ಆಲೂಗಡ್ಡೆ ಹಡಗಿನಲ್ಲಿ ಜರ್ಮನಿಗೆ ಸೇರಿದ ವರ್ಲ್ಡ್ ವಾರ್-1 ಗ್ರೆನೇಡ್ ಪತ್ತೆ!

By Web DeskFirst Published Feb 3, 2019, 5:07 PM IST
Highlights

ಹಡಗಿನಲ್ಲಿ ಮೊದಲ ವಿಶ್ವ ಯುದ್ಧದ ಗ್ರೆನೇಡ್ ಪತ್ತೆ| ಫ್ರಾನ್ಸ್‌ನಿಂದ ಹಾಂಕಾಂಗ್ ಗೆ ಬಂದಿದ್ದ ವ್ಯಾಪಾರಿ ಹಡಗು| ಫ್ರಾನ್ಸ್‌ನಿಂದ ಆಲೂಗಡ್ಡೆ ಹೊತ್ತು ತಂದಿದ್ದ ಹಡಗು| ನಗರದ ಹೊರವಲಯದ ಚರಂಡಿಯಲ್ಲಿ ಗ್ರೆನೇಡ್ ಸ್ಫೋಟಿಸಿದ ಪೊಲೀಸರು 
 

ಹಾಂಕಾಂಗ್(ಫೆ.03): ಫ್ರಾನ್ಸ್‌ನಿಂದ ಹಾಂಕಾಂಗ್‌ಗೆ ರಫ್ತಾಗಿದ್ದ ಆಲೂಗಡ್ಡೆ ಹಡಗಿನಲ್ಲಿ ಮೊದಲ ವಿಶ್ವ ಯುದ್ಧದ ಹ್ಯಾಂಡ್ ಗ್ರೆನೇಡ್‌ವೊಂದು ಪತ್ತೆಯಾಗಿದೆ. ಇಲ್ಲಿನ ಚಿಪ್ಸ್ ಫ್ಯಾಕ್ಟರಿಯೊಂದು ಫ್ರಾನ್ಸ್‌ನಿಂದ ಆಲೂಗಡ್ಡೆಗಳನ್ನು ಆಮದು ಮಾಡಿಕೊಂಡಿತ್ತು.

ಅದರಂತೆ ಫ್ರಾನ್ಸ್‌ನಿಂದ ಬಂದ ಗಡಗಿನಲ್ಲಿ ಈ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ. ಇದು ಮೊದಲ ವಿಶ್ವ ಯುದ್ಧದ ಕಾಲದಲ್ಲಿ ಜರ್ಮನಿಯಲ್ಲಿ ತಯಾರಿಸಲಾದ ಗ್ರೆನೇಡ್ ಎಂದು ಹೇಳಲಾಗಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿ, ಸ್ಥಳಕ್ಕೆ ಧಾವಿಸಿದ ಪೊಲೀಸರು ಗ್ರೆನೇಡ್‌ನ್ನು ವಶಕ್ಕೆ ಪಡೆದಿದ್ದಲ್ಲದೇ ಅದನ್ನು ನಗರದ ಹೊರವಲಯದ ಚರಂಡಿಯಲ್ಲಿ ಸ್ಫೋಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಗ್ರೆನೇಡ್ 8cm ಅಗಲ ಹಾಗೂ ಒಂದು ಕೆಜಿ ತೂಕವಿತ್ತು ಎಂದು ಹಾಂಕಾಂಗ್ ಪೊಲೀಸರು ಮಾಹಿತಿ ನೀಡಿದ್ದಾರೆ.

click me!