ಶೂಟಿಂಗ್‌ ವಿಶ್ವ​ಕಪ್‌ ಫೈನಲ್ಸ್‌: ಭಾರ​ತಕ್ಕೆ 3 ಚಿನ್ನ!

Published : Nov 22, 2019, 09:49 AM IST
ಶೂಟಿಂಗ್‌ ವಿಶ್ವ​ಕಪ್‌ ಫೈನಲ್ಸ್‌: ಭಾರ​ತಕ್ಕೆ 3 ಚಿನ್ನ!

ಸಾರಾಂಶ

ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವ​ಕಪ್‌ ಫೈನಲ್ಸ್‌ನಲ್ಲಿ ಭಾರತದ ಯುವ ಶೂಟರ್‌ಗಳು ಮತ್ತೊಮ್ಮೆ ಮಿಂಚುವ ಮೂಲಕ ಮೂರು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಪುಟಿ​ಯನ್‌(ನ.22​): ಭಾರ​ತದ ಯುವ ಶೂಟರ್‌ಗಳು ಇಲ್ಲಿ ನಡೆ​ಯು​ತ್ತಿ​ರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವ​ಕಪ್‌ ಫೈನಲ್ಸ್‌ನಲ್ಲಿ ಗುರು​ವಾರ 3 ಚಿನ್ನದ ಪದಕ ಜಯಿಸಿದರು. 

ಏಷ್ಯನ್ ಶೂಟಿಂಗ್: ಬೆಳ್ಳಿ ಗೆದ್ದ ಸೌರಭ್ ಚೌಧರಿ

17 ವರ್ಷದ ಮನು ಭಾಕರ್‌, ಮಹಿ​ಳೆ​ಯರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯ ಫೈನಲ್‌ನಲ್ಲಿ 244.7 ಅಂಕ ಗಳಿಸಿ ಅಗ್ರ​ಸ್ಥಾನ ಗಳಿ​ಸಿ​ದರು. ಕಿರಿ​ಯರ ವಿಭಾ​ಗ​ದಲ್ಲಿ ಇದು ವಿಶ್ವ ದಾಖಲೆಯ ಅಂಕ​ವೆ​ನಿ​ಸಿತು. 20 ವರ್ಷದ ಎಲಾ​ವೆ​ನಿಲ್‌ ವಲ​ರಿ​ವನ್‌ ಮಹಿಳೆಯರ 10 ಮೀ. ಏರ್‌ ರೈಫಲ್‌ ಫೈನಲ್‌ನಲ್ಲಿ 250.8 ಅಂಕ ಗಳಿಸಿ ಸ್ವರ್ಣ ಪದ​ಕಕ್ಕೆ ಮುತ್ತಿಟ್ಟರು. ಬೆಳ್ಳಿ ಗೆದ್ದ ತೈವಾನ್‌ನ ಲಿನ್‌ ಯಿಂಗ್‌ಗಿಂತ 0.1 ಅಂಕ ಹೆಚ್ಚಿಗೆ ಗಳಿಸಿ ಅಗ್ರ​ ಸ್ಥಾನ ಪಡೆ​ದರು.

ಪುರು​ಷರ 10 ಮೀ.ಏರ್‌ ರೈಫಲ್‌ ಸ್ಪರ್ಧೆ​ಯ ಫೈನಲ್‌ನಲ್ಲಿ 250.1 ಅಂಕ ಗಳಿ​ಸಿದ 17 ವರ್ಷದ ದಿವ್ಯಾನ್ಷ್ ಪನ್ವಾರ್‌ ಭಾರ​ತಕ್ಕೆ 3ನೇ ಚಿನ್ನ ದೊರ​ಕಿ​ಸಿ​ಕೊಟ್ಟರು. 3 ಚಿನ್ನದೊಂದಿಗೆ ಭಾರತ ಪದಕ ಪಟ್ಟಿ​ಯಲ್ಲಿ ಅಗ್ರ​ಸ್ಥಾ​ನ​ಕ್ಕೇ​ರಿದೆ. ಚೀನಾ 2 ಚಿನ್ನ, 1 ಬೆಳ್ಳಿ, 1 ಕಂಚಿ​ನೊಂದಿಗೆ 2ನೇ ಸ್ಥಾನ​ದ​ಲ್ಲಿದೆ.

ಈಗಾಗಲೇ ಮನು ಭಾಕರ್‌, ದಿವ್ಯಾನ್ಷ್ ಪನ್ವಾರ್‌ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದು, ಭಾರತ ಪರ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಠೀರವ ಸ್ಟೇಡಿಯಂಗೆ ಕ್ರೀಡಾ ಇಲಾಖೆ ಕಾಯಕಲ್ಪ; ಹೊರಾಂಗಣ ಕ್ರೀಡಾಂಗಣದಲ್ಲಿ ಬಹುಕೋಟಿ ರುಪಾಯಿ ವೆಚ್ಚದಲ್ಲಿ ನವೀಕರಣ!
ಒಂದು ಕುಟುಂಬ, ಒಂದು ಅಕಾಡೆಮಿಯಿಂದ ಹಾಕಿ ವಿಶ್ವಕಪ್‌ನಲ್ಲಿ ಐವರು ಕಣಕ್ಕೆ! ಭಾರತ ಪರ ವಿಶ್ವಕಪ್ ಆಡಿದ ಮೊದಲ ತಾಯಿ-ಮಗ ಜೋಡಿ