಬೋರಾಗೆ ನಿರಾಸೆ:

75 ಕೆ.ಜಿ. ವಿಭಾಗದ ಮತ್ತೊಂದು ಪ್ರಿ ಕ್ವಾರ್ಟರ್‌ನಲ್ಲಿ ಸವೆಟಿ ಬೋರಾ, ವೇಲ್ಸ್’ನ ಲುರೆನ್‌ ಪ್ರೈಸ್‌ ವಿರುದ್ಧ 1-3 ರಲ್ಲಿ ಪರಾಭವ ಹೊಂದಿದರು. ಲುರೆನ್‌, ಯುರೋಪಿಯನ್‌ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಕಳೆದ ಆವೃತ್ತಿಯ ವಿಶ್ವ ಬಾಕ್ಸಿಂಗ್‌ನಲ್ಲಿ ಕಂಚು ಗೆದ್ದಿದ್ದರು.

click me!