ಬೆಂಗಳೂರು ಓಪನ್ ಟೆನಿಸ್: ಸೆಮೀಸ್‌ಗೆ ಪೇಸ್‌ ಜೋಡಿ

Published : Feb 14, 2020, 11:09 AM IST
ಬೆಂಗಳೂರು ಓಪನ್ ಟೆನಿಸ್: ಸೆಮೀಸ್‌ಗೆ ಪೇಸ್‌ ಜೋಡಿ

ಸಾರಾಂಶ

ಭಾರತದಲ್ಲಿ ಕಟ್ಟಕಡೆಯ ಟೆನಿಸ್ ಟೂರ್ನಿ ಆಡುತ್ತಿರುವ ಲಿಯಾಂಡರ್ ಪೇಸ್ ಬೆಂಗಳೂರು ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಬೆಂಗಳೂರು(ಫೆ.14): ಭಾರತದಲ್ಲಿ ಕೊನೆಯ ಟೂರ್ನಿ ಆಡುತ್ತಿರುವ ದಿಗ್ಗಜ ಲಿಯಾಂಡರ್‌ ಪೇಸ್‌ ಹಾಗೂ ಆಸ್ಪ್ರೇಲಿಯಾದ ಎಬ್ಡೆನ್‌ ಮ್ಯಾಥ್ಯೂ ಜೋಡಿ ಡಬಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸ್ವೀಡನ್‌ನ ಆ್ಯಂಡ್ರೆ ಗೊರನ್ಸನ್‌ ಹಾಗೂ ಇಂಡೋನೇಷ್ಯಾದ ಕ್ರಿಸ್ಟೋಫರ್‌ ಜೋಡಿ ವಿರುದ್ಧ 7-5, 0-6, 10-7 ಸೆಟ್‌ಗಳಲ್ಲಿ ಗೆಲುವು ಸಾಧಿಸಿತು. ಪಂದ್ಯದ ಆರಂಭದಿಂದಲೂ ಎರಡೂ ಜೋಡಿಗಳು ಪ್ರಬಲ ಹೋರಾಟ ನಡೆಸಿದವು.

ತವರಿನಲ್ಲಿ ಕೊನೆ ಟೂರ್ನಿ ಆಡುತ್ತಿರುವ ಪೇಸ್, ಕ್ವಾರ್ಟರ್‌‌ಫೈನಲ್‌ಗೆ ಲಗ್ಗೆ!

ಈ ಮೊದಲು ಅಂತಿಮ 16ನೇ ಸುತ್ತಿನಲ್ಲಿ ಸ್ಲೋವೇನಿಯಾದ ಬ್ಲಾಜ್ ರೋಲಾ , ಚೀನಾದ ಜಾಂಗ್ ಜಿಜಾನ್ ವಿರುದ್ಧ ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಇನ್ನು ಕ್ವಾರ್ಟರ್‌ನಲ್ಲಿ ಪೇಸ್ ಆಟವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಅಭಿಮಾನಿಗಳಿಗೆ ಪೇಸ್ ಜೋಡಿ ನಿರಾಸೆ ಮಾಡಲಿಲ್ಲ. 

ಬೆಂಗಳೂರು ಓಪನ್‌ ಟೆನಿಸ್‌: ಹಾಲಿ ಚಾಂಪಿಯನ್‌ ಪ್ರಜ್ನೇಶ್‌ ಔಟ್‌

ಸಾಕೇತ್‌ ಮೈನೇನಿ ಹಾಗೂ ಆಸ್ಪ್ರೇಲಿಯಾದ ಮ್ಯಾಟ್‌ ರೀಡ್‌ ಜೋಡಿ, ತೈಪೆಯ ಚೆಂಗ್‌ ಪೆಂಗ್‌ ಹಾಗೂ ಉಕ್ರೇನ್‌ನ ಡೇನಿಸ್‌ ಜೋಡಿ ವಿರುದ್ಧ 3-6, 6-4, 10-8 ಸೆಟ್‌ಗಳಲ್ಲಿ, ಪೂರವ್‌ ರಾಜಾ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಜೋಡಿ, ಪೋರ್ಚುಗಲ್‌ನ ಫ್ರೆಡ್ರಿಕೊ ಹಾಗೂ ಸರ್ಬಿಯಾದ ನಿಕೋಲ ಜೋಡಿ ಎದುರು 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಉಪಾಂತ್ಯಕ್ಕೆ ಲಗ್ಗೆ ಇಟ್ಟಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಕಿ ವಿಶ್ವಕಪ್‌ 2026: 1975ರ ಬಳಿಕ ಮತ್ತೊಂದು ವಿಶ್ವಕಪ್‌ ಮೇಲೆ ಭಾರತದ ಕಣ್ಣು; ಭಾರತ-ಪಾಕ್‌ ಪಂದ್ಯ ಯಾವಾಗ?
ಭಾರತದ ಮೊದಲ '2026 ಯೆಜ್ಡಿ ರೋಡ್‌ಸ್ಟರ್' ಬೈಕ್ ಒಡೆಯನಾದ ಒಲಿಂಪಿಕ್ ಹೀರೋ ಪಿ.ಆರ್. ಶ್ರೀಜೇಶ್!