ವಿಶ್ವ ನಂ.3ನೇ ಶ್ರೇಯಾಂಕಿತ ಚೀನಾ ಜೋಡಿಯನ್ನು ಬಗ್ಗುಬಡಿಯುವಲ್ಲಿ ಭಾರತದ ಯುವ ಶಟ್ಲರ್‌ಗಳಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಯಶಸ್ವಿಯಾಗಿದ್ದು, ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಫುಝೋ (ನ.09): ವಿಶ್ವ ನಂ.3 ಚೀನಾ ಜೋಡಿಯನ್ನು ಮಣಿಸುವ ಮೂಲಕ ಭಾರತದ ಯುವ ಶಟ್ಲರ್‌ಗಳಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ, ಚೀನಾ ಓಪನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಥಳೀಯ ಆಟಗಾರರಾದ ಲಿ ಜುನ್ ಹುಯಿ ಹಾಗೂ ಲಿಯು ಯು ಚೆನ್ ವಿರುದ್ಧ 21-19 21-15 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 43 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವ ನಂ.9 ಸಾತ್ವಿಕ್-ಚಿರಾಗ್ ಜೋಡಿ ಪ್ರಾಬಲ್ಯ ಮೆರೆಯಿತು.
ಚೀನಾ ಓಪನ್: ಮೊದಲ ಸುತ್ತಲ್ಲೇ ಹೊರಬಿದ್ದ ಸೈನಾ!
ಮೊದಲ ಗೇಮ್ ಅನ್ನು 21-19ರಲ್ಲಿ ರೋಚಕವಾಗಿ ಗೆದ್ದುಕೊಂಡ ಸಾತ್ವಿಕ್-ಚಿರಾಗ್ ಜೋಡಿ, 2ನೇ ಗೇಮ್‌ನಲ್ಲೂ ಪೈಪೋಟಿ ಎದುರಿಸಿತು. 15-15ರಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಆದರೆ ಸತತ 6 ಅಂಕ ಕಲೆಹಾಕಿದ ಭಾರತೀಯ ಜೋಡಿ, ಗೆಲುವಿನ ಕೇಕೆ ಹಾಕಿ ಅಂತಿಮ 4ರ ಸುತ್ತಿಗೆ ಪ್ರವೇಶಿಸಿತು.
Highlights | In-form 🇮🇳 Rankireddy and Shetty decisively knock out 2018 world champions 🇨🇳 Li and Liu at the Fuzhou China Open 2019 🏸 pic.twitter.com/psnxFn0SaM
— BWF (@bwfmedia)ವಿಶ್ವ ನಂ.3, ಚೀನಾ ಜೋಡಿ ವಿರುದ್ಧ ಸಾತ್ವಿಕ್-ಚಿರಾಗ್ 3ನೇ ಬಾರಿಗೆ ಆಡಿದರು. ಏಪ್ರಿಲ್‌ನಲ್ಲಿ ಥಾಯ್ಲೆಂಡ್ ಓಪನ್‌ನಲ್ಲಿ ಜಯಿಸಿದ್ದ ಭಾರತೀಯ ಜೋಡಿ, ಜೂನ್‌ನಲ್ಲಿ ನಡೆದ ಆಸ್ಪ್ರೇಲಿಯನ್ ಓಪನ್‌ನಲ್ಲಿ ಸೋಲುಂಡಿತ್ತು.
ಫ್ರೆಂಚ್ ಓಪನ್: ಸಾತ್ವಿಕ್-ಚಿರಾಗ್‌ಗೆ ರನ್ನರ್‌ಅಪ್ ಪ್ರಶಸ್ತಿ!
ಶನಿವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಸಾತ್ವಿಕ್ ಹಾಗೂ ಚಿರಾಗ್‌ಗೆ ವಿಶ್ವ ನಂ.1, ಇಂಡೋನೇಷ್ಯಾದ ಮಾರ್ಕಸ್ ಫೆರ್ನಾಲ್ಡಿ ಹಾಗೂ ಕೆವಿನ್ ಸಂಜಯ ಸುಕಮುಲ್ಜೊ ವಿರುದ್ಧ ಸೆಣಸಲಿದೆ. ಇದೇ ಜೋಡಿ ವಿರುದ್ಧ ಕಳೆದ ತಿಂಗಳು ಫ್ರೆಂಚ್ ಓಪನ್ ಫೈನಲ್‌ನಲ್ಲಿ ಭಾರತೀಯರು ಸೋಲು ಕಂಡಿದ್ದರು. ಸಾತ್ವಿಕ್ ಹಾಗೂ ಚಿರಾಗ್ ಈ ವರ್ಷ ಆಗಸ್ಟ್‌ನಲ್ಲಿ ಥಾಯ್ಲೆಂಡ್ ಓಪನ್ ಗೆಲ್ಲುವ ಮೂಲಕ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಕಳೆದ ತಿಂಗಳು ಫ್ರೆಂಚ್ ಓಪನ್‌ನಲ್ಲಿ ರನ್ನರ್-ಅಪ್ ಪ್ರಶಸ್ತಿಗೆ ಭಾಜನರಾಗಿದ್ದರು.