
ದುಬೈ(ನ.24): ಭಾರತದ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. ಶುಕ್ರವಾರ ರಾತ್ರಿ ಇಲ್ಲಿ ನಡೆದ ಸ್ಪರ್ಧೆಯಲ್ಲಿ ಘಾನಾದ ಮಾಜಿ ಕಾಮನ್‌ವೆಲ್ತ್ ಪದಕ ವಿಜೇತ ಚಾರ್ಲ್ಸ್ ಆ್ಯಡಮು ವಿರುದ್ಧ ಜಯಭೇರಿ ಬಾರಿಸಿದರು. 34 ವರ್ಷದ ಮಾಜಿ ಒಲಿಂಪಿಕ್ ಪದಕ ವಿಜೇತ ವಿಜೇಂದರ್‌ಗಿದು ಸತತ 12ನೇ ಗೆಲುವಾಗಿದೆ.
ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಹಾಗೂ ಓರಿಯೆಂಟಲ್ ಸೂಪರ್ ಮಿಡ್ಲ್‌ವೇಟ್ ಚಾಂಪಿಯನ್ಶಿಪ್ಗಳನ್ನು ತಮ್ಮ ಬಳಿ ಇಟ್ಟುಕೊಂಡಿರುವ ಭಾರತದ ಬಾಕ್ಸಿಂಗ್ ತಾರೆ, 8 ಸುತ್ತುಗಳ ಪಂದ್ಯದಲ್ಲಿ ಅವಿರೋಧ ಗೆಲುವು ಸಾಧಿಸಿದರು. ವಿಜೇಂದರ್‌ರ ಬಲಗೈ ಪಂಚ್‌ಗಳಿಗೆ ಚಾರ್ಲ್ಸ್ ಬಳಿ ಉತ್ತರವಿರಲಿಲ್ಲ.
ದುಬೈನಲ್ಲಿ ಬಾಕ್ಸರ್ ವಿಜೇಂದರ್ ಕಾದಾಟಕ್ಕೆ ಡೇಟ್ ಫಿಕ್ಸ್..!
42 ವರ್ಷದ ಚಾರ್ಲ್ಸ್, ಈ ಪಂದ್ಯಕ್ಕೂ ಮುನ್ನ 47 ಬೌಟ್‌ಗಳನ್ನು ಆಡಿದ್ದರು. ಅದರಲ್ಲಿ 33(26 ನಾಕೌಟ್) ಗೆಲುವುಗಳನ್ನು ಸಾಧಿಸಿದ್ದರು. 1998ರ ಕೌಲಾಲಂಪುರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾರ್ಲ್ಸ್ ಕಂಚಿನ ಪದಕ ಜಯಿಸಿದ್ದರು. ಒಲಿಂಪಿಕ್ಸ್‌ನಲ್ಲೂ ಅವರು ಘಾನಾವನ್ನು ಪ್ರತಿನಿಧಿಸಿದ್ದರು.
ವೃತ್ತಿಪರ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ಗೆ 11ನೇ ಜಯ
ವಿಜೇಂದರ್ ಸಿಂಗ್ ಅದ್ಭುತ ಗೆಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.