ಭಾರತದ ಶೂಟರ್‌ಗಳು ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ಫೈನಲ್ಸ್ನಲ್ಲಿ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಭಾರತದ ಭರವಸೆಯ ಶೂಟರ್ ಮನು ಭಾಕರ್ ಇದೇ ಕೂಟದಲ್ಲಿ ಎರಡನೇ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಪುಟಿಯನ್ (ಚೀನಾ): ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ಫೈನಲ್ಸ್ನಲ್ಲಿ ಭಾರತೀಯರು 5 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದ್ದಾರೆ.
ಮನು ಭಾಕರ್‌ಗೆ ಏಷ್ಯನ್ ಶೂಟಿಂಗ್ ಚಿನ್ನ!
ಶುಕ್ರವಾರ ಇಲ್ಲಿ ನಡೆದ 10 ಮೀ. ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಮನು ಭಾಕರ್ ಚಿನ್ನ, ಸೌರಭ್ ಚೌಧರಿ ಬೆಳ್ಳಿ ಹಾಗೂ ಶಾಹ್ಜಾರ್ ರಿಝ್ವಿ ಕಂಚು ಗೆದ್ದರು. ಈ ಸ್ಪರ್ಧೆಯಲ್ಲಿ ಪದಕ ಗೆದ್ದ ಮೂವರು ಭಾರತೀಯರೇ ಆಗಿದ್ದರು. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತದ ದಿವ್ಯಾನ್ಶ್ ಪನ್ವಾರ್ ಹಾಗೂ ಕ್ರೊವೇಶಿಯಾದ ಎನ್ಜೆಜನ ಪೆಜ್ಸಿಕ್ ಜೋಡಿ ಚಿನ್ನದ ಪದಕ ಗೆದ್ದರೆ, ಭಾರತದ ಅಪೂರ್ವಿ ಚಂಡೀಲ ಹಾಗೂ ಚೀನಾದ ಚಾಂಗ್ಹೊಂಗ್ ಝಾಂಗ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಶೂಟಿಂಗ್ ವಿಶ್ವಕಪ್ ಫೈನಲ್ಸ್: ಭಾರತಕ್ಕೆ 3 ಚಿನ್ನ!
अँखियों से गोली मारे🎯
Manu Bhaker🥇🥈 and 🥉 keep colours flying high at World Cup Finals finishing 1⃣2⃣3⃣ with their partners in the 10m Air Pistol Mixed Team event! to on winning President's Trophy👏 https://t.co/aNWlG99NTv
GOLD! 🥇 It’s a 1-2 for again as & Croatian legend Snjezana Pejcic win the President’s Trophy in the 10m Air Rifle Mixed Team. & Zhang of China’s win 🥈 What an awesome two days at the for India 🇮🇳
— NRAI (@OfficialNRAI)ಗುರುವಾರ 3 ಚಿನ್ನ ಗೆದ್ದ ಭಾರತ ಅಗ್ರಸ್ಥಾನ ಅಲಂಕರಿಸಿತ್ತು. 10 ಮೀ. ಏರ್ ಪಿಸ್ತೂಲ್ನಲ್ಲಿ ಮನು ಭಾಕರ್, ಪುರುಷರ 10 ಮೀ. ರೈಫಲ್ನಲ್ಲಿ ದಿವ್ಯಾನ್ಶ್ ಹಾಗೂ ವನಿತೆಯರ 10 ಮೀ. ಏರ್ ರೈಫಲ್ನಲ್ಲಿ ಇಳವೆನ್ನಿಲಾ ವಳರಿವನ್ ಚಿನ್ನ ಗೆದ್ದಿದ್ದರು.