ಡೋಪಿಂಗ್ ಪ್ರಕರಣಗಳು ಮತ್ತೆ ಭಾರತಕ್ಕೆ ತೀವ್ರ ಹಿನ್ನಡೆ ತಂದೊಡ್ಡುತ್ತಿದೆ. ಇದೀಗ ಬಾಕ್ಸಿಂಗ್ ಹಾಗೂ ಶೂಟಿಂಗ್ ಕ್ಷೇತ್ರದ ಇಬ್ಬರು ಕ್ರೀಡಾಪಟುಗಳ ಡೋಪ್ ಟೆಸ್ಟ್‌ನಲ್ಲಿ ಫೇಲ್ ಆಗಿದ್ದಾರೆ.
ನವದೆಹಲಿ(ಡಿ.12): ಭಾರತದಲ್ಲಿ ಕ್ರೀಡಾಪಟುಗಳ ಡೋಪಿಂಗ್ ಪ್ರಕರಣಗಳು ಹೆಚ್ಚಾಗುತ್ತಿದೆ. ಪ್ರಮುಖ ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ ಆಗುತ್ತಿರುವುದು ತೀವ್ರ ಹಿನ್ನಡೆ ತರುತ್ತಿದೆ. ಇನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮಂಗಳವಾರವಷ್ಟೇ ಡೋಪಿಂಗ್ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದರು. ಇದೀಗ ಮತ್ತಿಬ್ಬರು ಕ್ರೀಡಾಪಟುಗಳು ಡೋಪಿಂಗ್ ಪ್ರಕರಣಗಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: ಡೋಪಿಂಗ್: ಬಾಕ್ಸರ್ ನೀರಜ್ ಫೋಗತ್ ಅಮಾನತು!.
ಬುಧವಾರ ಭಾರತದ ಇಬ್ಬರು ತಾರಾ ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆಯಲ್ಲಿ ಅನುತೀರ್ಣಗೊಂಡಿರುವ ಸುದ್ದಿ ಬಹಿರಂಗಗೊಂಡಿದೆ. ಬಾಕ್ಸರ್ ಸುಮಿತ್ ಸಾಂಗ್ವಾನ್ (91 ಕೆ.ಜಿ) ಹಾಗೂ ಶೂಟರ್ ರವಿ ಕುಮಾರ್ ಉದ್ದೀಪನಾ ಮದ್ದು ಸೇವಿಸಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಗೋಮತಿ ಮಾರಿಮುತ್ತು
ಇಬ್ಬರು ಸುದೀರ್ಘ ಅವಧಿಗೆ ನಿಷೇಧಗೊಳ್ಳುವ ಭೀತಿಯಲ್ಲಿದ್ದಾರೆ. ಸುಮಿತ್, ಅಕ್ಟೋಬರ್‌ನಲ್ಲಿ ಡೋಪಿಂಗ್ ಪರೀಕ್ಷೆಗೆ ಸುಮಿತ್ ನಿಷೇಧಿತ ಅಸಿಟಾಡೊಲಾಮೈಡ್ ಸೇವಿಸಿರುವುದು ದೃಢಪಟ್ಟಿದೆ. ಮ್ಯೂನಿಕ್ ವಿಶ್ವಕಪ್‌ನಿಂದ ವಾಪಸಾದ ಬಳಿಕ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ರವಿ ಫೇಲಾಗಿದ್ದಾರೆ ಎಂದು ತಿಳಿದುಬಂದಿದೆ.