
ಹಾಸನ(ಎ.25): ಒಂದು ಕಾಲದ ಆಪ್ತರಾಗಿದ್ದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಮತ್ತೆ ಪರಸ್ಪರ ಹತ್ತಿರವಾಗುತ್ತಿದ್ದಾರೆಯೇ?
ರಾಜ್ಯದ ಜನತೆಯನ್ನು ಕಳೆದ ಕೆಲ ದಿನಗಳಿಂದ ಕಾಡುತ್ತಿರುವ ಈ ಪ್ರಶ್ನೆಗೆ ಉತ್ತರವೋ ಎಂಬಂತೆ ಶ್ರವಣಬೆಳಗೊಳದಲ್ಲಿ ಸೋಮವಾರ ನಡೆದ ಕೆಲ ಕ್ಷಣಗಳು ಸಾಕ್ಷಿಯಾದವು. ಇಬ್ಬರೂ ಹಳೇದೋಸ್ತಿಗ ಳಂತೆ ಚರ್ಚಿಸಿದ್ದು, ನಿರ್ಗಮಿಸುವ ವೇಳೆ ದೇವೇ ಗೌಡರು ಸಿದ್ದರಾಮಯ್ಯ ಅವರ ಹೆಗಲ ಮೇಲೆ ಕೈಹಾಕಿ ಮಾತನಾಡಿದ್ದು ನೆರೆದವರನ್ನು ಅಚ್ಚರಿಗೀಡು ಮಾಡಿದ್ದು ಸುಳ್ಳಲ್ಲ. ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಸಿದ್ದರಾಮಯ್ಯ ನೇರವಾಗಿ ಪ್ರವಾಸಿ ಮಂದಿರಕ್ಕೆ ಸಾಗಿ ಅಲ್ಲಿ ಗೌಡರನ್ನು ಭೇಟಿ ಆಗಿ ಸುಮಾರು 12 ನಿಮಿಷ ಮಾತನಾಡಿದರು. ಈ ವೇಳೆ ಇಬ್ಬರೂ ಭಾರಿ ಅನ್ಯೋ ನ್ಯವಾಗಿದ್ದದ್ದು ಅಲ್ಲಿದ್ದವರನ್ನು ಅಚ್ಚರಿಗೊಳಿಸಿತು.
ನಂತರ ಮಹಾ ಮಸ್ತಕಾಭಿಷೇಕಕ್ಕೆ ಪೂರ್ವಭಾವಿ ಯಾಗಿ .71 ಕೋಟಿ ಮೊತ್ತ ನಾನಾ ಕಾಮಗಾರಿಗಳಿಗೆ ಒಟ್ಟಿಗೆ ಚಾಲನೆ ನೀಡಿ ಒಂದೇ ವೇದಿಕೆಯಲ್ಲಿ ಇಲ್ಲಿನ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಎಡಕ್ಕೆ ಬಲಕ್ಕೆ ಇಬ್ಬರು ಕುಳಿತರು. ಈ ವೇಳೆ ಭಟ್ಟಾರಕ ಸ್ವಾಮೀಜಿಯ ನಡುವೆಯೇ ಇಬ್ಬರು ಸುಮಾರು ಸಮಯ ಮಾತನಾಡಿದರು. ಕಾರ‍್ಯಕ್ರಮದ ಉದ್ಘಾಟನೆ ವೇಳೆ ಸಿದ್ದರಾಮಯ್ಯನವರ ಕೈ ಹಿಡಿದು ಗೌಡರು ಸಹಕರಿಸಿದರು.
ಈ ವೇದಿಕೆಯಲ್ಲಿ ಬೆಂಗಳೂರು- ಶ್ರವಣಬೆಳಗೊಳ - ಹಾಸನ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ಕಾರಣರಾದ ದೇವೇಗೌಡರನ್ನು ಮತ್ತು ಸರ್ಕಾರದಿಂ ದಲೇ ಮಹಾವೀರ ಜಯಂತಿ ಮತ್ತು ಮಹಾವೀರ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದ್ದಕ್ಕಾಗಿ ಸಿದ್ದರಾ ಮಯ್ಯ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ನಂತರ ಭಾಷಣದಲ್ಲಿ ಇಬ್ಬರೂ ನಾಯಕರು ಪರಸ್ಪರ ಹೊಗಳಿಕೊಂಡಿದರು.
ಎಲ್ಲವೂ ವಿಧಿಯಾಟ: ಗೌಡರು ಮಾತನಾಡಿ, ನಾನು ಸಿದ್ದರಾಮಯ್ಯನವರು ಒಟ್ಟಿಗೆ ಕೆಲಸ ಮಾಡಿದ್ದೀವಿ. ನಿಜ ಹೇಳಬೇಕೆಂದರೆ ಹಾಸನ- ಬೆಂಗಳೂರು ರೈಲು ಮಾರ್ಗಕ್ಕೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ರಾಜ್ಯ ಸರ್ಕಾರದಿಂದ ಶೇ.50 ರಷ್ಟುಹಣ ನೀಡಬೇಕಿತ್ತು. ಹಿಂದೆ ಭಾರಿ ವಿಳಂಬ ಮಾಡಲಾಗಿತ್ತು. ಆದರೆ ಸಿದ್ದರಾಮಯ್ಯನವರು ಬೇಗ ಹಣ ನೀಡಿದರು. ನಾನು ಸಿದ್ದರಾಮಯ್ಯಬೇರೆ ಆಗಿದ್ದು ನಿಜ. ಈಗ ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಾಗುತ್ತಿದೆ. ಎಲ್ಲವೂ ವಿಧಿಯಾಟ ಎಂದು ಹೇಳಿದರು.
ಇಬ್ಬರೂ ಚರ್ಚಿಸಿಯೇ ಹೆಸರಿಟ್ಟೆವು: ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರು- ಶ್ರವಣಬೆಳ ಗೊಳ- ಹಾಸನ ನಡುವೆ ಈಗ ಸಂಚರಿಸುತ್ತಿರುವ ರೈಲಿಗೆ ಗೊಮ್ಮಟೇಶ್ವರ ಎಂದು ನಾನು ಗೌಡರು ಚರ್ಚಿಸಿಯೇ ಹೆಸರಿಟ್ಟೆವು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.