ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡ ಪುನಾರಾಯ್ಕೆ

By Suvarna Web DeskFirst Published Dec 9, 2016, 12:53 PM IST
Highlights

1990ರಿಂದಲೂನಾನುರಾಷ್ಟ್ರೀಯರಾಜಕಾರಣನೋಡಿಕೊಂಡುಬರುತ್ತಿದ್ದೇನೆ. ಆದರೆಇಂದುರಾಷ್ಟ್ರದಲ್ಲಿ ನಡೆಯುತ್ತಿರುವಬೆಳವಣಿಗೆನೋಡಿಅನಿವಾರ್ಯವಾಗಿಅಧ್ಯಕ್ಷಹುದ್ದೆಸ್ವೀಕರಿಸುವಪರಿಸ್ಥಿತಿಬಂದಿದೆ.

ಬೆಂಗಳೂರು(ಡಿ.9): ಜೆಡಿಎಸ್'ನ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ ಪುನರಾಯ್ಕೆಯಾಗಿದ್ದಾರೆ. ಇಂದು ಜೆಡಿಎಸ್'ನ ರಾಷ್ಟ್ರೀಯ ಹಾಗೂ ರಾಜ್ಯ ಅಧ್ಯಕ್ಷರ ಕಾರ್ಯಕಾರಿ ಚುನಾವಣೆಯಲ್ಲಿ ದೇವೇಗೌಡರು ಮತ್ತೆ ಆಯ್ಕೆಯಾಗಿದ್ದಾರೆ. ನಂತರ ಮಾತನಾಡಿದ ಅವರು, 84 ವರ್ಷ ವಯಸ್ಸಿನ ನನಗೆ ಈ ಹುದ್ದೆ ಬೇಕಿರಲಿಲ್ಲ. ಇದು ನಿಜಕ್ಕೂ ನನಗೆ ಸಂಕಷ್ಟದ ಸಮಯ  ಇಂದಿನ ಬೆಳವಣಿಗೆಗಳಿಂದಾಗಿ ಈ ಹುದ್ದೆ ಸ್ವೀಕರಿಸಿದ್ದೇನೆ. ರಾಜಕಾರಣದಿಂದ ಪಲಾಯನ ಮಾಡುವುದು ನನಗೆ ಇಷ್ಟವಿಲ್ಲ. ನನ್ನ ರಾಜಕೀಯ ಅನುಭವವನ್ನು ಜನರ ಬಳಿ ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.

1990ರಿಂದಲೂ ನಾನು ರಾಷ್ಟ್ರೀಯ ರಾಜಕಾರಣ ನೋಡಿಕೊಂಡು ಬರುತ್ತಿದ್ದೇನೆ. ಆದರೆ ಇಂದು ರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿ ಅನಿವಾರ್ಯವಾಗಿ ಅಧ್ಯಕ್ಷ ಹುದ್ದೆ ಸ್ವೀಕರಿಸುವ ಪರಿಸ್ಥಿತಿ ಬಂದಿದೆ. ರಾಜಕಾರಣದಿಂದ ಪಲಾಯನ ಮಾಡುವುದು ನನಗೆ ಇಷ್ಟವಿಲ್ಲ. ಸಂಸದನಾಗಿ ಮತ್ತು ಪಕ್ಷದ ಅಧ್ಯಕ್ಷ ನಾಗಿ ನನ್ನ ಜವಬ್ದಾರಿ ನಿರ್ವಹಿಸುತ್ತೇನೆ. 55 ವರ್ಷದ ನನ್ನ ರಾಜಕೀಯ ಅನುಭವವನ್ನು ಜನರ ಬಳಿ ಹಂಚಿಕೊಳ್ಳುತ್ತೇನೆ. ಪ್ರಜಾಪ್ರಭುತ್ವದ ಈ ಪರಿಸ್ಥಿತಿಗೆ ಏನು ಕಾರಣ ಎಂಬುದನ್ನು  ತಿಳಿಸುತ್ತೇನೆ ಎಂದರು.

ಕೇಂದ್ರ ಸರ್ಕಾರದ ನೋಟ್ ಬ್ಯಾನ್ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಸರ್ಕಾರ ಅಥವಾ ಸಂಪುಟ ಸಭೆಯ ತೀರ್ಮಾನವೇ?ಆರ್ಥಿಕ ತಜ್ಞರ ಜೊತೆ ಚರ್ಚಿಸಿ ತೆಗೆದುಕೊಂಡ ತೀರ್ಮಾನವೇ?ಖಂಡಿತ ಇದು ಚರ್ಚಿಸಿ ಕೈಗೊಂಡ ತೀರ್ಮಾನ ಅಲ್ಲ. ಮೊಬೈಲ್​​​​​​ನಲ್ಲೇ ಬ್ಯಾಂಕಿಂಗ್ ಕೆಲಸ ಮಾಡಿ ಎಂದು ಹೇಳುತ್ತಾರೆ. ನಾನು ಆಡಳಿತ ನಡೆಸಿದವನು, ನನ್ನ ಮೊಬೈಲ್​​​​​​ನಲ್ಲೇ ಆ ವ್ಯವಸ್ಥೆ ಇಲ್ಲ.ಇನ್ನು ಜನಸಾಮಾನ್ಯರ ಬಳಿ ಹೇಗೆ ಇರೋಕೆ ಸಾಧ್ಯ ಕೇಂದ್ರದ ನಿರ್ಧಾರವನ್ನು ಖಂಡಿಸಿದರು.

click me!