ಮಾಸ್ಟರ್ ಪೀಸ್'ನನ್ನು ವರಿಸಿದ ಮೊಗ್ಗಿನ ಮನಸಿನ ಚಲುವೆ : ಡಿ.11ಕ್ಕೆ ಅಭಿಮಾನಿಗಳಿಗಾಗಿ ಆರತಕ್ಷತೆ

By Suvarna Web DeskFirst Published Dec 9, 2016, 1:35 PM IST
Highlights

ಮದುವೆಯಲ್ಲಿ ನಡೆಯಬೇಕಾದ ಅರಿಸಿನ ಶಾಸ್ತ್ರ, ಗೌರಿ ಪೂಜೆ, ಮುನೇಶ್ವನ ದೇವರಿಗೆ ಪೂಜೆ ಸೇರಿದಂತೆ ಎಲ್ಲ ಶಾಸ್ತ್ರಗಳನ್ನೂ ಅಚ್ಚುಕಟ್ಟಾಗಿಯೇ ನಿಭಾಯಿಸಲಾಗಿದೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ಮೊಗ್ಗಿನ ಮನಸಿನ ಚಲುವೆ ರಾಧಿಕಾ ಪಂಡಿತ್ ಮದುವೆ ಸಾಂಪ್ರದಾಯಕವಾಗಿಯೇ ಆಗಿದೆ. ಒಕ್ಕಲಿಗ ಮತ್ತು ಕೊಂಕಣಿ ಸಂಪ್ರದಾಯಂತೆ ಯಶ್ ರಾಧಿಕಾ ವಿವಾಹ ಆಗಿದ್ದಾರೆ. ಮದುವೆಯು ಸರಳ ಮತ್ತು ಸಾಂಪ್ರದಾಯಕವಾಗಿ ಗುರು-ಹಿರಿಯರ ಮುಂದೆ ನೆರವೇರಿದೆ.

ಸ್ಟಾರ್ ನಟರ ಮದುವೆ ಅದ್ಧೂರಿ ಆಗಿರುತ್ತವೆ. ಅದು  ಯಶ್ ಮತ್ತು ರಾಧಿಕಾ ವಿವಾಹದಲ್ಲೂ ಕಂಡು ಬಂತು. ಮದುವೆಯಲ್ಲಿ ನಡೆಯಬೇಕಾದ  ಅರಿಸಿನ ಶಾಸ್ತ್ರ, ಗೌರಿ ಪೂಜೆ, ಮುನೇಶ್ವರನ ದೇವರಿಗೆ ಪೂಜೆ ಸೇರಿದಂತೆ ಎಲ್ಲ ಶಾಸ್ತ್ರಗಳನ್ನೂ ಅಚ್ಚುಕಟ್ಟಾಗಿಯೇ ನಿಭಾಯಿಸಲಾಗಿದೆ.ರಾಧಿಕಾ ತಮ್ಮ ಇಷ್ಟದಂತೆ ಮದುವೆ ಆಗಿದ್ದಾರೆ. ನೆಚ್ಚಿನ ಸೋಮನಾಥಪುರ ದೇಗುಲ ಮಾದರಿಯ ಪಂಟಪದಲ್ಲಿಯೇ ವಿವಾಹ ಆಗಿದ್ದಾರೆ. ತುಂಬಾ ಇಷ್ಟಪಡೋ ಶಿವ-ಪಾರ್ವತಿ ದೇವರ ಮೂರ್ತಿಗಳ ಸಮ್ಮಖದಲ್ಲಿ  ಮದುವೆಯ ಎಲ್ಲ ಶಾಸ್ತ್ರಗಳನ್ನೂ ಮಾಡಿಕೊಂಡಿದ್ದಾರೆ.
12.37 ಕ್ಕೆ ಮಾಂಗಲ್ಯ ಧಾರಣೆ, ಸಪ್ತಪದಿ ತುಳಿದ ನವದಂಪತಿ
ಯಶ್-ರಾಧಿಕಾ ಮದುವೆ ವಿಶೇಷವೇ ಅನಿಸಿತು. ತಾಜ್ ವೆಸ್ಟ್ ಎಂಡ್​ ನಲ್ಲಿ ಹಾಕಲಾಗಿದ್ದ ಸೆಟ್ ಕೂಡ ಆ ಸಂಪ್ರದಾಯಕ್ಕೆ ಸಾಕ್ಷಿ ಎಂಬಂತಿತ್ತು.  ಬೆಳಿಗ್ಗೆ 12.37 ಕ್ಕೆ  ಅಭಿಜಿನ್ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಿತು ನಂತರ ನವದಂಪತಿ ಸಪ್ತಪದಿ ತುಳಿದರು.

ತಾರೆಯರು,ರಾಜಕಾರಣಿಗಳ ದಂಡು

ಯಶ್ -ರಾಧಿಕಾ ಪಂಡಿತ್ ಮದುವೆಗೆ ಸಿನಿಮಾ ತಾರೆಯರು ಹಾಗೂ ರಾಜಕಾರಣಿಗಳ ದಂಡೆ ಆಗಮಿಸಿತ್ತು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರವಿ ಚಂದ್ರನ್, ಸುದೀಪ್, ಶ್ರೀನಾಥ್, ದೊಡ್ಡಣ್ಣ, ಭಾರತಿ ವಿಷ್ಣುವರ್ಧನ್,ಗಿರಿಜಾ ಲೋಕೇಶ್, ಮುರುಳಿ ಹಾಗೂ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲನಂದ ಸ್ವಾಮೀಜಿ, ರಾಜಕಾರಣಿಗಳಾದ  ಎಸ್.ಎಂ.ಕೃಷ್ಣ, ಚೆಲುವ ರಾಯ ಸ್ವಾಮಿ, ಜಮೀರ್ ಅಹ್ಮದ್, ವಿ.ಸೋಮಣ್ಣ, ಹೆಚ್.ಸಿ. ಬಾಲಕೃಷ್ಣ, ಜಯ ಕರ್ನಾಟಕ ಸಂಘದ ಅಧ್ಯಕ್ಷ ಮುತ್ತಪ್ಪ ರೈ ಸೇರಿದಂತೆ ಹಲವರು ನವ ದಂಪತಿಗಳಿಗೆ ಆಶೀರ್ವದಿಸಿದರು.

2 ದಿನ  ಆರತಕ್ಷತೆ

ನಾಳೆ ಶನಿವಾರ ಸಂಜೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ  ತಾಂತ್ರಿಕ ವರ್ಗದವರಿಗೆ, ನಾಡಿದ್ದು ಭಾನುವಾರ ಅಭಿಮಾನಿಗಳಿಗಾಗಿ ಆರತಕ್ಷತೆ ನಡೆಯಲಿದೆ. ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ತಾರಾ ಜೋಡಿಗೆ ಶುಭವಾಗಲಿ. ನೂರು ಕಾಲ ಸು:ಖವಾಗಿರಲಿ ಅಂತ ನಾವೂ ಹರೆಸೋಣ.

click me!