ಕೇರಳದ ಬೃಹತ್ ನಗ್ನ ಪ್ರತಿಮೆಗೆ ಕಂಚಿನ ಲೇಪನ

By Web DeskFirst Published Feb 3, 2019, 6:58 PM IST
Highlights

ಒಂದು ಕಾಲದಲ್ಲಿ ವ್ಯಾಪಕ ವಿರೋಧ ಕೇಳಿ  ಬಂದಿದ್ದ ಪ್ರತಿಮೆಗೆ ಈಗ ಕಂಚಿನ ಲೇಪನ ಸಿಗುತ್ತಿದೆ. ಹಾಗಾದರೆ ಕೇರಳದಲ್ಲಿರುವ ಈ ಪ್ರತಿಮೆ ಯಾವುದು? ವಿರೋಧ ಬಂದಿದ್ದಾದರೂ ಯಾಕೆ? 

ತಿರುವನಂತಪುರ[ಫೆ.03]  ಕೇರಳದ ನಗ್ನ ಮಹಿಳೆಯ ದೈತ್ಯ ಪ್ರತಿಮೆ ‘ಯಕ್ಷಿ’ಗೆ 50 ವರ್ಷವಾಗಿದ್ದು ಇದೀಗ ಕಂಚಿನ ಲೇಪನ ಪಡೆದುಕೊಳ್ಳಲು ಸಿದ್ಧವಾಗಿದೆ. ಪಾಲಕ್ಕಾಡ್ ಜಿಲ್ಲೆಯ ಮಲಂಪುಳದ ಉದ್ಯಾನದಲ್ಲಿ ಇರುವ ಈ ಪ್ರತಿಮೆ 1969ರಲ್ಲಿ ಹಿರಿಯ ಕಲಾವಿದ ಕನಯಿ ಕುಹ್ಹಿರಾಮನ್ ಅವರಿಂದ ಕೆತ್ತನೆಗೊಂಡು ನಿರ್ಮಾಣವಾಗಿದೆ.

‘ಯಕ್ಷಿ’ಯಲ್ಲಿರುವ ಮಹಿಳೆ, ತಲೆಗೂದಲನ್ನು ಹರಡಿಕೊಂಡು, ಕಾಲುಗಳನ್ನು ಚಾಚಿಕೊಂಡು, ಅರ್ಧ ಕಣ್ಣು ಮುಚ್ಚಿದ್ದು, ಪಶ್ಚಿಮಘಟ್ಟದ ಪರ್ವತ ಶ್ರೇಣಿಗಳತ್ತ ಮುಖ ಮಾಡಿ ಕುಳಿತಂದೆ ಇದೆ. ‘ಯಕ್ಷಿ’  ಎಂದರೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿ  ದೇವತೆ ಎಂದು ಕರೆಯಲಾಗುತ್ತದೆ.

ಶಬರಿಮಲೆ ದೇಗುಲಕ್ಕೆ ಪ್ರವೇಶ ಮಾಡಿದ ಮಹಿಳೆಯರ ಹಿನ್ನೆಲೆ ಏನು?

ಶಿಲ್ಪಿ ಕನಯಿ ಕುಹ್ಹಿರಾಮನ್ ಅವರಿಗೆ ಈಗ 81 ವರ್ಷ ವಯಸ್ಸಾಗಿದ್ದು, ಪ್ರತಿಮೆಯ ಪುನರುಜ್ಜೀವನ ಕೆಲಸದಲ್ಲಿ ನಿರತರಾಗಿದ್ದಾರೆ. ಮಧ್ಯ ಪ್ರದೇಶದ ಕುಜರಾಹೋ ದೇವಾಲಯಗಳು ಸೇರಿದಂತೆ ಭಾರತದ ಹಲವು ದೇವಾಲಯಗಳಲ್ಲಿ ನಗ್ನ ಪ್ರತಿಮೆಗಳಿವೆ.

click me!