ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತು ಹಾಕಬೇಕು : ಎಚ್.ಡಿ.ಕುಮಾರಸ್ವಾಮಿ

Kannadaprabha News   | Asianet News
Published : Sep 09, 2020, 09:40 AM IST
ಡ್ರಗ್ಸ್  ಜಾಲವನ್ನು ಬುಡಸಮೇತ ಕಿತ್ತು ಹಾಕಬೇಕು : ಎಚ್.ಡಿ.ಕುಮಾರಸ್ವಾಮಿ

ಸಾರಾಂಶ

ಡ್ರಗ್ಸ್ ಮಾಫಿಯಾ ಎನ್ನುವುದು ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು. 

ಬೆಂಗಳೂರು (ಸೆ.09):  ಡ್ರಗ್ಸ್‌ ಮಾಫಿಯಾ ರಾಜ್ಯದಲ್ಲಿ ಮತ್ತು ದೇಶದಲ್ಲಿ ತಲ್ಲಣ ಹುಟ್ಟುಹಾಕುತ್ತಿದ್ದು, ಅದನ್ನು ಬುಡಸಮೇತ ಕಿತ್ತು ಹಾಕಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸಾಗರೋತ್ತರ ಕನ್ನಡಿಗರ 14ನೇ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡ್ರಗ್ಸ್‌ ಮಾಫಿಯಾ ಮಟ್ಟಹಾಕಲು ಕಠಿಣ ಕಾನೂನು ಜಾರಿಗೊಳಿಸಬೇಕು. ಈ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಿದ್ದು, ಯುವ ಸಮುದಾಯವನ್ನು ಇಂತಹ ಕೃತ್ಯಗಳಿಂದ ದೂರ ಇಡಬೇಕಿದೆ. ನನ್ನ ಹತ್ತಿರ ಸಾಕಷ್ಟುಜನಪರ ಯೋಜನಗಳಿವೆ. ಅದನ್ನುನಾವು ಬೇರೆ ಪಕ್ಷದವರಿಗೆ ಹೇಳಿ ಮಾಡಿಸುವುದು ಕಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ : ಡ್ರಗ್ಸ್ ದಂಧೆ ಬಗ್ಗೆ ಸಿಎಂ

ಯುವಕರು ನಮ್ಮ ಆಸ್ತಿ, ಅವರಿಗೆ ದುಡಿಯುವ ಶಕ್ತಿಯನ್ನು ಸರ್ಕಾರ ಕೊಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಯುವಕರ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು, ಹಣ ಗಳಿಸುವ ಅಥವಾ ಹೆಸರು ಮಾಡಲು ನಾನು ಮುಖ್ಯಮಂತ್ರಿಯಾಗಲಿಲ್ಲ. ಮಣ್ಣಿನ ಮಗನಾಗಿ ರೈತರು ಮತ್ತು ನನ್ನ ಮಣ್ಣಿಗೋಸ್ಕರ ಸಾಕಷ್ಟುಕೆಲಸ ಮಾಡಿದ್ದೇನೆ. ಜನರು ನನ್ನನ್ನು ಮರೆತಿಲ್ಲ. ನನ್ನನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಅವರ ಋುಣ ನನ್ನ ಮೇಲೆ ಸಾಕಷ್ಟಿದ್ದು, ಮುಂದೆಯೂ ಅವರ ಸೇವೆಗೆ ನಾನು ಬದ್ಧವಾಗಿದ್ದೇನೆ ಎಂದು ಹೇಳಿದರು.

ಉತ್ತರ ಕರ್ನಾಟಕ ಭಾಗದ ಐದಾರು ಲಕ್ಷ ಜನರಿಗೆ ಉದ್ಯೋಗ ಕೊಡುವ ಆಸೆ ನನ್ನದು. ಅದನ್ನು ಮುಂದಿನ ದಿನಗಳಲ್ಲಿ ಮಾಡದೆ ಬಿಡುವುದಿಲ್ಲ. ಅದು ನನ್ನ ಮಹತ್ವದ ಬಯಕೆ ಕೂಡ. ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ನಮ್ಮ ತಂದೆ ಎಚ್‌.ಡಿ.ದೇವೇಗೌಡ ಅವರ ಕಾಲದಲ್ಲಿ ಆಲಮಟ್ಟಿಅಣೆಕಟ್ಟು ನಿರ್ಮಾಣವಾಗಿತ್ತು. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇವಲ ದಕ್ಷಿಣ ಕರ್ನಾಟಕಕ್ಕೆ ಮತ್ರ ಸೀಮಿತಗೊಳ್ಳದೆ ಉತ್ತರ ಕರ್ನಾಟಕ್ಕೂ ಸಾಕಷ್ಟುಮಹತ್ವದ ಯೋಜನೆಗಳನ್ನು ಜಾರಿಗೊಳಿಸಿ ಹೆಚ್ಚಿನ ಅನುದಾನ ನೀಡಿದ್ದೇನೆ. ಉತ್ತರ ಕರ್ನಾಟಕದ ಜನ ಯಾವುದೇ ಕಾರಣಕ್ಕೂ ನನ್ನನ್ನು ಬೇರೆಯವನನ್ನಾಗಿ ನೋಡಬೇಡಿ. ನಾನು ನಿಮ್ಮವನು, ನಿಮ್ಮ ಸೇವಕ ಎಂದರು.

ಹಾವು-ಮುಂಗುಸಿ ರಾಗಿಣಿ, ಸಂಜನಾ ಒಂದೇ ಕಟ್ಟಡದಲ್ಲಿ! ...

ಬೆಂಗಳೂರಿನ ಮೆಟ್ರೋಗೆ ಮೊದಲು 19 ಕಿಮೀಗೆ ಚಾಲನೆ ಕೊಟ್ಟವನು ನಾನು. ಹುಬ್ಬಳ್ಳಿಯಲ್ಲಿ ಹೈಕೋರ್ಟ್‌ ಸ್ಥಾಪನೆ ಮಾಡಿದ್ದ ಜೆಡಿಎಸ್‌ ಪಕ್ಷದ ಹೆಮ್ಮೆ. 30 ಜಿಲ್ಲೆಗಳಲ್ಲಿ ಜನಪದ ಜಾತ್ರೆ ಎನ್ನುವ ಕಾರ್ಯಕ್ರಮ ಆರಂಭಿಸಿದ್ದು ನಾನು. ಮುಂದಿನ ದಿನಗಳಲ್ಲಿ ಸಕಲರ ಸೇವೆಗೆ ನಾನು ಸಾದಾ ದುಡಿಯುತ್ತೇನೆ ಎಂದು ಹೇಳಿದರು

ಸಂವಾದ ಕಾರ್ಯಕ್ರಮದಲ್ಲಿ ಸಾಗರೋತ್ತರ ಕನ್ನಡಿಗರ ವೇದಿಕೆ ಅಧ್ಯಕ್ಷ ಚಂದ್ರಶೇಖರ ಲಿಂಗದಹಳ್ಳಿ, ಸಂಘಟನಾ ಕಾರ್ಯದರ್ಶಿ ಹೇಮೇಗೌಡ, ಖಜಾಂಚಿ ಬಸವಪಾಟೀಲ, ವಿಧಾನ ಪರಿಷತ್ತು ಸದಸ್ಯ ಬೋಜೇಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

PREV
click me!

Recommended Stories

ದುಬೈನಲ್ಲಿ 24 ಕೋಟಿ ಲಾಟರಿ ಗೆದ್ದ ಶಿವಮೊಗ್ಗದ ಶಿವಮೂರ್ತಿ
ಲಕ್ಷ್ಮೀ ಚಂಚಲೆ ಆಗಿದ್ದಾಳೆ, ಆದರೇ ನಾನು ಮಾತ್ರ ಸ್ಟೇಬಲ್ ಆಗಿದ್ದೇನೆ : ಬಿ.ಆರ್.ಶೆಟ್ಟಿ