ಕ್ರೀಡಾಪಟುಗಳ ಡೋಪಿಂಗ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಭಾರತೀಯ ಮಹಿಳಾ ಬಾಕ್ಸರ್ ನೀರಜ್ ಡೋಪಿಂಗ್ ಪ್ರಕರಣದಲ್ಲಿ ಸುಲುಕಿ ಅಮಾನತುಗೊಂಡಿದ್ದಾರೆ.
ನವದೆಹಲಿ(ಡಿ.03): ಭಾರತೀಯ ಮಹಿಳಾ ಬಾಕ್ಸರ್ ನೀರಜ್, ಡೋಪಿಂಗ್ ಟೆಸ್ಟ್ನಲ್ಲಿ ತೇರ್ಗಡೆಯಾಗದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ತಮ್ಮ ಪ್ರದರ್ಶನವನ್ನು ಹೆಚ್ಚಿಸುವುದಕ್ಕಾಗಿ ‘ಲಿಗಾಂಡ್ರೋಲ್’ ಹಾಗೂ ವಾಡಾ ನಿಷೇಧಿತ ಸ್ಟಿರಾಯ್ಡ್ಗಳನ್ನು ಸೇವಿಸಿರುವುದು ಡೋಪಿಂಗ್ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು.
ಇದನ್ನೂ ಓದಿ: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್: ಕಂಚು ಗೆದ್ದ ಮೇರಿ ಕೋಮ್
ಮಾಜಿ ರಾಷ್ಟ್ರೀಯ ಚಾಂಪಿಯನ್ ನೀರಜ್ ಇದೇ ವರ್ಷ ಬಲ್ಗೇರಿಯಾದಲ್ಲಿ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮರಣಾರ್ಥ ಬಾಕ್ಸಿಂಗ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಗುವಾಹಟಿಯಲ್ಲಿ ಇಂಡಿಯಾ ಓಪನ್ ಚಿನ್ನ ಮುಡಿಗೇರಿಸಿದ್ದರು. ಸೆ.24ರಂದು ನೀರಜ್ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿತ್ತು. ಕಳೆದ ತಿಂಗಳು ಡೋಪಿಂಗ್ ವರದಿ ಲಭಿಸಿದೆ ಎಂದು ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ನಿಗ್ರಹ ಘಟಕ (ನಾಡಾ) ಹೇಳಿದೆ.
ಇದನ್ನೂ ಓದಿ: ವಿಜೇಂದರ್ಗೆ ಸತತ 12ನೇ ಗೆಲುವು!
57 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಹರ್ಯಾಣ ಮೂಲದ ನೀರಜ್, 2019ರ ಇಂಡಿಯಾ ಓಪನ್ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಸೆಪ್ಟೆಂಬರ್ 24 ರಂದು ನೀರಜ್ ಸ್ಯಾಂಪಲ್ ಸಂಗ್ರಹಿಸಿದ ಅಧಿಕಾರಿಗಳು, ಖತಾರ್ನಲ್ಲಿರುವ ಆ್ಯಂಟಿ ಡೋಪಿಂಗ್ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಲಾಗಿತ್ತು.