
ಕ್ಯಾಲಿಫೋರ್ನಿಯಾ(ನ.11): ಅಮೆರಿಕ ಕ್ಯಾಲಿಫೋರ್ನಿಯಾದ ಇತಿಹಾಸದಲ್ಲಿ ಕಂಡು ಕೇಳರಿಯದ ಕಾಳ್ಗಿಚ್ಚಿಗೆ ಇದುವರೆಗೆ 23 ಮಂದಿ ಬಲಿಯಾಗಿದ್ದಾರೆ.
ಉತ್ತರ ಕ್ಯಾಲಿಫೋರ್ನಿಯಾದ ಪರ್ವತ ನಗರಿ ಪ್ಯಾರಡೈಸ್ ನಲ್ಲಿ ಕಳೆದೆರಡು ದಿನಗಳಿಂದ ಭೀಕರ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು ಬಲವಾಗಿ ಬೀಸುವ ಗಾಳಿಯ ಕಾರಣ ಬೆಂಕಿಯ ಕೆನ್ನಾಲಿಗೆಗಳು ಅತಿ ವೇಗವಾಗಿ ಪಸರಿಸಿದೆ.
ಇದುವರೆಗೆ ವಿನಾಶಕಾರಿ ಕಾಳ್ಗಿಚ್ಚಿಗೆ ಸಿಕ್ಕಿದ 23 ಜನರ ದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾದ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೇ ಕಾಳ್ಗಿಚ್ಚಿಗೆ ಅಪಾರ ಪ್ರಮಾಣದ ಕಾಡು ಸುಟ್ಟು ಭಸ್ಮವಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಇದರ ಸಮೀಪದಲ್ಲೇ ಹಾಲಿವುಡ್ ಇದ್ದು, ಟಾಪ್ ಸೆಲಿಬ್ರಿಟಿಗಳೆಲ್ಲಾ ಮನೆ ತೊರೆದು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.