ಬೆಂಗ್ಳೂರು ಉತ್ತರ: ಸದಾನಂದಗೌಡರ ಸೀಟಿಗೆ ಮತ್ತೋರ್ವ ಆಕಾಂಕ್ಷಿ

By Web DeskFirst Published Feb 3, 2019, 6:13 PM IST
Highlights

ರಾಜ್ಯ ಬಿಜೆಪಿಯಲ್ಲಿ ಶುರುವಾಯಿತು ಟಿಕೆಟ್​ ಫೈಟ್! ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಜೋರಾಯ್ತುು ಟಿಕೆಟ್ ಲಾಬಿ ! ಸದಾನಂದಗೌಡ್ರ ಸೀಟಿಗೆ ಟವೆಲ್ ಹಾಕಿದ ರಾಷ್ಟ್ರೀಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ! ಅಂತಿಮವಾಗಿ ಯಾರಾಗಲಿದ್ದಾರೆ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ..?

ಬೆಂಗಳೂರು, [ಫೆ.03]: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಲಾಬಿ ಜೋರಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಸಚಿವ ಡಿ.ವಿ ಸದಾನಂದಗೌಡ ಮತ್ತು ರಾಷ್ಟ್ರೀಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಡಾ. ಹೆಚ್.ಎನ್ ಚಂದ್ರಶೇಖರ್ ನಡುವೆ ಟಿಕೆಟ್​ಗಾಗಿ ಫೈಟ್​ ನಡೆದಿದೆ. 

ಡಿ.ವಿ. ಸದಾನಂದ ಗೌಡ ಚುನಾವಣಾ ಸ್ಪರ್ಧೆ ಎಲ್ಲಿಂದ..?

ಈಗಾಗಲೇ ಚಂದ್ರಶೇಖರ್ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ನಾಯಕರನ್ನ ಒತ್ತಾಯಿಸಿದ್ದಾರೆ. ಇನ್ನು ಚುನಾವಣೆಗೆ ಸ್ಪರ್ಧೆ ಕುರಿತಂತೆ ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಚಂದ್ರಶೇಖರ್, 'ನಾನೂ ಕೂಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ. 

ಡಿ.ವಿ.ಸದಾನಂದಗೌಡ ಹಾಲಿ ಸಂಸದರು, ಸಚಿವರಾಗಿದ್ದಾರೆ. ಆದರೆ, ನಾನು‌ ಕಳೆದ ಬಾರಿ ಕೂಡ ಪಕ್ಷದ ನಾಯಕರನ್ನು ಕೇಳಿದ್ದೆ. ಈ ಬಾರಿಯೂ ಟಿಕೆಟ್ ನೀಡುವಂತೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಲ್ಲಿ ಮನವಿ ಮಾಡಿದ್ದೇನೆ' ಎಂದು ಹೇಳಿದರು. 

ರಾಜಕೀಯ ಹುಟ್ಟು ನೀಡಿದ ಪುತ್ತೂರು ಕೊಂಡಿ ಕಳೆದುಕೊಂಡರೆ ಸದಾನಂದ ಗೌಡ?

ಆದ್ರೆ ಬೆಂಗಳೂರು ಉತ್ತರ ಟಿಕೆಟ್, ಹಾಲಿ ಸಂಸದ, ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ ಅವರಿಗೆ ನೀಡುವುದು ಬಹುತೇಕ ಖಚಿತವಾಗಿದೆ. ನೂರಕ್ಕೆ ನೂರು ಸದಾನಂದಾಗೌಡ ಅವರಿಗೆ  ಟಿಕೆಟ್.  ಒಂದು ವೇಳೆ ರಾಜಕೀಯ ಪರಿಸ್ಥಿತಿ ಬದಲಾದರೆ ಕೊನೆಗಳಿಗೆಯಲ್ಲಿ ಡಿವಿಎಸ್ ಗೆ ಟಿಕೆಟ್ ಕೈತಪ್ಪಿದರೂ ಆಶ್ಚರ್ಯ ಪಡಬೇಕಿಲ್ಲ.
 
ಇನ್ನೊಂದು ಪ್ರಮುಖ ವಿಷಯ ಅಂದರೆ ಇದೇ ಬೆಂಗಳೂರು ಉತ್ತರದಿಂದ ಮಾಜಿ ಪ್ರಧಾನಿ ದೇವೇಗೌಡ ಅವರು ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. 

ಒಂದು ವೇಳೆ ದೇವೇಗೌಡ ಅವರು ಸ್ಪರ್ಧೆ ಮಾಡಿದರೆ ಬಿಜೆಪಿ ಗೆಲುವು ಕಷ್ಟ ಸಾಧ್ಯ. ಯಾಕಂದ್ರೆ ಈ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ ಎದುರಿಸುತ್ತಿದ್ದು, ಎರಡು ಪಕ್ಷಗಳ ಮತಗಳು ಒಂದಾಗುತ್ತವೆ.

ಇನ್ನು ಕಾಂಗ್ರೆಸ್ ನಿಂದ ಎಚ್.ಎಂ. ರೇವಣ್ಣ ಕೂಡ ಬೆಂಗಳೂರು ಉತ್ತರ ಲೋಕಸಭಾ ಕ್ಚೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. 

click me!