ಪತ್ನಿಗಾಗಿ ತಾಜ್ ಮಹಲ್ ನಿರ್ಮಿಸಿದ್ದ ಆಧುನಿಕ ಶಾಜಾನ್ ನಿಧನ

By Web DeskFirst Published Nov 11, 2018, 11:22 AM IST
Highlights

ಪತ್ನಿಯ ನೆನಪಿಗಾಗಿ ಪುಟ್ಟ ತಾಜ್ ಮಹಲ್ ಪ್ರತಿಕೃತಿ ನಿರ್ಮಿಸಿ ಖ್ಯಾತಿ ಪಡೆದಿದ್ದ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ನಿವೃತ್ತ ಪೋಸ್ಟ್ ಮಾಸ್ಟರ್ ಫೈಜುಲ್ ಹಸನ್ ಖಾದ್ರಿ  ರಸ್ತೆ ಅಪಘಾತವೊಂದರಲ್ಲಿ  ನಿಧನರಾಗಿದ್ದಾರೆ. 

ಘಾಜಿಯಾಬಾದ್: ಅಗಲಿದ ಪತ್ನಿಯ ನೆನಪಿಗಾಗಿ ಪುಟ್ಟ ತಾಜ್ ಮಹಲ್ ಪ್ರತಿಕೃತಿ ನಿರ್ಮಿಸಿ ಖ್ಯಾತಿ ಪಡೆದಿದ್ದ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ನಿವೃತ್ತ ಪೋಸ್ಟ್ ಮಾಸ್ಟರ್ ಫೈಜುಲ್ ಹಸನ್ ಖಾದ್ರಿ (83), ರಸ್ತೆ ಅಪಘಾತವೊಂದರಲ್ಲಿ ಶುಕ್ರವಾರ ನಿಧನರಾಗಿದ್ದಾರೆ. 

2011 ರಲ್ಲಿ ಪತ್ನಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಬಳಿಕ ಪಿಂಚಣಿ ಹಣ ಹಾಗೂ ಜಮೀನು ಮಾರಿ ಕಾಸೆರ್ ಕಲಾನ್ ಗ್ರಾಮದ ತಮ್ಮ ಮನೆಯ ಸಮೀಪ ಪತ್ನಿಯ ಸಮಾಧಿಯ ಮೇಲೆ ಇಟ್ಟಿಗೆ ಹಾಗೂ ಸಿಮೆಂಟ್‌ನಿಂದ 5,500 ಚದರ ಅಡಿ ಪ್ರದೇಶದಲ್ಲಿ ಪುಟ್ಟದಾದ ತಾಜ್ ಮಹಲ್ ಮಾದರಿ ಗೋರಿಯನ್ನು ಖಾದ್ರಿ ನಿರ್ಮಿಸಿದ್ದರು. 

ಇದೀಗ ಅವರ ಆಸೆಯಂತೆ ಪತ್ನಿಯ ಸಮಾಧಿ ಪಕ್ಕದಲ್ಲೇ ಖಾದ್ರಿ ಅವರ ದೇಹವನ್ನು ಸಮಾಧಿ ಮಾಡಲಾಗಿದೆ.

click me!