ನವದೆಹಲಿ[ಅ. 07]: ಬಹುಮುಖ ಪ್ರತಿಭೆ ತಮಿಳು ನಟ ಅಜಿತ್ ಕುಮಾರ್ ಸಿನೆಮಾ ಮಾತ್ರವಲ್ಲದೇ ಕಾರು ರೇಸಿಂಗ್, ಹೆಲಿಕ್ಯಾಪ್ಟರ್ ಪೈಲೆಟ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾರೆ.
ಶ್ರೀದೇವಿ ಕೊನೆ ಆಸೆ ಈಡೇರಿಸುತ್ತಿದ್ದಾರೆ ಪತಿ ಬೋನಿ!
ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ತಮಿಳು ನಟ ಅಜಿತ್ ಕುಮಾರ್ ಸ್ಪರ್ಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ಕೊಯಮತ್ತೂರಿನಲ್ಲಿ ನಡೆದಿದ್ದ ರಾಜ್ಯಮಟ್ಟದ ಶೂಟಿಂಗ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್, 50 ಮೀಟರ್ ಫ್ರೀ ಪಿಸ್ತೂಲ್ ವಿಭಾಗಗಳಲ್ಲಿ ಅಜಿತ್ ಸ್ಪರ್ಧಿಸಿದ್ದರು.
ಕಾಮನ್‌ವೆಲ್ತ್ ಗೇಮ್ಸ್‌ನಿಂದ ಭಾರತದ ಸಮಯ, ಹಣ ವ್ಯರ್ಥ; IOA ಮುಖ್ಯಸ್ಥ!
ಶಾಲಾ ದಿನಗಳಲ್ಲಿ ಎನ್ಸಿಸಿ ಕೆಡೆಟ್ ಆಗಿದ್ದರಿಂದ ಅಜಿತ್ ರೈಫಲ್ ಶೂಟಿಂಗ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರಂತೆ. ಅಜಿತ್ ಭಾರತದ ವೃತ್ತಿಪರ ಕಾರು ರೇಸ್ ಚಾಲಕರೂ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಜಿತ್ ಚಿತ್ರಗಳು ವೈರಲ್ ಆಗುತ್ತಿವೆ. ಮೊದಲೆಲ್ಲಾ ಶೂಟಿಂಗ್ ಅನ್ನು ಹವ್ಯಾಸವಾಗಿ ನೋಡುತ್ತಿದ್ದ ಅಜಿತ್, ಇದೀಗ ಈ ಸ್ಪರ್ಧೆಯನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಂಡು ಬರುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.