2000ನೇ ಗೆಲುವು; ಬೆಂಗಳೂರು ಜಾಕಿ ಸೂರಜ್ ನರೇಡು ದಾಖಲೆ!

By Web DeskFirst Published Dec 11, 2019, 8:20 PM IST
Highlights

ಬೆಟ್ಟಿಂಗ್ ಪ್ರಕರಣದಿಂದ ಸೊರಗಿದ್ದ ಬೆಂಗಳೂರು ಟರ್ಫ್ ಕ್ಲಬ್‌ಗೆ ಜಾಕಿ ಸೂರಜ್ ನರೇಡು ಹೊಸ ಬೆಳಕು ನೀಡಿದ್ದಾರೆ. 2000ನೇ ಗೆಲುವು ಸಾಧಿಸೋ ಮೂಲಕ ಸೂರಜ್ ದಾಖಲೆ ಬರೆದಿದ್ದಾರೆ. ಸೂರಜ್ ನರೇಡು ಸಾಧನೆ ವಿವರ ಇಲ್ಲಿದೆ. 

ಬೆಂಗಳೂರು(ಡಿ.11): ಇತ್ತೀಚೆಗೆ ಬೆಂಗಳೂರು ರೇಸ್ ಕೋರ್ಟ್ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಅಕ್ರಮ ಬೆಟ್ಟಿಂಗ್ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ, ಕುದುರೆಗೆ ಅಮಲು ಪದಾರ್ಥ ನೀಡಿ ರೇಸ್ ಸೇರಿದಂತೆ ಹಲವು ಆರೋಪಗಲು ಟರ್ಫ್ ಕ್ಲಬ್ ಮೇಲಿದೆ. ಇದರ ನಡವೆ ಬೆಂಗಳೂರಿನ ಜಾಕಿ ಸೂರಜ್ ನರೇಡು ಅಪರೂಪದ ದಾಖಲೆ ಮಾಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಕೆಪಿಎಲ್ ಆಯ್ತು ರೇಸ್ ಕೋರ್ಸ್ ಬೆಟ್ಟಿಂಗ್ ಜಾಲ ಬಯಲು, ಸಿಕ್ಕ ಹಣವೆಷ್ಟು?

ಜಾಕಿ ಸೂರಜ್ ನರೇಡು 2000ನೇ ಗೆಲುವು ದಾಖಲಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ರೇಸ್‌ನಲ್ಲಿ ಸೂರಜ್ ಐತಿಹಾಸಿಕ ಸಾಧನೆ ಮಾಡಿದರು. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ 2ನೇ ಜಾಕಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2002ರಿಂದ ಗೆಲುವಿನ ನಾಗಾಲೋಟ ಮುಂದುವರಿಸಿರುವ 34ರ ಹರೆಯದ ಸೂರಜ್ ನರೇಡು ಇದೀಗ ಬರೋಬ್ಬರಿ 2000ನೇ ಗೆಲುವು ದಾಖಲಿಸೋ ಮೂಲಕ ಇತಿಹಾಸ ರಚಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ನಿಯಂತ್ರಣಕ್ಕೆ ರೇಸ್‌ ಕೋರ್ಸ್‌?

ಸೂರಜ್ ನರೇಡು ಸಾಧನೆಯನ್ನು ಕುದರೆ ರೇಸ್ ಅಭಿಮಾನಿಗಳು, ಕುಟುಂಬಸ್ಥರು, ಮಿತ್ರರು ಸಂಭ್ರಮಿಸಿದ್ದಾರೆ. ದಾಖಲೆಯ ಗೆಲುವಿನ ಬಳಿಕ ಮಾಧ್ಯಮ ಜೊತೆ ಮಾತನಾಡಿದ ಸೂರಜ್, 2000ನೇ ಗೆಲುವಿನ ಮೂಲಕ ರೇಸ್ ಲೋಕದಲ್ಲಿ ಮೈಲಿಗಲ್ಲು ಸ್ಥಾಪಿಸಿರುವು ಅತ್ಯಂತ ಖುಷಿ ನೀಡಿದೆ. ಸತತ ಪರಿಶ್ರಮ, ಅಭ್ಯಾಸಕ್ಕೆ ಫಲ ಸಿಕ್ಕಿದೆ ಎಂದರು.

ಸೂರಜ್ ತಂದೆ ಸತೀಶ್ ಸದ್ಯ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಜಿ ಜಾಕಿಯಾಗಿರುವ ಸತೀಶ್ 1000 ಗೆಲುವು ಸಾಧಿಸಿದ್ದಾರೆ. ಮಗನ ಸಾಧನೆಯನ್ನು ಕೊಂಡಾಡಿದ ಸತೀಶ್, 3000 ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿದರು. 

2002ರಿಂದ ಜಾಕಿಯಾಗಿ ರೇಸ್ ಮೈದಾನಕ್ಕಿಳಿದಿರುವ ಸೂರಜ್, 66 ಕ್ಲಾಸಿಕ್ ರೇಸ್, 15 ಡರ್ಬಿ ಹಾಗೂ 2 ಭಾರತೀಯ ಡರ್ಬಿ ರೇಸ್ ಗೆದ್ದಿದ್ದಾರೆ. ವಿದೇಶದಲ್ಲಿ ಗ್ರೇಡ್ 2 ರೇಸ್ ಗೆದ್ದ ಏಕೈಕ ಭಾರತೀಯ ಅನ್ನೋ ಹೆಗ್ಗಳಿಕೆಗೂ ಬೆಂಗಳೂರಿಗ ಪಾತ್ರರಾಗಿದ್ದಾರೆ. 

ಬೆಟ್ಟಿಂಗ್ ಪ್ರಕರಣದಿಂದ ನೊಂದ ಕುದರೆ ರೇಸ್ ಅಭಿಮಾನಿಗಳಿಗೆ ಇದೀಗ ಸೂರಜ್ ನರೇಡು ಸಾಧನೆ ಸಮಾಧಾನ ತಂದಿದೆ. ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ಅಕ್ರಮ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದ ಖಚಿತ ಮಾಹಿತಿಯಲ್ಲಿ ಸಿಸಿಬಿ ಪೊಲೀಸರು ಡಿಸೆಂಬರ್ 6 ರಂದು ದಾಳಿ ನಡೆಸಿ, ಬುಕ್ಕಿಗಳು, ಮಾಲೀಕರು, ಸಿಬ್ಬಂಧಿ ಸೇರಿದಂತೆ 40ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು. ದಾಳಿಯಲ್ಲಿ ಬರೋಬ್ಬರಿ 60 ಲಕ್ಷಕ್ಕೂ ಹೆಚ್ಚು ನಗದು ವಶಪಡಸಿ ಕೊಳ್ಳಲಾಗಿತ್ತು.

ಕುದುರೆ ರೇಸ್ ಕಾನೂನು ಬದ್ದ ಬೆಟ್ಟಿಂಗ್ ಬದಲು ಅಕ್ರಮವಾಗಿ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಈ ಮೂಲಕ ಅಸಲಿ ಬಿಲ್ ಬದಲು ನಕಲಿ ಬಿಲ್ ತೋರಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸಲಾಗುತ್ತಿತ್ತು. ದಾಳಿ ಬಳಿಕವೂ ಅಕ್ರಮ ಬೆಟ್ಟಿಂಗ್ ಎಗ್ಗಿಲ್ಲದೆ ನಡೆಯುತ್ತಿದ್ದ ಆಧಾರದಲ್ಲಿ ಮತ್ತೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. 

click me!