
ಹಾಲಿವುಡ್ ಲೋಕಕ್ಕೆ ನುಗ್ಗಿರುವ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಈ ಇಬ್ಬರಲ್ಲಿ ಯಾರು ಹಾಟ್? ಯಾರು ಸೆಕ್ಸಿ? ಇದು ಅಭಿಮಾನಿಗಳಿಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಆದರೆ, ಪ್ರಿಯಾಂಕಾ ಚೋಪ್ರಾರನ್ನು ಹಿಂದಿಕ್ಕಿ ದೀಪಿಕಾ ಈಗ ‘ಸೆಕ್ಸಿಯೆಸ್ಟ್ ಮಹಿಳೆ’ ಎಂದು ಕರೆಸಿಕೊಂಡಿದ್ದಾರೆ. ಬ್ರಿಟನ್ ಮೂಲದ ‘ಈಸ್ಟರ್ನ್ ಐ’ ಪತ್ರಿಕೆಯ ಆಯ್ಕೆ ಇದಾಗಿದ್ದು, ದೀಪಿಕಾ ಲಕ್ಷಕ್ಕೂ ಅಧಿಕ ಮತಗಳನ್ನು ಸಂಪಾದಿಸಿದ್ದರು. ಮಜಾ ಅಂದ್ರೆ, ನಾಲ್ಕು ವರ್ಷದಿಂದ ಈ ಕ್ರೆಡಿಟ್ ಪ್ರಿಯಾಂಕಾ ಚೋಪ್ರಾಗೆ ಸಲ್ಲುತ್ತಿತ್ತು. ಇದೇ ಮೊದಲ ಬಾರಿಗೆ ದೀಪಿಕಾ ‘ಏಷ್ಯಾದ ಮಾದಕ ಮಹಿಳೆ’ಗೌರವಕ್ಕೆ ಪಾತ್ರರಾಗಿದ್ದಾರೆ. ಆಲಿಯಾ ಭಟ್, ಕತ್ರಿನಾ ಕೈಫ್, ಸೋನಂ ಕಪೂರ್‌ರನ್ನೂ ಹಿಂದಿಕ್ಕಿ ಈ ಹಿರಿಮೆಗೆ ಭಾಜನರಾಗಿದ್ದಾರೆ.
ಅಂದಹಾಗೆ, ಸೆಕ್ಸಿ ಎನ್ನುವುದಕ್ಕೆ ದೀಪಿಕಾ ಕೊಡುವ ವ್ಯಾಖ್ಯಾನವೇ ಬೇರೆ. ‘ಸೆಕ್ಸಿ ಎನ್ನುವುದು ಕೇವಲ ದೇಹ ಸೌಂದರ್ಯಕ್ಕೆ ಮೀಸಲಾಗಿರುವ ಪದ ಅಲ್ಲ. ಮುಗ್ಧತೆ, ವಿಶ್ವಾಸಾರ್ಹತೆಯನ್ನೂ ಅದು ಪ್ರತಿನಿಸುತ್ತದೆ’ಎನ್ನುತ್ತಾರೆ ದೀಪಿಕಾ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.