(ವಿಡಿಯೋ)ದಡೂತಿ ಮಹಿಳೆಯ ತೂಕ ಇಳಿದಿಲ್ವಂತೆ!: ಎಮನ್ ಸಹೋದರಿ ಬಿಚ್ಚಿಟ್ಟ ಸತ್ಯ!

Published : Apr 25, 2017, 04:24 AM ISTUpdated : Apr 11, 2018, 12:47 PM IST
(ವಿಡಿಯೋ)ದಡೂತಿ ಮಹಿಳೆಯ ತೂಕ ಇಳಿದಿಲ್ವಂತೆ!: ಎಮನ್ ಸಹೋದರಿ ಬಿಚ್ಚಿಟ್ಟ ಸತ್ಯ!

ಸಾರಾಂಶ

ದಡೂತಿ ಮಹಿಳೆ ಎಮನ್ ಅಹ್ಮದ್ ಪ್ರಕರಣ ವೈದ್ಯ ಲೋಕಕ್ಕೇ ಸವಾಲೆಸೆದಿತ್ತು. ಆದರೆ ಈ ಸವಾಲನ್ನು ಸ್ವೀಕರಿಸಿದ ಮುಂಬೈ ಆಸ್ಪತ್ರೆಯೊಂದರ ವೈದ್ಯರು ಈಕೆಗೆ ಚಿಕಿತ್ಸೆ ನೀಡಿ ತೂಕ ಕಡಿಮೆಯಾಗುವಂತೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದರು. ಇದರಂತೆ ಎಮನ್'ಳನ್ನು ಮುಂಬೈಗೆ ಕರೆತರಿಸಿ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತಲ್ಲದೇ ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯ ವೈದ್ಯರು ಯಮನ್ ಒಬರೋಬ್ಬರಿ 250 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಅಧಿಕೃತ ಹೇಳಿಕೆ ನೀಡಿದ್ದರು. ಆದರೀಗ ವೈದ್ಯರ ವರದಿಗಳೆಲ್ಲಾ ಸುಳ್ಳು, ಎಮನ್ ತೂಕ ಇಳಿದಿಲ್ಲ ಎಂದು ಆಕೆಯ ಸಹೋದರಿ ವಿಡಿಯೋ ಒಂದರ ಮೂಲಕ  ದೂರಿದ್ದಾರೆ

ಈಜಿಪ್ಟ್(ಎ.25): ದಡೂತಿ ಮಹಿಳೆ ಎಮನ್ ಅಹ್ಮದ್ ಪ್ರಕರಣ ವೈದ್ಯ ಲೋಕಕ್ಕೇ ಸವಾಲೆಸೆದಿತ್ತು. ಆದರೆ ಈ ಸವಾಲನ್ನು ಸ್ವೀಕರಿಸಿದ ಮುಂಬೈ ಆಸ್ಪತ್ರೆಯೊಂದರ ವೈದ್ಯರು ಈಕೆಗೆ ಚಿಕಿತ್ಸೆ ನೀಡಿ ತೂಕ ಕಡಿಮೆಯಾಗುವಂತೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದರು. ಇದರಂತೆ ಎಮನ್'ಳನ್ನು ಮುಂಬೈಗೆ ಕರೆತರಿಸಿ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತಲ್ಲದೇ ನಾಲ್ಕು ದಿನಗಳ ಹಿಂದಷ್ಟೇ ಆಸ್ಪತ್ರೆಯ ವೈದ್ಯರು ಯಮನ್ ಒಬರೋಬ್ಬರಿ 250 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಅಧಿಕೃತ ಹೇಳಿಕೆ ನೀಡಿದ್ದರು. ಆದರೀಗ ವೈದ್ಯರ ವರದಿಗಳೆಲ್ಲಾ ಸುಳ್ಳು, ಎಮನ್ ತೂಕ ಇಳಿದಿಲ್ಲ ಎಂದು ಆಕೆಯ ಸಹೋದರಿ ವಿಡಿಯೋ ಒಂದರ ಮೂಲಕ  ದೂರಿದ್ದಾರೆ

ಎಮನ್ ಅಹ್ಮದ್ ಸಹೋದರಿ ಸೈಮ್ಮಾ ವಿಡಿಯೋವೊಂದನ್ನು ಬಿಡುಗಡೆ ಮಾಡಿ ವೈದ್ಯರ ವರದಿಗಳೆಲ್ಲಾ ಸುಳ್ಳು , ಎಮನ್​ಗೆ ಚಿಕಿತ್ಸೆ ನಡೆಯುತ್ತಿದೆ ಆದರೆ ಎಮನ್​​ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಅವಳು ಮೊದಲಿನಂತೆಯೇ ಇದ್ದಾಳೆ ಎಂದು ತಿಳಿಸಿದ್ದಾಳೆ ಅಲ್ಲದೇ ಆಸ್ಪತ್ರೆ ಕೋಣೆಯೊಳಗಿನ ದೃಶ್ಯವನ್ನೂ ತೋರಿಸಿದ್ದಾಳೆ.

ಇತ್ತ ವೈದ್ಯರು ಮಾತ್ರ ಎಮನ್​ ಸಹೋದರಿ ಮಾಡಿರುವ ಆರೋಪವನ್ನು ತಿರಸ್ಕರಿಸಿದ್ದಾರೆ. ಎಮನ್​​ ಸಹೋದರಿ ಬೇಕಂತಲೇ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಎಮನ್ ಈಜಿಪ್ಟ್'ಗೆ ಮರಳಿ ಹೋಗುವುದು ಇಷ್ಟವಿಲ್ಲ. ಆರ್ಥಿಕ ಕಾರಣಗಳಿಂದಾಗಿ ಈ ರೀತಿ  ಆರೋಪ ಮಾಡುತ್ತಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೌಡಿಯೊಂದಿಗೆ ಬರ್ತಡೇ ಪಾರ್ಟಿ ಮಾಡಿಕೊಂಡ ಪಿಎಸ್‌ಐ ನಾಗರಾಜ್; ಸಸ್ಪೆಂಡ್ ನೋಟೀಸ್ ಕಳಿಸಿದ ಕಮೀಷನರ್!
ಮಂಡ್ಯ: 'ರಾಮ-ಲಕ್ಷಣ' ನಾಣ್ಯದ ಹೆಸರಲ್ಲಿ ವಂಚನೆಗೆ ಯತ್ನ; ಇಬ್ಬರು ವಂಚಕರಿಗೆ ಬಿತ್ತು ಗೂಸಾ!