ಶಾಲಾ ಪಠ್ಯದಲ್ಲಿ ಡಾ. ರಾಜ್ ಜೀವನ ಚರಿತ್ರೆ: ಪರಮೇಶ್ವರ್

By Suvarna Web DeskFirst Published Apr 25, 2017, 3:22 AM IST
Highlights

ಸೋಮವಾರ ಬೆಂಗಳೂರಿನ ಕಂಠೀರವ ಆವರಣದಲ್ಲಿ ರಾಜ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಜ್ ಕುಮಾರ ಕನ್ನಡದ ಕಣ್ಮಣಿ. ಅವರ ಬದುಕೇ ವಿಶೇಷ. ಅವರು ಭಾರತೀಯ ಚಿತ್ರರಂಗ ಕಂಡ ಅಪರೂಪದ ಕಲಾವಿದ ಅವರ ವ್ಯಕ್ತಿತ್ವ ಎಲ್ಲಾ ಕಾಲದ ಯುವಜನರಿಗೆ ಆದರ್ಶಯುತವಾದದ್ದು. ಈ ಹಿನ್ನೆಲೆಯಲ್ಲಿ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವ ಅಗತ್ಯವಿದೆ. ಈ ಸಂಬಂಧ ತಾವು ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.

ಬೆಂಗಳೂರು(ಎ.25): ಬರುವ ವರ್ಷದಿಂದ ರಾಜ್ಯದ ಶಾಲಾ ಪಠ್ಯ ಪುಸ್ತಕದಲ್ಲಿ ಡಾ. ರಾಜ್ ಕುಮಾರ್ ಜೀವನ ಚರಿತ್ರೆಯನ್ನು ಪಠ್ಯವಾಗಿ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

click me!